ಮನೆ ಸಾಹಿತ್ಯ ಜನರನ್ನು ಪ್ರೀತಿಸಿ ಮತ್ತು ಅವರಿಗೆ ನೆರವಾಗಿ

ಜನರನ್ನು ಪ್ರೀತಿಸಿ ಮತ್ತು ಅವರಿಗೆ ನೆರವಾಗಿ

0

ಅಮೆರಿಕ ನಗರವೊಂದರಲ್ಲಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರು ಆಗಿದ್ದ ಓರ್ವ ಶ್ರೇಷ್ಠ ಸರ್ಜನ್ ಇದ್ದರು. ಅತ್ಯುತ್ತಮ ಕೌಶಲ್ಯರ ಜೊತೆಗೆ ಜನರನ್ನು ಅಪಾರ ಪ್ರೀತಿಸುತ್ತ, ಒಳಿತನ್ನೆ ಮಾಡುತ್ತಿದ್ದ, ಅವರು ನಿಜವಾದ ಅರ್ಥಗಳಲ್ಲಿ ಒಳ್ಳೆಯ ವೈದ್ಯರಾಗಿದ್ದರು.

ಪ್ರತಿನಿತ್ಯ ತಾವು ದಿನಪತ್ರಿಕೆ ಖರೀದಿಸುತ್ತಿದ್ದ ಮೂಲೆಯಲ್ಲಿದ್ದ ಅಂಗವಿಕಲ ಬಗ್ಗೆ ಅವರು ಅಪಾರ ಆಸಕ್ತಿಯನ್ನು ಬೆಳಸಿಕೊಂಡಿದ್ದರು.

ಆ ಪುಟ್ಟ ಹುಡುಗ ಕಾಂತಿಯುತನಾಗಿದ್ದನು ಒಂದು ದಿನ ಸರ್ಜನ್ ಅವನಿಗೆ “ಜಾನಿ, ನೀನು ಇತರ ಹುಡುಗರಂತೆ ಓಡುತ್ತಾ, ಆಡುತ್ತ, ಸಂತೋಷವಾಗಿರಲು ಅನುವಾಗುವಂತೆ ನಿನ್ನ ಕಾಲನ್ನು ಗುಣಪಡಿಸಲು ನನ್ನ ನೆರವು ಪಡೆಯಬಯಸುವೆಯಾ?” ಎಂದು ಕೇಳಿದರು.

ಅದಕ್ಕೆ ಆತ “ಶಸ್ತ್ರಚಿಕಿತ್ಸೆ ವೆಚ್ಚಕ್ಕೆ ಬೇಕಾದಷ್ಟು ಹಣ ತನ್ನ ಬಳಿ ಇಲ್ಲ”ವೆಂದು ಉತ್ತರಿಸಿದರು.

 ಆ ವೈದ್ಯ ಹಣದ ಅಪೇಕ್ಷೆ ಇಲ್ಲದೆ ಪ್ರೀತಿಗಾಗಿ ಆ ಕೆಲಸ ಮಾಡಲು ಒಪ್ಪಿದರು. ಅಗ ಆ ಹುಡುಗ “ ಓ, ಡಾಕ್ಟರ್ ,ಇದು ನನಗೆ ಅಪಾರ ಸಂತೋಷತರಬಲ್ಲದು” ಎಂದು ಅಪಾರ ಹರ್ಷ ವ್ಯಕ್ತಪಡಿಸಿದರು.

ಆಪರೇಷನ್ ಥಿಯೇಟರ್ ನಲ್ಲಿ, ಅನಸ್ತೇಸಿಯಾ ಕೊಡುವ ಮೊದಲು ಆ ಹುಡುಗ ದೇವರಲ್ಲಿ ಪ್ರಾರ್ಥನೆ ಸಲ್ಲಿಸಬಯಸಿದನು. ಅದಕ್ಕೆ ಅವನಿಗೆ ಅನುಮತಿ ನೀಡಲಾಯಿತು. ಆಗ ಅವನು ಜೋರಾಗಿ ಹೇಳಿದನು. “ದೇವರೇ ಈ ಸರ್ಜನರಿಗೆ ಇನ್ನಷ್ಟು ಜನರ ಬದುಕನ್ನು ರಕ್ಷಿಸಲು ದೀರ್ಘಾಯುಷ್ಯ ಕರುಣಿಸು” ಈ ಪ್ರಾರ್ಥನೆಯನ್ನು ಸರ್ಜನ್ ರ ಹೃದಯ ತಟ್ಟಿತು ಮತ್ತು ತದನಂತರ ಅವರು ಹೀಗೆ ಪ್ರತಿಕ್ರಿಯಿಸಿದರು.

ಪ್ರಶ್ನೆಗಳು : 1. ಸರ್ಜನ್ ರ ಪ್ರತಿಕ್ರಿಯೆ ಏನಾಗಿತ್ತು?

2. ಆ ಕಥೆಯ ಪರಿಣಾಮವೇನು ?

ಉತ್ತರಗಳು : 1. “ನನ್ನ ವೃತ್ತಿ ಜೀವನದ ಉನ್ನತ ಸ್ಥಾನಗಳಲ್ಲಿರುವ ಅನೇಕ ಗಣ್ಯರಿಗೆ ಪ್ರತಿಯಾಗಿ ಅಪಾರ ಮೊತ್ತದ ಹಣ ಪಡೆದಿದ್ದೇನೆ ಆದರೆ ಆ ಹುಡುಗನಿಗೆ ಮಾಡಿದಾಗ ಸಿಕ್ಕಂತಹ ಅಗಾಧ ತೃಪ್ತಿ ನನಗೆ ಎಂದು ಲಭಿಸಿಲ್ಲ”

2. ಯಾವುದೇ ಪ್ರತಿಫಲಾಕ್ಷೆಇಲ್ಲದ ಪ್ರೀತಿ ಮತ್ತು ಸೇವೆ ಒಂದು ಸಣ್ಣ ಕ್ರಿಯೆ ದೊಡ್ಡ ಮೊತ್ತದ ಹಣಕ್ಕಿಂತ ಅತ್ಯಮೂಲ್ಯವಾಗಿರುತ್ತದೆ.