ಮನೆ ಆರೋಗ್ಯ ವ್ಯಾಕ್ಸೀನ್ ಗಳ ಬಗ್ಗೆ ಅರಿವು

ವ್ಯಾಕ್ಸೀನ್ ಗಳ ಬಗ್ಗೆ ಅರಿವು

0

ತಾಯಿ ಹಾಲು:-     

ತಾಯಿ ಹಾಲು ಕುಡಿಸಿದ ತಕ್ಷಣ ಪೋಲಿಯೋ ಹನಿ ಹಾಕಿಸಬಹುದೇ, ಇಲ್ಲವೇ, ಎಂಬ ಅನುಮಾನ ಹಲವರಲ್ಲಿ ಇರುತ್ತದೆ. ತಾಯಿಹಾಲು ಕೊಟ್ಟ ತಕ್ಷಣ ಪೋಲಿಯೋ ಹನಿ ಹಾಕಿಸಬಹುದು. ಹಾಗೆಯೇ ಪೋಲಿಯೋಹನಿ ಹಾಕಿದ ತಕ್ಷಣ ತಾಯಿ ಹಾಲು ಕೊಡಬಹುದು.  

ಗರ್ಭಿಣಿ :-

ಗರ್ಭಿಣಿಯರಿಗೆ ಟೆಟನಸ್ ಟಾಕ್ಸಾಯಿಡ್ (ಟಿ.ಬಿ), ಯಾವುದೇ ಅಂಭ್ಯಾತರವಿಲ್ಲದೆ ಕೊಡಬಹುದು. ವೈರಸ್ ರೋಗಾಣುಗಳ ಜೀವಂತ ವ್ಯಾಕ್ಸಿಂಗ್ ಗಳನ್ನು ಕೊಡಬಾರದು, ಹಾಗೆ ಹೆಪಟೈಟಿಸ್-ಬಿ, ಇನ್ ಫ್ಲುಯೆಂಜಾ ವ್ಯಾಕ್ಸಿನ್ ನನ್ನು ನಿರ್ಭಯವಾಗಿ ತೆಗೆದುಕೊಳ್ಳಬಹುದು.

ಮಿಜಿಲ್, ರೂಬೆಲ್ಲಾ, ರೇಬಿಸ್, ಟೆಟನಸ್, ಹೆಪಟೈಟಿಸ್-ಎ.ಬಿ ರೋಗಗಳು ಸೋಂಕಿದಾಗ ತಕ್ಷಣ ಪ್ಯಾಸ್ಸಿವ್ ಇಮ್ಯುನೈಜೇಷನ್ ಮಾಡಿದರೆ ಒಳ್ಳೆಯದು.

ಹೆಚ್.ಐ.ವಿ / ಏಡ್ಸ್ ಪೀಡಿತರಿಗೆ :

ಈ ಮಕ್ಕಳಿಗೆ ಪೋಲಿಯೋ ಹನಿಗಳನ್ನು ಧಾರಾಳವಾಗಿ ಹಾಕಬಹುದು ಪೋಲಿಯೋವ್ಯಾಕ್ಸಿಂಗ್ ಚುಚ್ಚುಮದ್ದಾದರೆ ಇನ್ನೂ ಒಳ್ಳೆಯದು.

ಪ್ರವಾಸಿಗಳಿಗೆ ಪ್ರತ್ಯೇಕ ವ್ಯಾಕ್ಸಿನ್ ಗಳು :-

ಕೆಲವು ದೇಶಗಳಲ್ಲಿ ಕೆಲವು ಪ್ರಾಂತ್ಯಗಳಲ್ಲಿ ಪ್ರತ್ಯೇಕವಾದ ಕೆಲವು ರೋಗಗಳು ಪ್ರಬಲವಾಗಿರುತ್ತದೆ. ಆ ಪ್ರಾಂತ್ಯಗಳಿಗೆ ಹೋಗುವ ಮುಂಚೆ ಆ ರೋಗಗಳಿಗೆ ಪೂರ್ವಾಭಿಯಾಗಿ ವ್ಯಾಕ್ಸಿಂಗ್ ಗಳನ್ನು ತೆಗೆದುಕೊಳ್ಳಬೇಕು. ದಕ್ಷಿಣ ಆಫ್ರಿಕಾದಲ್ಲಿ ಎಲ್ಲೋ ಫೀವರ್ ಇರುತ್ತದೆ. ಆ ದೇಶಕ್ಕೆ ಹೊರಡುವ ಕನಿಷ್ಠ 10 ದಿನಗಳ ಮೊದಲೇ ಹಾಕಿಕೊಳ್ಳಬೇಕು. ಮಕ್ಕಳಿಗೆ ಕೂಡ ಈ ವ್ಯಾಕ್ಸಿನ್ ಹಾಕಿಸಬೇಕು.

