ಮನೆ ಯೋಗಾಸನ ಬಂಧತ್ರಯಗಳು ಮತ್ತು ಮುದ್ರಾ ಕ್ರಿಯೆಗಳು-14    

ಬಂಧತ್ರಯಗಳು ಮತ್ತು ಮುದ್ರಾ ಕ್ರಿಯೆಗಳು-14    

0

ಬಂಧಗಳು :

ದೈಹಿಕ ಕ್ರಿಯೆಗಳ ನಿಯಂತ್ರಣ ಈ ಬಂಧಗಳು ಮತ್ತು ಮುದ್ರೆಗಳಿಂದ ಮಾತ್ರ ಸಾಧ್ಯ. ಪ್ರಾಣಾಯಾಮದ ಮೂಲಕ ದೇಹದಾದ್ಯಂತ ಪ್ರಾಣಶಕ್ತಿಯನ್ನು ಹರಿಸುವಾಗ ಅವುಗಳು ವ್ಯರ್ಥವಾಗದಂತೆ ಕಾಪಾಡುವ ಅಡೆ-ತಡೆ ಅಥವಾ ತೊಂದರೆಇಲ್ಲದಂತೆ ನಿಗದಿತ ಸ್ಥಾನಗಳಿಗೆ ಕೊಂಡೊಯ್ಯುವ ಅತ್ಯವಶ್ಯಕ ವ್ಯವಸ್ಥೆ. ಈ ಬಂಧನಗಳಿಂದ ನಡೆಯುವುದು, ಬಂಧನಗಳಿಲ್ಲದೆ ಪ್ರಾಣಾಯಾಮವನ್ನು ಅಭ್ಯಾಸದಲ್ಲಿ ಪ್ರಾಣಶಕ್ತಿಯ ಪ್ರವಾಹಕ್ಕೆ ಅಡ್ಡಿಯಾಗಿ, ನರಮಂಡಲಗಳಿಗೆ ಹಾನಿ ಉಂಟಾಗುತ್ತದೆ. ಮತ್ತು ಪ್ರಾಣಶಕ್ತಿ ಸೋರಿ ಹೋಗಬಹುದು ಈ ಬಂಧನಗಳಲ್ಲಿ ಮುಖ್ಯವಾದವುಗಳು. 

  1. ಜಲಂಧರ ಬಂಧ 2.ಉಡ್ಡಿಯಾನ ಬಂಧ 3. ಮೂಲ ಬಂಧಗಳು.

ಆಯಾ ಸಂದರ್ಭಗಳಲ್ಲಿ ತಿಳಿಸಿದ ಬಂದಗಳ ಜೊತೆಗೆ ಮುದ್ರೆಗಳನ್ನು ಸೇರಿಸಿಕೊಳ್ಳುತ್ತಾ, ಪ್ರಾಣಾಯಾಮಗಳನ್ನು ಮಾಡುವುದರಿಂದ ಮೇಲೆ ವಿವರಿಸಿರುವ ಸಮಸ್ತ ನಾಡಿಗಳು ಮತ್ತು ಚಕ್ರಗಳಿಗೆ ಅಧಿಕ ಪ್ರಮಾಣದಲ್ಲಿ ಪ್ರಾಣಶಕ್ತಿ ದೊರೆತು, ಪ್ರಾಣಾಯಾಮದ ಶೀಘ್ರ ಪರಿಣಾಮ ಸಾಧಕರಿಗೆ ಲಭ್ಯವಾಗುವವು. ಅಷ್ಟೇ ಅಲ್ಲ ಸಪ್ತ ಕುಂಡಲಿನಿ ಶಕ್ತಿಯನ್ನು ಪ್ರಾಣಾಯಾಮದ ಮೂಲಕ ಜಾಗೃತಗೊಳಿಸುವಾಗ ಆ ಚೈತನ್ಯವನ್ನು ಸುಷುಮ್ನಾ ನಾಡಿಗೆ ಕಳುಹಿಸುವಾಗ ಮತ್ತು ಸಮಾಧಿಸ್ಥಿತಿಯನ್ನು ಅನುಭವಿಸುವಾಗಲು ಬಂಧಗಳು ಅವಶ್ಯಕತವೆಂದು ಹೇಳಲಾಗುತ್ತದೆ.

