ಬಿ.ಸಿ.ಜಿ :-
ವ್ಯಾಕ್ಸಿನ್ ಮಗು ಹುಟ್ಟಿದ ತಿಂಗಳು ಒಳಗೆ ಬಿ.ಸಿ.ಜಿ ವ್ಯಾಕ್ಸಿನ್ ಹಾಕಿಸಬೇಕು. ಇದನ್ನು ಒಂದು ಬಾರಿ ಮಾತ್ರ ಹಾಕಿಸಿದರೆ ಸಾಕು ಮತ್ತೆ-ಮತ್ತೆ ಹಾಕಿಸಬೇಕಾಗಿಲ್ಲ. ಈ ವ್ಯಾಕ್ಸಿನನ್ನು ಎಡಕೈ ಮೇಲ್ಭಾಗದ ಚರ್ಮದೊಳಕ್ಕೆ ಕೊಡಬೇಕು. 3-4 ವಾರಗಳಿಗೆ ಅಲ್ಲಿ ಸಣ್ಣ ಊತ ಬರುತ್ತದೆ. ಆ ನಂತರ 2-3 ವಾರಗಳಲ್ಲಿ ಅದು ಹೊಡೆಯುತ್ತದೆ. ಅದು ನಂತರ ಅದು ಸಣ್ಣ ಕಲೆಯಂತಾಗುತ್ತದೆ. ಹೀಗಾಗದಿದ್ದರೆ ಮತ್ತೆ ವ್ಯಾಕ್ಸಿಂಗ್ ಹಾಕಿಸಬೇಕು. ಈ ವ್ಯಾಕ್ಸಿನ್ ಹಾಕಿಸಿಕೊಳ್ಳುವುದರಿಂದ 80% ರಷ್ಟು ರಕ್ಷಣೆ ಇರುತ್ತದೆ.
ಡಿ.ಪಿ.ಟಿ :-
ಈ ವ್ಯಾಕ್ಸಿನ್ ಡಿಫ್ತೀರಿಯ, ನಾಯಿಕೆಮ್ಮು, ಧನುರ್ವಾತದ ವಿರುದ್ಧ ರಕ್ಷಣೆ ಹೋದಗಿಸುತ್ತದೆ ಮಗು ಹುಟ್ಟಿದ 6ನೇ, 10ನೇ, 14ನೇ ವಾರದಲ್ಲಿ ಒಂದೊಂದು ಇಂಜಕ್ಷನ್ ಕೊಡಬೇಕು. ಮತ್ತೆ 15-18 ನೇ ತಿಂಗಳಿನಲ್ಲಿ ಮತ್ತೊಂದು ಇಂಜೆಕ್ಷನ್ ಕೊಡಬೇಕು. ಇದನ್ನು ತೊಡೆಯ ಹೊರಭಾಗದ ಸ್ನಾಯುಗೆ ಕೊಡಬೇಕು. ಡಿ.ಟಿ.ಪಿ ವ್ಯಾಕ್ಸಿನ್ ಹಾಕಿದಾಗ ಸ್ವಲ್ಪ ಜ್ವರ ಬರುವುದು. ಜ್ವರ ಕಡಿಮೆಯಾಗಲು ಪ್ಯಾರಾಸಿಟಮಾಲ್ ಸಿರಪ್ ಕೊಟ್ಟರೆ ವಾಸಿಯಾಗುತ್ತದೆ. ಈ ವ್ಯಾಕ್ಸಿನ್ ಹಾಕಿಸಿಕೊಳ್ಳುವುದರಿಂದ 80% ರಷ್ಟು ರಕ್ಷಣೆ ಒದಗುತ್ತದೆ.
ಹೆಪಟೈಟಿಸ್-ಬಿ :-
ಹುಟ್ಟಿದಾಗ ಒಂದು ಇಂಜೆಕ್ಷನ್ ನಂತರ ತಿಂಗಳಿಗೆ ಒಂದು, 6 ತಿಂಗಳು ತುಂಬಿದಾಗ ಮತ್ತೊಂದು ಇಂಜೆಕ್ಷನ್ ಹೀಗೆ ಮೂರು ಇಂಜೆಕ್ಷನ್ ಹಾಕಿಸಬೇಕು. ನಂತರ 10 ವರ್ಷ ತುಂಬಿದಾಗ ಮತ್ತೊಂದು ಇಂಜೆಕ್ಷನ್ ಹಾಕಿಸಿಕೊಳ್ಳಬೇಕು ಇದನ್ನು ಕೈಯ ಮೇಲ್ಬಾಗದ ಮಾಂಸಖಂಡಕ್ಕೆ ಕೊಡಬೇಕು ಈ ವ್ಯಾಕ್ಸಿನಿಂದ 90 ರಷ್ಟು ರಕ್ಷಣೆ ಇರುತ್ತದೆ ಸಣ್ಣ ಮಕ್ಕಳಿಗೆ 0.5ml, ದೊಡ್ಡವರಿಗೆ 1 ml ,ಆಗತಾನೆ ಹುಟ್ಟಿದ ಮಕ್ಕಳಿಗೆ 0.25 ಎಂಎಲ್, ಕೊಡಬೇಕು.
