ಮನೆ ಅಪರಾಧ ಪಿರಮಿಡ್ ವಂಚನೆ: ‘ಆ್ಯಮ್‌ ವೇ ಇಂಡಿಯಾದ 757 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ

ಪಿರಮಿಡ್ ವಂಚನೆ: ‘ಆ್ಯಮ್‌ ವೇ ಇಂಡಿಯಾದ 757 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ

0

ನವದೆಹಲಿ: ಜಾರಿ ನಿರ್ದೇಶನಾಲಯ (ಇಡಿ) ಸೋಮವಾರದಂದು ಆ್ಯಮ್‌ ವೇ ಇಂಡಿಯಾ ಎಂಟರ್‌ ಪ್ರೈಸಸ್‌ ನ ಮಾರ್ಕೆಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ರೂ.೭೫೭.೭೭ ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿತು.

ವಶಕ್ಕೆ ಪಡೆದುಕೊಂಡ ಆಸ್ತಿಗಳ ಪೈಕಿ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿರುವ ಆ್ಯಮ್‌ ವೇ ಸಂಸ್ಥೆಯ ಭೂಮಿ, ಕಾರ್ಖಾನೆ ಕಟ್ಟಡ, ಯಂತ್ರೋಪಕರಣಗಳು, ವಾಹನಗಳು ಬ್ಯಾಂಕ್ ಖಾತೆಗಳು ಹಾಗೂ ಸ್ಥಿರ ಠೇವಣಿಗಳು ಸೇರಿವೆ.

ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕೈಗೊಂಡಂತಹ ತನಿಖೆಯು, ಆ್ಯಮ್‌ ವೇ ನೇರ ಮಾರಾಟ ಮಲ್ಟಿ-ಲೆವೆಲ್ ಮಾರ್ಕೆಟಿಂಗ್ ನೆಟ್‌ವರ್ಕ್ ನ ಸೋಗಿನಲ್ಲಿ ಪಿರಮಿಡ್ ವಂಚನೆಯನ್ನು ನಡೆಸುತ್ತಿರುವ ಅಂಶವನ್ನು ಬಹಂರಂಗಪಡಿಸಿದೆ,” ಎಂದು ಜಾರಿ ನಿರ್ದೇಶನಾಲಯದ ಒಂದು ಹೇಳಿಕೆ ಬಹಿರಂಗಪಡಿಸಿದೆ.

ಸಂಸ್ಥೆಯ ಬಹುಪಾಲು ಉತ್ಪನ್ನಗಳ ಬೆಲೆಗಳು, ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರೆ ಜನಪ್ರಿಯ ಸಂಸ್ಥೆಯ ಉತ್ಪನ್ನಗಳ ಹೋಲಿಕೆಯಲ್ಲಿ ಬಹಳ ದುಬಾರಿಯಾಗಿವೆ.

ವಾಸ್ತವಾಂಶಗಳ ಬಗ್ಗೆ ಸರಿಯಾದ ಮಾಹಿತಿ ಲಭ್ಯವಿಲ್ಲದಿರುವಂತಹ ಸಾಮಾನ್ಯ ಜನರು ಆ್ಯಮ್‌ ವೇ ವಂಚನೆ ಒಳಗಾಗಿ ದುಬಾರಿ ಬೆಲೆ ತೆತ್ತು ಆ್ಯಮ್‌ ವೇ ಸಂಸ್ಥೆಯ ಉತ್ಪನ್ನಗಳನ್ನು ಖರೀದಿಸಿ ತಮ್ಮ ಕಷ್ಟ ಪಟ್ಟ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ,” ಎಂದು ಆರೋಪಿಸಲಾಗಿದೆ.

ಮುಂದುವರೆದು, ಹೊಸ ಸದಸ್ಯರು, ತಮ್ಮ ಅಫ್ ಲೈನ್ ಸದಸ್ಯರ ಸೂಚನೆಯ ಪ್ರಕಾರ ಈ ಸಂಸ್ಥೆಯ ಉತ್ಪನ್ನಗಳನ್ನು ಬಳಕೆಗಾಗಿ ಅಲ್ಲದೆ, ಮರು ಮಾರಾಟಕ್ಕಾಗಿ ಖರೀದಿಸುತ್ತಿರುವ ಅಂಶವನ್ನು ಇಡಿ ಎತ್ತಿ ತೋರಿಸಿದೆ.