ಮನೆ ರಾಜಕೀಯ ಕರೆಯದೇ ಊಟಕ್ಕೆ ಹೋಗುವವನು ನಾನಲ್ಲ: ಎಸ್.ಎ.ರಾಮದಾಸ್

ಕರೆಯದೇ ಊಟಕ್ಕೆ ಹೋಗುವವನು ನಾನಲ್ಲ: ಎಸ್.ಎ.ರಾಮದಾಸ್

0

ಮೈಸೂರು: ಕರೆದಾಗ ಮಾತ್ರ ಊಟಕ್ಕೆ ಹೋಗುತ್ತೇನೆ. ಕರೆಯದೆ ಊಟಕ್ಕೆ ಹೋಗುವವನು ನಾನಲ್ಲ. ಮಂತ್ರಿ ಸ್ಥಾನ ಕೊಟ್ಟರೇ ರಾಜ್ಯ ಸುತ್ತಿ ಕೆಲಸ ಮಾಡುತ್ತೇನೆ. ಇಲ್ಲವಾದರೆ ನನ್ನಿಂದ ಸರ್ಕಾರಕ್ಕೆ ಉಪಯೋಗವಾಗುವ ಕೆಲಸ ಮಾಡುತ್ತೇನೆ ಎಂದು ಶಾಸಕ ಎಸ್.ರಾಮದಾಸ್ ತಿಳಿಸಿದರು.

ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಗೊತ್ತಿಲ್ಲ. ಮಂತ್ರಿ ಮಾಡುತ್ತಾರಾ ಬಿಡುತ್ತಾರಾ ಗೊತ್ತಿಲ್ಲ. ನಾನು ರಾಜ್ಯದ ಸಿಎಂ ಅಲ್ಲ ಹಾಗಾಗಿ ನನಗೆ ಗೊತ್ತಿಲ್ಲ. ಸ್ಥಳೀಯರಿಗೆ ಸಚಿವ ಸ್ಥಾನ ನೀಡುವ ವಿಚಾರ. ಚಾಣಕ್ಯನ ಕಾಲ ಕಾಮರಾಜರ ಕಾಲದಿಂದಲೂ ಸ್ಥಳೀಯರಿಗೆ ಆದ್ಯತೆ. ಸಿಎಂ ಬುದ್ದಿವಂತರಿದ್ದಾರೆ, ಸಮರ್ಥರಿದ್ದಾರೆ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು.

ಗ್ಯಾಸ್ ಲೈನ್ ಪೈಪ್ ಅಳವಡಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಯೋಜನೆ ವಿರೋಧಿ ಅಲ್ಲ. ಆ ವಿಷಯ ಚರ್ಚೆ ಮಾಡೋಣ ಅಂತಾ ಅಷ್ಟೇ ಹೇಳಿದ್ದೆ. ಈ ವಿಚಾರವಾಗಿ ನಾನು ಮಾಧ್ಯಮದ ಮುಂದೆ ಏನನ್ನು ಹೇಳುವುದಿಲ್ಲ. ಸಂಸದ ಪ್ರತಾಪಸಿಂಹ ನನ್ನ ಚಿಕ್ಕ ತಮ್ಮನ ರೀತಿ. ಅವರ ಜೊತೆ ಮಾತನಾಡಿ ಬಗೆಹರಿಸಿಕೊಳ್ಳುತ್ತೇನೆ. ನಾನು ಸಂಘರ್ಷಕ್ಕೆ ಹೋಗುವ ವ್ಯಕ್ತಿಯಲ್ಲ. ರಾಜ್ಯದ ಅಧ್ಯಕ್ಷರು ತಂದೆ ಸ್ಥಾನದಲ್ಲಿದ್ದಾರೆ. ಅವರು ಕರೆದರೆ ನಾನು ಹೋಗಿ ಮಾತನಾಡುತ್ತೇನೆ ಎಂದು ಹೇಳಿದರು.

ಹಿಂದಿನ ಲೇಖನಗೆಳತಿ ಜೊತೆ ಸಪ್ತಪದಿ ತುಳಿಯಲು ಸಜ್ಜಾದ ಫರ್ಹಾನ್ ಅಖ್ತರ್
ಮುಂದಿನ ಲೇಖನಮಳಿಗೆ ಹರಾಜು ಪ್ರಶ್ನಿಸಿದ್ದಕ್ಕೆ ವ್ಯಕ್ತಿ ಮೇಲೆ ಪಿಡಿಒ ಹಲ್ಲೆಗೆ ಯತ್ನ: ಆರೋಪ