ಅಭಿವೃದ್ಧಿಶೀಲ ದೇಶಗಳಿಂದ ಅಭಿವೃದ್ಧಿ ಹೊಂದುತ್ತಿರುವ ಹೊಂದಲಿರುವ ದೇಶಗಳಿಗೆ ಪ್ರವಾಸಿಗಳಾಗಿ ಬರುವ ಮುಂಚಿತವಾಗಿಯೇ ತಮ್ಮ ಮಕ್ಕಳಿಗೆ ಕಾಲರ, ಪೋಲಿಯೋ, ಮಿಜಿಲ್ಸ್, ಡಿಪೀಟಿ ಹೆಪಟೈಟಿಸ್-ಎ, ರೇಬಿಸ್, ಮೆನಿಂಗೋಕೋಕಲ್, ಟೈಫೈಡ್, ಜಪನೀಸ್ ಎನ್ ಕೆಫಿಲೈಟಿಸ್, ಪ್ಲೇಗ್ ವ್ಯಾಕ್ಸೀನ್ ಗಳನ್ನು ಹಾಕಿಸಬೇಕಾದದ್ದು ಅವಶ್ಯಕ…

ಒಂದೇ ಸಾರಿ ಹಲವು ವ್ಯಾಕ್ಸಿನ್ ಗಳು :-

ಮಗುವಿಗೆ ಒಂದೇ ಬಾರಿಗೆ ಹಲವು ವಿಧದ ವ್ಯಾಕ್ಸಿಂಗ್ ಗಳನ್ನು ಕೊಡಬಹುದು. ಆದರೆ ಒಂದು ಕೈಗೆ ಒಂದು ವ್ಯಾಕ್ಸಿನ್ ಕೊಟ್ಟರೆ, ಮತ್ತೊಂದು ಕೈಗೆ ಮತ್ತೊಂದು ವ್ಯಾಕ್ಸಿಂಗ್ ಕೊಡಬೇಕು ಇದೇ ಕ್ರಮ ಅನ್ವಯಿಸುತ್ತದೆ. ಮ್ಯಾಕ್ಸಿನ್ ಗಳನ್ನು ನಿಗದಿತಕಾಲಕ್ಕೆ ವಯಸ್ಸಿಗೆ ಕೊಡಬೇಕು ಕ್ರಮ ತಪ್ಪಬಾರದು.

ವ್ಯಾಕ್ಸಿನ್ ಗಳಿಗೆ ಪ್ರತಿರೋಧ :-

ವ್ಯಾಕ್ಸಿನ್ ಗಳಿಗೆ ಪ್ರತಿರೋಧ ರಿಯಾಕ್ಷನ್ ಬಹಳ ಅಪರೂಪ. ಎಲ್ಲೋ ಕೆಲವು ಮಕ್ಕಳಿಗೆ ಗಂಭೀರವಾದ ಪ್ರತಿರೋಧ ಬರಬಹುದು. ವ್ಯಾಕ್ಸಿನ್ ಗಳು ಕೂಡ ಸಂಪೂರ್ಣ ರಕ್ಷಣೆ ಒದಗಿಸುವುದಿಲ್ಲ. ಆದರೆ ಅದರ ತೀವ್ರತೆ ಕಡಿಮೆಯಿರುತ್ತದೆ.

ರೋಗನಿರ್ಮೂಲನೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಗುರಿ

1.ಈ ಭೂಮಂಡಲದಿಂದ ಸದ್ಯದಲ್ಲೇ ಪೋಲಿಯೋವನ್ನು ಸಂಪೂರ್ಣ ನಿರ್ಮೂಲನೆ ಮಾಡುವುದು.

2.ಎಳೆ ಮಗುವಿಗೆ ಧನುರ್ವಾಯು ಬರದಂತೆ ತಡೆಯುವುದು.

3.ಗಣನೀಯವಾಗಿ  ಮಿಜಿಲ್ಸ್ ಕಡಿಮೆ ಮಾಡುವುದು.

ಪೋಲಿಯೋ  ನಿರ್ಮೂಲನೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ವಿವಿಧ ದೇಶಗಳ ಸರ್ಕಾರಗಳು ರೋಟರಿ ಸಂಸ್ಥೆ ಗಂಭೀರವಾಗಿ ಶ್ರಮಿಸುತ್ತಿವೆ, ಕನಿಷ್ಠ 85% ಮಂದಿಗೆ ಪೋಲಿಯೋ ಹನಿಗಳು ಕ್ರಮವಾಗಿ ಹಾಕದಿದ್ದರೆ ಪೊಲೀಸ್ ಸಂಪೂರ್ಣವಾಗಿ ತೊಲಗುತ್ತದೆ.

ಮಕ್ಕಳಿಗೆ ಪಾಶ್ವ ವಾಯುವಿನ ಲಕ್ಷಣಗಳು ಕಂಡು ಬಂದಾಗ 2-3 ದಿನದೊಳಗೆ ಆರೋಗ್ಯ ಅಧಿಕಾರಿಗಳಿಗೆ ತಿಳಿಸಬೇಕು.

ಪೋಲಿಯೋ ನಿರ್ಮೂಲನೆಯನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ. ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ನಿಯಮಿತವಾಗಿ ನಿರ್ವಹಿಸುತ್ತಿದೆ. ಐದು ವರ್ಷದ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್ ಪೋಲಿಯೋ ಹನಿಗಳನ್ನು ಹಾಕಿಸಬೇಕು.

ಮುಂದುವರೆಯುತ್ತದೆ……..