1. ಜಲಂಧರ  ಬಂಧ :

(ಜಾಲೆ-ಬಲೆ) ಸಿದ್ದಾಸನ, ಸ್ವಸ್ತಿಕಾಸನ, ಭದ್ರಾಸನ, ವೀರಸನ, ಬದ್ಧಕೋನಸನ, ಪದ್ಮಾಸನ, ಇತ್ಯಾದಿ ಯಾವುದಾದರೂ ಸರಿ ಸರಿಯಾಗಿ ಕುಳಿತುಕೊಳ್ಳಿ ಬೆನ್ನು ನೇರವಾಗಿರಲಿ ಎದೆ ಮೂಳೆ ಮತ್ತು ಪಕ್ಕೆಲವು ಶ್ವಾಸಕೋಶಗಳ ಮುಂಭಾಗವನ್ನು ಮೇಲೆತ್ತಿ ಹೆಚ್ಚು ಕಷ್ಟ ಪಡದೆ ಕತ್ತನ್ನು ನೀಡ ಮಾಡಿ, ಭುಜಕೀರ್ತಿಗಳನ್ನು ದೇಹದ ಒಳಗೆ ಎಳೆಯಿರಿ ಮತ್ತು ಸಡಿಲ ಬಿಡಿರಿ. ಮುಂಡ ಹಾಗೂ ಗಂಟಾಗದ ಬೆನ್ನು ಹುಲಿಯ ಸೆಳೆದಿಟ್ಟು ತಲೆಯನ್ನು ಕತ್ತಿನ ಹಿಂಭಾಗದ ಎದೆಯ ಕಡೆಗೆ ಮುಂದಕ್ಕೆ ಕೆಳಕ್ಕೆ ಬಗ್ಗಿಸಬೇಕು. ಗಂಟಲು ಮತ್ತು ಕಂಠದ ಮಾಂಸ ಖಂಡಗಳನ್ನು ಕುಗ್ಗಿಸಕೂಡದು ಅದನ್ನು ಮುಂದಕ್ಕೆ ಕೆಳಕ್ಕೆ ಹಿಂದಕ್ಕೆ ಜಗ್ಗ ಕೂಡದು. ಗಂಟಲಿನ ಮಾಂಸ ಖಂಡಗಳಲ್ಲಿ ಎಳೆತವಿಲ್ಲದ ಶಾಂತಸ್ಥಿತಿ ಮೂಡಲಿ ದವಡೆಯ ಮೂಳೆಗಳು ಎದೆಯ ಮೇಲ್ಭಾಗದ ಕಾಲರ್ ಬೋನ್ಗಳ ತಗ್ಗಿನಲ್ಲಿ ಶಾಂತವಾಗಿ ವಿಶ್ರಮಿಸಲು ಅನುವಾಗುವಂತೆ ತುಸುಮುಂದಕ್ಕೆ ಬಗ್ಗಿಸಿ. ಕತ್ತು ಮತ್ತು ಗದ್ದವನ್ನು ಆ ಕಡೆ ಈ ಕಡೆ ಬಗ್ಗಿಸಬೇಡಿ. ಅದರಿಂದ ಆಗಬಹುದಾದ ನೋವು ಎಳೆತಗಳು ಬಹುದಿನದ ಕಾಲ ಉಳಿಯುವ ಸಂಭವವಿದೆ. ಸ್ಥಾಪಕತ್ವ ಹೆಚ್ಚಾದ ಮೇಲೆ ಕತ್ತುತಾನೆ ತಾನಾಗಿ ಹೆಚ್ಚು ಬಗ್ಗುತ್ತದೆ ಗದ್ದವನ್ನು ಎದೆಗೆ ಬಲವಂತವಾಗಿ ಒತ್ತಬೇಡಿ ಬದಲಾಗಿ ಕೆಳಬಾಗುತ್ತಿರುವ ಗದ್ದಲ ಹತ್ತಿರ ಬರುವಂತೆ ಎದೆಯನ್ನು ಮೇಲಕ್ಕೆ ಎಳೆಯಿರಿ ಅಥವಾ ಎತ್ತಿರಿ. (ಆರಂಭದಲ್ಲಿ ಬೇಕಾದರೆ ಚಿಕ್ಕದೊಂದು ಮಡಿಸಿದ ಬಟ್ಟೆಯ ದಪ್ಪನೆಯ ತುಂಡನ್ನು ಗದ್ದ ಮತ್ತು ಎದೆ ಮೇಲೆ ನಡುವೆ ಇಟ್ಟುಕೊಳ್ಳಬಹುದು) ಗದ್ದವು ಎದೆಯ ಮೇಲೆ ವಿಶ್ರಮಿಸುತ್ತಿರುವಾಗ ಪಕ್ಕೆಲುಬುಗಳನ್ನು ತಗ್ಗು ಮಾಡಬೇಡಿ,, ಕಪೋಲ ಭಾಗ ಸಡಿಲವಾಗಿರಿ ಕಣ್ಣು ಕಿವಿಗಳನ್ನು ನಿಶ್ಚಲವಾಗಿರಲಿ ಇದುವೇ ಜಲಂಧರ ಬಂಧ.