ಎಂ.ಎಂ.ಆರ್ ವ್ಯಾಕ್ಸಿನ್ :-
ಈ ವ್ಯಾಕ್ಸಿನ್ ಮಿಜಿಲ್ಸ್, ಮಮ್ಸ್, ರೂಬೆಲ್ಲಾ ರೋಗ ಬಾರದಂತೆ ನಿರೋಧಿಸುತ್ತದೆ. ಈ ವ್ಯಾಕ್ಸಿನ್ ಒಂದೇ ಒಂದನ್ನು 15ನೇ ತಿಂಗಳಿನಲ್ಲಿ 0.5ml ಕೈಯ ಚರ್ಮದ ಕೆಳಗೆ (ಸಬ್ ಕ್ಯೂಟ್ನೆಸ್) ಕೊಡಬೇಕು. ಈ ವ್ಯಾಕ್ಸಿನಿಂದ 95 ರಷ್ಟು ರಕ್ಷಣೆ ಇರುತ್ತದೆ. ಹೆಣ್ಣು ಮಕ್ಕಳಿಗೆ ಮಾತ್ರ 13 ವರ್ಷ ಕಳೆದ ನಂತರ ರೂಬೆಲ್ಲ ವ್ಯಾಕ್ಸಿನ್ ಒಂದು ಪ್ರತ್ಯೇಕವಾಗಿ ಕೊಡಬೇಕು.
ಟೈಫಾಯ್ಡ್ ವ್ಯಾಕ್ಸಿಂಗ್ :-
ದ್ರವ ರೂಪದಲ್ಲಿರುವ ಇದು ಟೈಫೈಡನ್ನು ನಿರೋಧಿಸುತ್ತದೆ. 2 ರಿಂದ 5 ವರ್ಷದ ಮಧ್ಯದಲ್ಲಿ ಇರುವವರಿಗೆ ಈ ವ್ಯಾಕ್ಸಿಂಗ್ ಕೊಡುತ್ತಾರೆ. ಒಂದು ಕೊಟ್ಟ ನಂತರ ಒಂದುತಿಂಗಳಿಗೆ ಮತ್ತೊಂದು ಕೊಡುತ್ತಾರೆ. ನಂತರ 3 ವರ್ಷಕ್ಕೆ ವ್ಯಾಕ್ಸಿನ್ ಕೊಡುತ್ತಾರೆ. ಈ ವ್ಯಾಕ್ಸಿನ್ 70-80ರಷ್ಟು ರಕ್ಷಣೆ ಒದಗಿಸುತ್ತದೆ.
ಚುಚ್ಚು ಮದ್ದು ರೂಪದಲ್ಲಿ ಮತ್ತೊಂದು ವ್ಯಾಕ್ಸಿನ್ ಇದೆ. ಐದು ವರ್ಷ ತುಂಬಿದ ನಂತರ ಒಂದು ಚುಚ್ಚುಮದ್ದು ಆನಂತರ ಮತ್ತೆ ಐದು ವರ್ಷಕ್ಕೆ ಮತ್ತೊಂದು ಚುಚ್ಚುಮದ್ದು ಕೊಡುತ್ತಾರೆ. ಪ್ರಮಾಣ ಪ್ರತಿ ಸಾರಿಯೂ 0.5 ml.
ಮೇನಿಂಗೋಕೋಕಲ್ ಎ+ಸಿ ವ್ಯಾಕ್ಸಿನ್ :-
ಇದು ಮೆನಿಂಜೈಟಿಸ್ ನಿಂದ ರಕ್ಷಣೆಯನ್ನು ಒದಗಿಸುತ್ತದೆ. ಈ ವ್ಯಾಕ್ಸಿನನ್ನು 2 ವರ್ಷ ಮೇಲ್ಪಟ್ಟವರಿಗೆ ಕೊಡುತ್ತಾರೆ. 0.5ml ಡೆಲ್ಟಾಯಿಡ್ ಭಾಗದಲ್ಲಿ ಚರ್ಮದ ಕೆಳಗಾಗಲಿ ಸ್ನಾಯುಗಾಗಲಿ ಕೊಡುತ್ತಾರೆ. ಈ ವ್ಯಾಕ್ಸಿನ್ ಮೆನಿಂಗೋಕೋಕಲ್, ಮೆನೊಂಜೈಟಿಸ್ ನಿಂದ ಮೆದುಳುಬಾಹು 90-95% ರಷ್ಟು ರಕ್ಷಣೆಯನ್ನು ಒದಗಿಸುತ್ತದೆ.
ಜಪಾನೀಸ್ ಎನ್ ಕೆಪಲೈಟಿಸ್ ವ್ಯಾಕ್ಸಿನ್ :-
ಈ ವ್ಯಾಕ್ಸಿನ್ ಅನ್ನು ಒಂದು ವರ್ಷ ತುಂಬಿದ ನಂತರ ಕೊಡುತ್ತಾರೆ. ಒಟ್ಟು ಮೂರು ಡೋಸ್ ಗಳು ಜಪಾನೀಸ್ ಇಂಲೈಟೀಸ್ ಒಂದು ರೀತಿಯ ಮೆದುಳು ಭಾವರೋಗ ಈ ರೋಗ ಸೊಳ್ಳೆ ಕಡಿಯುವುದರಿಂದ ಬರುತ್ತದೆ. ಈ ರೋಗ ಬಂದ 20% ರಷ್ಟು ಜನಪ್ರಾಣ ಕಳೆದುಕೊಳ್ಳುತ್ತಾರೆ. ಮುಖ್ಯವಾಗಿ ಈ ರೋಗ ಸಣ್ಣಮಕ್ಕಳಿಗೆ ಬರುತ್ತದೆ. 0.5ml ಇಂಜೆಕ್ಷನ್ ಚರ್ಮದ ಕೆಳಭಾಗಕ್ಕೆ ಕೊಡುತ್ತಾರೆ. ಮೊದಲ ಇಂಜೆಕ್ಷನ್ ಕೊಟ್ಟ ನಂತರ 7 ದಿನಕ್ಕೆ ಮತ್ತೊಂದು 30ದಿನಗಳ ನಂತರ ಮತ್ತೊಂದು ಇಂಜೆಕ್ಷನ್ ಹೀಗೆ ಮೂರು ಇಂಜೆಕ್ಷನ್ ಕೊಡುತ್ತಾರೆ ಈ ವ್ಯಾಕ್ಸಿನ್ ನಿಂದ 60ರಷ್ಟು ರಕ್ಷಣೆ ಒದಗುತ್ತದೆ.
ಹೆಪಟೈಟಿಸ್-ಎ ವ್ಯಾಕ್ಸಿನ್ :-
ಇದು ಹನಿ ರೂಪದಲ್ಲಿ ಮತ್ತು ಇಂಜೆಕ್ಷನ್ ರೂಪದಲ್ಲಿ ಇರುತ್ತದೆ. ಒಂದು ವರ್ಷಕಳೆದ ಮಕ್ಕಳಿಗೆ 0.5ml ನ ಒಂದು ಇಂಜೆಕ್ಷನ್ ಕೊಟ್ಟು ನಂತರ ಒಂದು ವರ್ಷಕ್ಕೆ ಮತ್ತೊಂದು ಇಂಜೆಕ್ಷನ್ ಕೊಡುತ್ತಾರೆ. ದ್ರವ ರೂಪದಲ್ಲಿರುವ ವ್ಯಾಕ್ಸಿನ್ ಅನ್ನು ಒಂದು ವರ್ಷವಯಸ್ಸಿನ ಮಕ್ಕಳಿಗೆ ಕೊಡುತ್ತಾರೆ. ಒಂದುಡೋಸ್ ಕೊಟ್ಟ ತಿಂಗಳ ನಂತರ ಮತ್ತೊಂದು ಕೊಡುತ್ತಾರೆ. ಆರು ತಿಂಗಳು ಇಲ್ಲವೇ ಒಂದು ವರ್ಷಕ್ಕೆ ಮತ್ತೊಂದು ಕೊಡುತ್ತಾರೆ. ಈ ವ್ಯಾಕ್ಸಿನಿಂದ 99% ರಷ್ಟು ರಕ್ಷಣೆ ಒದಗುತ್ತದೆ.
ವೇರಿಸೆಲ್ಲಾ ವ್ಯಾಕ್ಸಿನ್ :-
ಈ ವ್ಯಾಕ್ಸಿನನ್ನು ಚಿಕನ್ ಫಾಕ್ಸ್ (ಅಮ್ಮ) ಬಾರದಿರಲು ಕೊಡುತ್ತಾರೆ. 0.5ml ತೊಡೆಯ ಚರ್ಮದ ಕೆಳಗೆಕೊಡುತ್ತಾರೆ 95-100% ರಷ್ಟು ರಕ್ಷಣೆ ಒದಗಿಸುತ್ತದೆ.
