ಮನೆ ದೇವಸ್ಥಾನ ಶ್ರೀ ಮಾರಿಕಾಂಬ ದೇವಾಲಯ

ಶ್ರೀ ಮಾರಿಕಾಂಬ ದೇವಾಲಯ

0

Join Our Whatsapp Group

ನಿರ್ಗುಣ ನಿರಾಹಂಕಾರಾ ಸರ್ವಗರ್ವವಿಮರ್ದಿನಿ|

ಸರ್ವಲೋಕಪ್ರಿಯಾ ವಾಣೀ ಸರ್ವವಿದ್ಯಾಧೀದೇವತಾ||

ಈ ಕ್ಷೇತ್ರವು ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿರುವ ಮಾಲೂರು ಗ್ರಾಮದಲ್ಲಿ ಗ್ರಾಮ ದೇವತೆಯಾಗಿ ಶ್ರೀ ಮಾರಿಕಾಂಬಾದೇವಿಯು ನೆಲೆ ನಿಂತಿದ್ದಾರೆ.

ಈ ಕ್ಷೇತ್ರದ ವಿಶೇಷತೆ ಎಂದರೆ ಈ ದೇವಾಲಯವು ವರ್ಷದ 365 ದಿನಗಳು ಮತ್ತೆ ದಿನಗಳು 24 ಗಂಟೆಗಳು ಭಕ್ತರ ಸಲುವಾಗಿ ತೆರೆದಿರುತ್ತದೆ. ಯಾಕೆಂದರೆ ಈ ದೇವಾಲಯಕ್ಕೆ ಯಾವುದೇ ಬಾಗಿಲು ಇರುವುದಿಲ್ಲ ಮತ್ತು ಯಾವುದೇ ಜಾತಿಯ ಭೇದವಿಲ್ಲದೆ ಭಕ್ತಾದಿಗಳು ಸ್ವತಃ ತಾಯಿಗೆ ಅಭಿಷೇಕ ಪೂಜೆಗಳನ್ನು ಮಾಡಿ, ಅಮ್ಮನವರ ಮೂರ್ತಿಯನ್ನು ಮುಟ್ಟಿ ನಮಸ್ಕಾರ ಮಾಡುತ್ತಾರೆ.

ಈ ಊರಿನ ವ್ಯಾಪಾರಿಗಳು ತಮ್ಮ ಅಂಗಡಿಗಳಿಗೆ ಶ್ರೀ ಮಾರಿಕಾಂಬ ದೇವಿಯವರ ಹೆಸರನ್ನು ಇಟ್ಟುಕೊಂಡಿದ್ದಾರೆ. ಮತ್ತೆ ಪ್ರತಿದಿನ ತಮ್ಮ ಅಂಗಡಿ ಗಳನ್ನು ತೆರೆಯುವ ಮುಂಚೆ ಅಂಗಡಿಯ ಬೀಗದ ಕೈಗಳನ್ನು ತಂದು ತಾಯಿಯ ಮುಂದೆ ಇಟ್ಟು ನಮಸ್ಕಾರ ಮಾಡಿ ನಂತರ ತಮ್ಮ ತಮ್ಮ ಅಂಗಡಿಗಳನ್ನು ತೆರೆಯುತ್ತಾರೆ.

ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಇನ್ನೂ ಹಲವಾರು ಹೊರ ರಾಜ್ಯಗಳು ಹಾಗೂ ಹೊರದೇಶಗಳಿಂದ ಭಕ್ತಾದಿಗಳು ಬಂದು ಇಲ್ಲಿ ಸೇವಿ ಸಲ್ಲಿಸುತ್ತಿದ್ದಾರೆ.

ದೇವಾಲಯದ ಹಿರಿಯರಾದವರು ಈ ಕ್ಷೇತ್ರದ ಇತಿಹಾಸವನ್ನು ತಿಳಿಸಿದ್ದಾರೆ. ಹಿಂದೆ ಮಾಲೂರು ಪಟ್ಟಣಕ್ಕೆ ಮಲ್ಲಿಕಾಪುರ ವೆಂಬ ಹೆಸರಿತ್ತು ಆ ಸಮಯದಲ್ಲಿ ಇಲ್ಲಿ ಪಾಳೆಗಾರರು ರಾಜ್ಯಭಾರ ಮಾಡುತ್ತಿದ್ದರು ಮಾಲೂರಿನ ನಾಲ್ಕು ಮೂಲೆಯನ್ನು ನಾಲ್ಕು ಮಹಾಶಕ್ತಿಗಳು ಕ್ಷೇತ್ರವನ್ನು ಕಾಪಾಡಲು ನೆಲೆಸಿದ್ದರು ಕೋಟೆ ಮಾರಿಕಾಂಬ, ಮುತ್ಯಾಲಮ್ಮ, ಪಟಾಲಮ್ಮ, ಶುಗಲಮ್ಮ ಈ ಮಹಾಶಕ್ತಿ ದೇವತೆಗಳು ಈ ಗ್ರಾಮವನ್ನು ಸುರಕ್ಷಿಸುತ್ತಿದ್ದರು ಎಂದು ಪೂರ್ವಿಕರು ತಿಳಿಸಿದ್ದರು.

