ಮನೆ ರಾಷ್ಟ್ರೀಯ ಲಡಾಖ್‌ ನಲ್ಲಿ 5.2ರಷ್ಟು ತೀವ್ರತೆಯ ಭೂಕಂಪ

ಲಡಾಖ್‌ ನಲ್ಲಿ 5.2ರಷ್ಟು ತೀವ್ರತೆಯ ಭೂಕಂಪ

0

ಶ್ರೀನಗರ: ಕೇಂದ್ರಾಡಳಿತ ಪ್ರದೇಶ ಲಡಾಖ್‌ ನಲ್ಲಿ ಮಂಗಳವಾರ ಬೆಳಗ್ಗೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.2ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪ ಕೇಂದ್ರ (ಎನ್‌ ಸಿಎಸ್‌) ತಿಳಿಸಿದೆ.

ಕಾರ್ಗಿಲ್‌ ನ ವಾಯವ್ಯಕ್ಕೆ 148 ಕಿಮೀ ದೂರದಲ್ಲಿ ಕಂಪನದ ಆಳವು ಭೂಮಿಯ ಮೇಲ್ಮೈಯಿಂದ 10 ಕಿ.ಮೀ ಕೆಳಗೆ ದಾಖಲಾಗಿದೆ. ಭೂಕಂಪನದ ಹೊರತಾಗಿಯೂ, ಯಾವುದೇ ಹಾನಿಯ ಬಗ್ಗೆ ವರದಿಗಳು ಬಂದಿಲ್ಲ.

ಮಂಗಳವಾರ ಜಮ್ಮುವಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡುತ್ತಿದ್ದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.  ಬೆಳಗ್ಗೆ 11.30ಕ್ಕೆ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಲಿದ್ದಾರೆ.

ಹಿಂದಿನ ಲೇಖನ9 ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿ ಶವ ಕಾಡಿನಲ್ಲಿ ಪತ್ತೆ
ಮುಂದಿನ ಲೇಖನಪಿಎಸ್ಐ ಅಮಾನತಿಗೆ ಆಗ್ರಹಿಸಿ ರಾಮನಗರದಲ್ಲಿ ವಕೀಲರ ಅಹೋರಾತ್ರಿ ಧರಣಿ: ಪೊಲೀಸ್​ ಬಿಗಿ ಭದ್ರತೆ