ನ್ಯೂಮೋಕೋಕಲ್ ವ್ಯಾಕ್ಸಿನ್ :-
ಸ್ಟ್ರೆಪ್ಟೋಕೋಕಸ್ ನ್ಯುಮೋನಿಯಾ ಬಾರದಂತೆ ಈ ವ್ಯಾಕ್ಸಿನ್ ರಕ್ಷಣೆಯನ್ನು ಒದಗಿಸುತ್ತದೆ. ಎರಡು ವರ್ಷ ಮೇಲ್ಪಟ್ಟವರಿಗೆ ಇದನ್ನು ಕೊಡುತ್ತಾರೆ. ಮೊದಲು ಒಂದು ಚುಚ್ಚುಮದ್ದು ನಂತರ ಬೂಸ್ಟರ್ ಡೋಸ್ ಎಂದು ಮತ್ತೊಂದು ಚುಚ್ಚುಮದ್ದನ್ನು ತೋಡೆಗೆ ಕೊಡುತ್ತಾರೆ. ಈ ವ್ಯಾಕ್ಸೀನ್ ಹಾಕಿಸಿಕೊಂಡವರಿಗೆ ನ್ಯುಮೋನಿಯಾದಿಂದ 90% ರಷ್ಟು ರಕ್ಷಣೆ ಸಿಗುತ್ತದೆ.
ರೇಬಿಸ್ ವ್ಯಾಕ್ಸಿನ್ :-
ಹುಚ್ಚುನಾಯಿ ಕಚ್ಚುವುದರಿಂದ ಬರುವ ರೇಬಿಸ್ ರೋಗದಿಂದ ಇದು ರಕ್ಷಣೆಯನ್ನು ಒದಗಿಸುತ್ತದೆ ಆದರೆ ನೂರಕ್ಕೆ ನೂರರಷ್ಟು ಪ್ರಾಣಪಾಯವೆಂಬುದು ಕಟ್ಟಿಟ್ಟ ಬುತ್ತಿ. ಯಾವುದೇ ವಯಸ್ಸಿನವರಿಗಾದರೂ ಈ ವ್ಯಾಕ್ಸಿಂಗ್ ಕೊಡಬಹುದು ಹುಚ್ಚು ನಾಯಿ ಕಚ್ಚಿದ ತಕ್ಷಣ ಒಂದು ಚುಚ್ಚುಮದ್ದು ಹಾಕಿಸಿಕೊಂಡ ಮೇಲೆ 3, 7, 14, 30 ನೇ ದಿನಗಳಲ್ಲಿ ಒಂದೊಂದು ಚುಚ್ಚುಮದ್ದನ್ನು ಕ್ರಮವಾಗಿ ಹಾಕಿಸಿಕೊಳ್ಳಬೇಕು. ಪೂರ್ತಿ ಐದು ಚುಚ್ಚುಮದ್ದುಗಳನ್ನು ತೆಗೆದುಕೊಳ್ಳದಿದ್ದರೆ ರೇಬಿಸ್ ನಿಂದ ರಕ್ಷಣೆ ಸಿಗುವುದಿಲ್ಲ. ಪಶುವೈದ್ಯ ಶಾಲೆಯಲ್ಲಿ ಕೆಲಸ ಮಾಡುವವರು ಮುಂಜಾಗ್ರತಕ್ರಮವಾಗಿ ಒಂದು ಚುಚ್ಚುಮದ್ದನ್ನು ತೆಗೆದುಕೊಂಡು ಆನಂತರ 7 ಮತ್ತು30ನೇ ದಿನಕ್ಕೆ ಮತ್ತೊಂದು ಚುಚ್ಚುಮದ್ದಿನಂತೆ ಒಟ್ಟು ಮೂರು ಚುಚ್ಚುಮದ್ದನ್ನು ಹಾಕಿಸಿಕೊಳ್ಳಬೇಕು. ಈಡೋಸ್ ಹುಚ್ಚುನಾಯಿ ಕಡಿದವರಿಗಲ್ಲ ಹುಚ್ಚುನಾಯಿ ಕಚ್ಚಿದವರು ತಪ್ಪದೆ ಐದು ಚುಚ್ಚುಮದ್ದನ್ನು ತೆಗೆದುಕೊಳ್ಳಲೇಬೇಕು.














