ಮನೆ Breaking News ಚಂದ್ರಯಾನ-3: ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ವಿಕ್ರಮ್ ಲ್ಯಾಂಡರ್

ಚಂದ್ರಯಾನ-3: ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ವಿಕ್ರಮ್ ಲ್ಯಾಂಡರ್

0

ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ಚಂದ್ರಯಾನ-3 ನೌಕೆಯನ್ನು ಚಂದ್ರನ ಅಂಗಳದಲ್ಲಿ ಇಳಿಸುವ ಮೂಲಕ ಯಶಸ್ವಿಯಾಗಿದ್ದಾರೆ.

ಚಂದ್ರಯಾನ-3 ಲ್ಯಾಂಡರ್ ಮಾಡ್ಯೂಲ್ ಚಂದ್ರನ ಮೇಲೆ ಬುಧವಾರ ಸಂಜೆ 06.03ಕ್ಕೆ ಯಶಸ್ವಿಯಾಗಿ ಇಳಿದಿದೆ.

ನಾಲ್ಕು ವರ್ಷಗಳಲ್ಲಿ ಇಸ್ರೋದ ಎರಡನೇ ಪ್ರಯತ್ನದಲ್ಲಿ ಚಂದ್ರಯಾನ-3 ಮಿಷನ್ ಚಂದ್ರನ ಮೇಲೆ ಸ್ಪರ್ಶಿಸುವಲ್ಲಿ ಮತ್ತು ರೋಬೋಟಿಕ್ ಲೂನಾರ್ ರೋವರ್ ಅನ್ನು ಲ್ಯಾಂಡಿಂಗ್ ಮಾಡುವಲ್ಲಿ ಯಶಸ್ವಿಯಾಗಿದ್ದು, ಯುಎಸ್ ನಂತರ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ತಂತ್ರಜ್ಞಾನ ಯಶಸ್ಸು ಪಡೆದುಕೊಂಡ ನಾಲ್ಕನೇ ದೇಶ ಭಾರತವಾಗಿದೆ. ಚೀನಾ ಮತ್ತು ಹಿಂದಿನ ಸೋವಿಯತ್ ಒಕ್ಕೂಟ ಯಶಸ್ವಿಯಾಗಿದ್ದವು.

ಇಸ್ರೋ ವಿಜ್ಞಾನಿಗಳು ಚಂದ್ರಯಾನ-3 ನ್ನು ಚಂದ್ರನ ಮೇಲ್ಮೈ ಮೇಲೆ ಮೃದುವಾಗಿ ಇಳಿಸಲು ಸಾಕಷ್ಟು ಎಚ್ಚರಿಕೆಗಳನ್ನು ತೆಗೆದುಕೊಂಡಿದ್ದರು.

ಹಿಂದಿನ ಲೇಖನವ್ಯಾಕ್ಸೀನ್ ಗಳ ಬಗ್ಗೆ ಅರಿವು
ಮುಂದಿನ ಲೇಖನಶೀಘ್ರವಾಗಿ 13 ಸಾವಿರ ಹುದ್ದೆಗಳ ನೇಮಕ: ಸಚಿವ ರಾಮಲಿಂಗಾರೆಡ್ಡಿ