ಮನೆ ಸುದ್ದಿ ಜಾಲ ಹಿರಿಯ ಪತ್ರಕರ್ತ  ಸಿ.ಮಹೇಶ್ವರನ್ ನಿಧನ

ಹಿರಿಯ ಪತ್ರಕರ್ತ  ಸಿ.ಮಹೇಶ್ವರನ್ ನಿಧನ

0

ಮೈಸೂರು(Mysuru): ಶತಮಾನ ಕಂಡ ಸಾಧ್ವಿ(Saadwi) ಪತ್ರಿಕೆಯ(Paper) ಸಂಪಾದಕ(Editor) ಸಿ.ಮಹೇಶ್ವರನ್ (C.maheshwaran) (65) ನಿಧನರಾಗಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆದು ನಾಲ್ಕು ದಿನಗಳ ಹಿಂದೆ ಮನೆಗೆ ಹಿಂತಿರುಗಿದ್ದರು. ಆದರೆ ಮಂಗಳವವಾರ ಚಾಮುಂಡಿಬೆಟ್ಟದ ತಪ್ಪಲಿನ ಕೆ. ಸಿ.ಲೇಔಟ್​​ನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ(Heart attack) ಕೊನೆಯುಸಿರೆಳೆದಿದ್ದಾರೆ.

ಮೈಸೂರಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಅಗರಂ ರಂಗಯ್ಯ ಅವರು ಪ್ರಾರಂಭಿಸಿದ್ದ ಸಾಧ್ವಿ ಪತ್ರಿಕೆ ಸ್ವಾತಂತ್ರ್ಯ ಹೋರಾಟದ ವೇಳೆ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿತ್ತು. ಪರಿಣಾಮ, ನಾಲ್ಕು ಬಾರಿ ಪತ್ರಿಕೆ ಕಚೇರಿ ಮೇಲೆ ದಾಳಿ ಮಾಡಿದ್ದ ಬ್ರಿಟಿಷರು ಪತ್ರಿಕೆಯ ಮುದ್ರಣೋಪಕರಣಗಳನ್ನು ಜಪ್ತಿ ಮಾಡಿದ್ದು ಇತಿಹಾಸ.

ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಕೊಡ ಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಇವರು ಭಾಜನರಾಗಿದ್ದರು. ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು, ಸಾಧ್ವಿ ಬಳಗ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಉಸ್ತುವಾರಿ ಸಚಿವರ ಸಂತಾಪ

ಐತಿಹಾಸಿಕ ಮಹತ್ವಹೊಂದಿದ “ಸಾಧ್ವಿ” ಕನ್ನಡ ಸಂಜೆ ದಿನಪತ್ರಿಕೆಯ ಸಂಪಾದಕರು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ಹಿರಿಯ ಪತ್ರಕರ್ತ ಹಾಗೂ ಲೇಖಕ ಸಿ.ಮಹೇಶ್ವರನ್ ಅವರ ನಿಧನಕ್ಕೆ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಶತಮಾನದ ಇತಿಹಾಸ ಹೊಂದಿರುವ ಸಾಧ್ವಿ ಪತ್ರಿಕೆಯನ್ನು 1995ರಿಂದ ನಡೆಸಿಕೊಂಡು ಬಂದಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಾಗೂ ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಸಾಧ್ವಿ ಪತ್ರಿಕೆ ಮಹತ್ವದ ಪಾತ್ರ ವಹಿಸಿತ್ತು. ಅಗರಂ ರಂಗಯ್ಯ ಅವರ ನಂತರ ಇಂತಹ ಐತಿಹಾಸಿಕ ಮಹತ್ವದ ಪತ್ರಿಕೆಯನ್ನು ತುಂಬಾ ಜವಾಬ್ದಾರಿಯಿಂದ ಸಿ.ಮಹೇಶ್ವರನ್ ಅವರು ಮುನ್ನಡೆಸಿದ್ದರು.

ಪತ್ರಕರ್ತರಾಗಿ ಸಾಮಾಜಿಕ ಕಳಕಳಿ ಹೊಂದಿದ್ದ ಇವರು ಮಾದಕ ವಸ್ತುಗಳ ಬಳಕೆ ವಿರುದ್ಧ ಹೋರಾಡಿದ್ದರು. ಯುವ ಪೀಳಿಗೆಗೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಹಲವು ಪುಸ್ತಕಗಳನ್ನು ಬರೆದಿದ್ದರು. ಇವರು ಪತ್ರಿಕೋದ್ಯಮ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ  ಸೇವೆಯನ್ನು ಪರಿಗಣಿಸಿ  ರಾಜ್ಯ ಸರ್ಕಾರ 2020ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ಸಿ.ಮಹೇಶ್ವರನ್ ಅವರ ಅಗಲಿದೆ ತುಂಬಲಾರದ ನಷ್ಟ ಉಂಟುಮಾಡಿದೆ. ಅವರ ಕುಟುಂಬ ಹಾಗೂ ಬಂಧು ಬಳಗದವರಿಗೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅನುಗ್ರಹಿಸಲಿ ಎಂದು ಸಚಿವರು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.