ಮನೆ ಮನರಂಜನೆ ಚೇತನ್ ಕುಮಾರ್ ನಿರ್ದೇಶನದಲ್ಲಿ ಹೊಸ ಚಿತ್ರ ‘ಬರ್ಮ’

ಚೇತನ್ ಕುಮಾರ್ ನಿರ್ದೇಶನದಲ್ಲಿ ಹೊಸ ಚಿತ್ರ ‘ಬರ್ಮ’

0

ಚೇತನ್ ಕುಮಾರ್  ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಈಗ ಅವರ ಹೊಸ ಸಿನಿಮಾ ಘೋಷಣೆ ಆಗಿದೆ. ಈ ಚಿತ್ರಕ್ಕೆ ‘ಬರ್ಮ’ ಎನ್ನುವ ಶೀರ್ಷಿಕೆ ಇಡಲಾಗಿದೆ. ಈ ಚಿತ್ರಕ್ಕೆ ‘ಗಟ್ಟಿಮೇಳ’ ಖ್ಯಾತಿಯ ರಕ್ಷ್ ರಾಮ್ ನಾಯಕ.

ಕೆಲ ಸಿನಿಮಾಗಳು ಶೀರ್ಷಿಕೆಯ ಮೂಲಕ ಗಮನ ಸೆಳೆಯುತ್ತವೆ. ‘ಬರ್ಮ’ ಚಿತ್ರದ ಟೈಟಲ್ ಕೂಡ ಕುತೂಹಲ ಮೂಡಿಸಿದೆ. ‘ಬರ್ಮ’ ಎಂದರೆ ಬ್ರಹ್ಮ ವಾಸಿಸುವ ಜಾಗ ಎಂದು ತಂಡ ತಿಳಿಸಿದೆ.

ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿ ಬರುತ್ತಿದೆ ಅನ್ನೋದು ವಿಶೇಷ. ವಿ. ಹರಿಕೃಷ್ಣ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಈ ಮೊದಲು ಚೇತನ್ ಹಾಗೂ ಹರಿಕೃಷ್ಣ ಅವರು ‘ಬಹದ್ದೂರ್’ ಹಾಗೂ ‘ಭರ್ಜರಿ’ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಈಗ ಮೂರನೇ ಬಾರಿಗೆ ಈ ಜೋಡಿ ಒಂದಾಗಿದೆ.

ಇಂದು (ಆಗಸ್ಟ್​ 25) ವರಮಹಾಲಕ್ಷ್ಮಿ ಹಬ್ಬ. ಈ ವಿಶೇಷ ದಿನದಂದು ಚಿತ್ರ ಅನೌನ್ಸ್ ಮಾಡಲಾಗಿದೆ. ಅಚ್ಚರಿಯ ವಿಚಾರ ಎಂದರೆ ಸಿನಿಮಾ ಘೋಷಣೆ ಆದ ದಿನವೇ ಚಿತ್ರದ ಆಡಿಯೋ ಹಕ್ಕು ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ‘ಬರ್ಮ’ ಕೂಡ ಕನ್ನಡ ಸೇರಿ ಇತರ ಭಾಷೆಗಳಲ್ಲೂ ರಿಲೀಸ್ ಆಗಲಿದೆ.

ಸೆಪ್ಟೆಂಬರ್ ತಿಂಗಳಿಂದ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಸದ್ಯ ಹೀರೋನ ಪರಿಚಯವನ್ನು ಮಾತ್ರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪಾತ್ರವರ್ಗದ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಆಗಲಿದೆ.