ಮನೆ ರಾಜ್ಯ ಕುಷ್ಟಗಿ: ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಕಂಟೈನರ್

ಕುಷ್ಟಗಿ: ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಕಂಟೈನರ್

0

ಕುಷ್ಟಗಿ: ಪಟ್ಟಣದ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯ ಎಸ್ ಬಿ ಪೆಟ್ರೋಲ್ ಬಂಕ್ ಬಳಿ ಚಲಿಸುತ್ತಿದ್ದ ಕಂಟೈನರ್ ಕ್ಯಾಬಿನ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಧಗ ಧಗನೇ ಹೊತ್ತಿ ಉರಿದಿದೆ.

ಟೋಯೊಟಾ ಕಂಪನಿಯ ಕಾರುಗಳನ್ನು ಹೇರಿಕೊಂಡು ಬೆಂಗಳೂರಿಗೆ ಹೊರಟಿದ್ದ ಕಂಟೈನರ್ ನಲ್ಲಿ ಇದ್ದಕ್ಕಿದ್ದಂತೆ ಕ್ಯಾಬಿನ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಹೊಗೆಯಾಡುತ್ತಿರುವುದು ಚಾಲಕನ ಗಮನಕ್ಕೆ ಬಂದಿದೆ.

ಕೂಡಲೇ ಕಂಟೈನರ್ ನಿಲ್ಲಿಸುತ್ತಿದ್ದಂತೆ ಬೆಂಕಿ ಇಡೀ ಕ್ಯಾಬೀನ್ ಆವರಿಸಿದ ಸಂದರ್ಭದಲ್ಲಿ ಗಾಳಿಯೂ ಇದ್ದಿದ್ದರಿಂದ ಬೆಂಕಿಯ ತೀವ್ರತೆ ಜಾಸ್ತಿಯಾಗಿತ್ತು. ಕೂಡಲೇ ಅಗ್ನಿಶಾಮಕ ವಾಹನ ದೌಡಾಯಿಸಿ ಬೆಂಕಿ ನಿಯಂತ್ರಿಸಿದೆ.

ಠಾಣಾಧಿಕಾರಿ ನೇತೃತ್ವದಲ್ಲಿ 15 ನಿಮಿಷಗಳ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಸಿಬ್ಬಂದಿಗಳು ಜೀವದ ಹಂಗು ತೊರೆದು ನಿರ್ವಹಿಸಿದ್ದಾರೆ.