ಪರಿಣಾಮ  :

ಉಸಿರಾಟ ಸಲೀಸಾಗುವುದಲ್ಲದೆ ಸೌರ ಜಾಲ (solar plexus-ಸೋಲಾರ್ ಫ್ಲೆಕ್ಸಸ್) ಹೊಟ್ಟೆಯ ಕುಳಿಗಳ ನರಗಳು ಅಥವಾ ಬಾಲಗಳು ಸೊಂಟದ ಮಧ್ಯ ಭಾಗದಲ್ಲಿದ್ದು, ಅವು ಇರುವುದನ್ನು ಅನ್ನವನ್ನು ಆರಗಿಸಿ ಶಾಖವನ್ನು ಉತ್ಪಾದಿಸುವ ಜಠರಾಗ್ನಿ ಅಥವಾ ಪಾಚಕಾಗ್ನಿಯ ಸ್ಥಳದಲ್ಲಿ ಅಂತೆಯೇ ಚಂದ್ರಜಾಲ ಫ್ಲೆಕ್ಸಸ್ ತಲೆಯಲ್ಲಿ ಮೆದುಳಿನ ಮಧ್ಯಭಾಗದಲ್ಲಿದೆ. ಅದು ಮನಶಾಂತಿ ನೀಡುವ ಸ್ಥಳ ಇದರಲ್ಲಿ ತಣ್ಣಗಿರುವ ರಸಗಳು ಅಪವ್ಯಯವಾಗದಂತೆ ಹೊಟ್ಟೆಯ ಕುಡಿಗಳ ನರಗಳು ಉತ್ಪಾದಿಸುವ ಉಷ್ಣಾಂಶದಿಂದ ಇಂಗಿ ಹೋಗದಂತೆ, ಕತ್ತಿನ ನಾಡಿಗಳನ್ನು ಬಿಗಿಗೊಳಿಸಿ ಜಲಂಧರ ಬಂಧವು ತಡೆಯುತ್ತದೆ. “ಜೀವನ ಸಂಜೀವಿನಿ” ಎನಿಸಿದ ಈ ಚೈತನ್ಯ ಶಕ್ತಿಯು ಕಾಪಾಡಲ್ಪಡುವುದರಿಂದ ದೀರ್ಘಾಯಸ್ಸು ಲಭ್ಯ. ಜೊತೆಗೆ ಈ ಬಂಧವು “ಇಡಾ” ಮತ್ತು “ಪಿಂಗಳ” ನಾಡಿಗಳನ್ನು ಒತ್ತಿಹಿಡಿಯುತ್ತದೆ ಮತ್ತು ಸುಷ್ಮಾ ನಾಡಿಗೆ ಪ್ರಾಣಶಕ್ತಿ ಹರಿಯಲು ಸಹಾಯಕವಾಗುತ್ತದೆ ಎಂದು ಹೇಳಲಾಗುತ್ತದೆ. ಮೂಗಿನ ಹುಳ್ಳೆಗಳ ಅಡೆತಡೆಗಳನ್ನು ನಿವಾರಿಸಿ ಹೃದಯ ಮತ್ತು ತಲೆ ಮತ್ತು ಗಂಟಲಿನ ಥೈರಾಯ್ಡ್ ಮತ್ತು ಪ್ಯಾರಾಥೈರಾಯ್ಡ್ ಗ್ರಂಥಿಗಳು ರಕ್ತ ಮತ್ತು ಪ್ರಾಣಶಕ್ತಿ ಗಳನ್ನು ಹರಿಸುವ ಜಲಂಧರಬಂಧವು ಪ್ರಾಣಶಕ್ತಿಯನ್ನು ನೀಡುತ್ತದೆ… ಜಾಲಂಧರ ಬಂಧರಹಿತ ಪ್ರಾಣಾಯಾಮದಿಂದ ಹೃದಯ, ಮೆದುಳು, ಕಣ್ಣುಗುಡ್ಡೆಗಳು, ಕಿವಿಯ ಒಳಭಾಗ, ಇವುಗಳಲ್ಲಿ ಒತ್ತಡದಿಂದಾಗಿ ತಲೆಸುತ್ತು ತಲೆ ತಿರುವು ಸಂಭವಿಸಬಹುದಾಗಿದೆ. ಈ ಬಂಧವು ಮೆದುಳಿಗೆ ವಿಶ್ರಾಂತಿ ನೀಡುವುದಲ್ಲದೆ ಮನ ಬುದ್ಧಿಗಳ ಅಹಂಕಾರವನ್ನು ಹತೋಟಿಯಲ್ಲಿಡುವುದು ಕೂಡ ಸಹಕಾರಿಯಾಗಿದೆ. ಆದ್ದರಿಂದ ಇದನ್ನು ಸಾಧ್ಯವಿದಷ್ಟು ಎಲ್ಲಾ ವಿಧದ ಅದರಲ್ಲೂ ʼಸಾಮಾನ್ಯʼ ಮತ್ತು ʼನಾಡಿಶೋಧನʼ ಪ್ರಾಣಾಯಾಮಗಳಲ್ಲಂತೂ ಮಾಡಬೇಕು.

ಮುಂದುವರೆಯುತ್ತದೆ…..