ಈ ದೇವಾಲಯದಲ್ಲಿ ಜಾತಿ, ಭೇದಭಾವ ಇಲ್ಲ. ಆ ದೇವಿ ಅಭಿಷೇಕವನ್ನು ಸ್ವತಹ ಭಕ್ತಾದಿಗಳು ಮಾಡಬಹುದು. ಈ ಮಾರಿಕಾಂಬಾ ದೇವಿಯ ದೇವಾಲಯದ ಮುಂಭಾಗದಲ್ಲಿ ಧ್ವಜ ಮಂಡಲ ಎಂಬ ಪುಷ್ಕರಣಿಯಲ್ಲಿ ಎರಡು ವಿಶೇಷವಾದ ಅಮ್ಮನವರ ವಿಗ್ರಹಗಳು ಪತ್ತೆಯಾದವು.

ಆ ವಿಗ್ರಹಗಳನ್ನು ಜಹಾಂಗೀರ್ ಹೀರ್ದೆ ರಾಮ್ ಸಿಂಗ್ ಈ ಕಲ್ಯಾಣಿಯಿಂದ ಹೊರಗೆ ತಂದು ಸ್ಥಾಪನೆ ಮಾಡಿದ ಮಹನೀಯರು ಇದೇ ತಾಲೂಕಿನ ಬಾವನಹಳ್ಳಿ ಗ್ರಾಮದವರು. ಅವರ ಕನಸಿನಲ್ಲಿ ಬಂದು ಆ ದೇವಿಯು ತಾನು ಇರುವ ಪುಷ್ಕರಣಿಯ ಸ್ಥಳವನ್ನು ತಿಳಿಸಿ, ತನಗೆ ಆಲಯ ನಿರ್ಮಾಣ ಮಾಡು, ಈ ಊರನ್ನು ಕಾಪಾಡಲು ನನಗೆ ಪ್ರೇರಣೆಯಾಗಿದೆ ಎಂದಾಗ ಅವರು ಬಂದು ಪುಷ್ಕರಣಿಯಲ್ಲಿ ಇದ್ದಂತಹ ಶಿಲೆಯಲ್ಲಿ ತಾಯಿ ನೆಲೆಸಿರುವ ಮೂರ್ತಿಯನ್ನು ತಂದು ಪ್ರತಿಷ್ಠಾಪನೆ ಮಾಡಿ, ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆ.

ಈ ದೇವಾಲಯದಲ್ಲಿ ಭಕ್ತಾದಿಗಳು ಅಭಿಷೇಕ ನಿಂಬೆ ಹಣ್ಣಿನ ದೀಪ ಅಲಂಕಾರ ಮಾಡುವುದು, ಹೂವಿನ ಅಲಂಕಾರ ಮಾಡುವುದು ಇತ್ಯಾದಿ ಸೇವೆಗಳನ್ನು ಮಾಡಿ ತಮ್ಮ ಕೋರಿಕೆಯನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ಈ ದೇವಾಲಯದ ಯುವಕ ಮಂಡಳಿ ದೇವಾಲಯದ ಅಭಿವೃದ್ಧಿ ಸಮಿತಿಯವರು ದೇವಾಲಯದ ಅಭಿವೃದ್ಧಿಗೆ ಬಹಳ ಶ್ರಮಿಸಿದ್ದಾರೆ. ಮತ್ತೊಂದು ವಿಶೇಷವೆಂದರೆ ಬಡ ಮಕ್ಕಳಿಗೆ ಇಲ್ಲಿ ವಿದ್ಯಾಭ್ಯಾಸಕ್ಕಾಗಿ ಧನ ಸಹಾಯ ಮಾಡುತ್ತಿದ್ದಾರೆ. ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ದೇವಾಲಯದ ವತಿಯಿಂದ ಧನ ಸಹಾಯ ಮಾಡುತ್ತಿದ್ದಾರೆ.

ಡಿಸೆಂಬರ್ – ಜನವರಿ ತಿಂಗಳಲ್ಲಿ ಮಾರಿಕಾಂಬ ಜಾತ್ರೋತ್ಸವ ನಡೆಯುತ್ತದೆ. ಈ ದೇವಾಲಯಕ್ಕೆ ಸಮಯದ ನಿರ್ದಿಷ್ಟ ಏನಿಲ್ಲ, ಯಾವುದೇ ಊರಿಂದ, ಯಾವುದೇ ರಾಜ್ಯದಿಂದ, ಎಷ್ಟು ಹೊತ್ತಿಗೆ ಬಂದರು ಈ ದೇವಾಲಯವು ತೆರೆದಿರುತ್ತದೆ.