ಮನೆ ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ಮೇರೆಗೆ ಕೋಲಾರದಲ್ಲಿ ತೆರವು ಕಾರ್ಯಾಚರಣೆ

ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ಮೇರೆಗೆ ಕೋಲಾರದಲ್ಲಿ ತೆರವು ಕಾರ್ಯಾಚರಣೆ

0

ಶ್ರೀನಿವಾಸಪುರದಲ್ಲಿ 148 ಎಕರೆ ಅರಣ್ಯ ಭೂಮಿ ಮರು ವಶ

ಬೆಂಗಳೂರು:  ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರ ಸೂಚನೆಯ ಮೇರೆಗೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ಸುತ್ತಮುತ್ತ ರಾಜ್ಯ ಅರಣ್ಯ ಭೂಮಿ ತೆರವು ಕಾರ್ಯಾಚರಣೆ ಇಂದು ನಸುಕಿನಿಂದಲೇ ಆರಂಭವಾಗಿದ್ದು, ಸುಮಾರು 148 ಎಕರೆಯಷ್ಟು ಅರಣ್ಯ ಭೂಮಿ ಒತ್ತುವರಿ ತೆರವು ಮಾಡಲಾಗುತ್ತಿದೆ.

ನೂರು ವರ್ಷಗಳ ಹಿಂದೆಯೇ ಅಂದಿನ ಮಹಾರಾಜರು ಅರಣ್ಯ ಎಂದು ಅಧಿಸೂಚನೆ ಹೊರಡಿಸಿದ್ದರೂ, 1990ರ ದಶಕದಲ್ಲಿ ಇಲ್ಲಿ ಒತ್ತುವರಿ ಆಗಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಅರಣ್ಯ ಭೂಮಿ ಮರು ವಶಕ್ಕೆ ಸಚಿವರು ಸ್ಪಷ್ಟ ಸೂಚನೆ ನೀಡಿದ್ದರು.

ಈಶ್ವರ ಖಂಡ್ರೆ ಅವರ ಆದೇಶದಂತೆ ಇಂದು ಅರಣ್ಯ ಇಲಾಖೆ ಸಿಬ್ಬಂದಿ, ಜೆಸಿಬಿಗಳೊಂದಿಗೆ ಶ್ರಿನಿವಾಸಪುರದ ಸರ್ವೆ ನಂಬರ್ 90ರಲ್ಲಿ 97 ಎಕರೆ, ಸರ್ವೆ ನಂ. 84 ಮತ್ತು 85ರಲ್ಲಿ 38 ಎಕರೆ, ಸರ್ವೆ ನಂ.51ರಲ್ಲಿ 12 ಎಕರೆ ಹಾಗೂ ಆವಲಕುಪ್ಪ ಗ್ರಾಮದ ಸರ್ವೆ ನಂ.135ರಲ್ಲಿ 4 ಎಕರೆ ಜಮೀನಿನಲ್ಲಿ ಕಾರ್ಯಾಚರಣೆ ಕೈಗೊಂಡು ಶೆಡ್ ಗಳು, ಮಾವಿನ ಮರ ತೆರವು ಮಾಡಿ  ಒಟ್ಟು 148 ಎಕರೆ ಅರಣ್ಯ ಭೂಮಿಯನ್ನು ಮರುವಶಪಡಿಸಿಕೊಂಡಿದ್ದಾರೆ.