ನಾವು ದಿನನಿತ್ಯದ ಪ್ರಾಣಾಯಾಮಗಳಲ್ಲಿ ಅನುಸರಿಸುವ, ಮುದ್ರಾ ವಿಜ್ಞಾನದ ಮುದ್ರೆಗಳ ಬಗೆಗೆ ಮತ್ತು ನಮ್ಮ ಆರೋಗ್ಯದ ದೃಷ್ಟಿಯಿಂದ ಅವುಗಳ ಪ್ರಯೋಜನಗಳ ಬಗ್ಗೆ ಒಂದಿಷ್ಟು ತಿಳಿಯೋಣ…..
“ಮುದ್ರೆ” ಇದು ಸಂಸ್ಕೃತ ಶಬ್ದ. ಅದರ ಅರ್ಥ ಕೀಲಿ, ಬೀಗ ಅಥವಾ ಮೊಹರು ಎಂದು. ಈ ಮುದ್ರಾ ವಿಜ್ಞಾನವನ್ನು ಮನುಕುಲಕ್ಕೆ ನಮ್ಮ ಋಷಿಮುನಿಗಳು ಕೊಟ್ಟ ಮತ್ತೊಂದು ಅಮೂಲ್ಯವಾದ ಕಾಣಿಕೆ ಅನ್ನಬಹುದು ನಮ್ಮ ಶರೀರವು ಪಂಚಗಳಿಂದ ಉತ್ಪತ್ತಿಯಾಗಿರುವುದು ನಮಗೆಲ್ಲ ಈಗಾಗಲೇ ತಿಳಿದಿರುವ ಸಂಗತಿಯೇ.. ಇದು ತತ್ವಗಳ ಕಾರ್ಯ ದೇಹದಲ್ಲಿ ಸರಿಯಾದ ರೀತಿಯಲ್ಲಿ ನಡೆದರೆ ಆರೋಗ್ಯ ಸರಿಯಾಗಿರುತ್ತದೆ. ಅದರಲ್ಲಿ ಸ್ವಲ್ಪ ಏರುಪೇರಾದರು ಆರೋಗ್ಯ ಇಡುತ್ತದೆ ಮತ್ತು ಆ ಐದು ತತ್ವಗಳು ಎರಡು ಕೈ ಮತ್ತು ಕಾಲುಗಳ ಬೆರಳುಗಳಲ್ಲಿ ಈ ಕೆಳಗಿನಂತೆ ಸೃಷ್ಟಿಕರ್ತನಿಂದ ಮರು ಸ್ಥಾಪಿಸಲ್ಪಟ್ಟಿದೆ.
1.ಹಬ್ಬೆರಳು ಅಗ್ನಿ ಅಥವಾ ಸೂರ್ಯನನ್ನು
2. ತೋರುಬೆರಳು ವಾಯುವನ್ನು
3. ನಡುವಿನ ಅಥವಾ ಮಧ್ಯದ ಬೆರಳು ಆಕಾಶವನ್ನು
4. ಉಂಗುರದಬೆರಳು ಭೂಮಿ ಅಥವಾ ಪೃಥ್ವಿಯನ್ನು
5. ಕಿರುಬೆರಳು ನೀರು ಅಥವಾ ಜಲವನ್ನು ಪ್ರತಿನಿಧಿಸುತ್ತದೆ…..
ಈ ಬೆರಳುಗಳ ವಿವಿಧ ರೀತಿಯ ಮುದ್ರೆಗಳಿಂದ ದೇಹದಲ್ಲಿನ ಪಂಚ ಮಹಾಭೂತಗಳ ಐದು ತತ್ವಗಳ ಸಮತೋಲನವನ್ನು ಸಾಧಿಸಿ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಇವುಗಳ ನಿಯಮಿತ ಅಭ್ಯಾಸದಿಂದ ಅದ್ಭುತವಾದ ಪರಿಣಾಮ ಮತ್ತು ಪ್ರಯೋಜನಗಳು ನಮಗೆ ದೊರೆಯುತ್ತದೆ. ಈ ಮುದ್ರೆಗಳು ಬಹಳ ಇವೆ. ಧ್ಯಾನ, ಚಿಕಿತ್ಸೆ ಮತ್ತು ನರ್ತನ ಶಾಸ್ತ್ರಕ್ಕಾಗಿಯೇ ಬೇರೆ ಬೇರೆ ಮುದ್ರೆಗಳಿದ್ದು ಅವುಗಳಲ್ಲಿ ಕೆಲವು ಧ್ಯಾನ ಸಾಧನೆಗೆ ಉಪಯೋಗಿಸಲಾಗುತ್ತದೆ.
ಅವುಗಳಲ್ಲಿ ಯೋಗಭ್ಯಾಸ ಮತ್ತು ಧ್ಯಾನ ಜೊತೆಗೆ ಚಿಕಿತ್ಸೆಗೆ ನಮಗೆ ಹೆಚ್ಚು ಉಪಯುಕ್ತವೆನಿಸಿದ ಆಯ್ದ ಮುದ್ರೆಗಳನ್ನು ಮಾತ್ರ ಇಲ್ಲಿ ಮುಂದೆ ವಿವರಿಸಲಾಗಿದೆ. ವಿಶೇಷವಾಗಿ ನಾವು ಧ್ಯಾನ ಮಾಡುವಾಗ ಮನಸ್ಸನ್ನು ಹತೋಟಿಯಲ್ಲಿರಿಸಿಕೊಳ್ಳುವುದು ಅತ್ಯಂತ ಅವಶ್ಯವಾದುದು. ಹೀಗಾಗಿ ಧ್ಯಾನ ಮಾಡುವಾಗ ಅದಕ್ಕೆ ತಕ್ಕ ಮುದ್ರೆಗಳ ಜೊತೆಗೆ ಮಾಡಿದರೆ ಜ್ಞಾನದ ಫಲಿತ ಸಾಧನೆ ಮತ್ತು ಫಲ ಸುಲಭ ಸಾಧ್ಯ.
1.ಧ್ಯಾನ ಮುದ್ರೆ :-ಹೆಬ್ಬೆರಳು ಮತ್ತು ತೋರು ಬೆರಳುಗಳನ್ನು ವೃತ್ತಾಕಾರದಲ್ಲಿ ತುದಿಗೆ ತುದಿ ಸ್ಪರ್ಶಿಸಿ ಉಳಿದ ಬೆರಳುಗಳನ್ನು ನೇರವಾಗಿ ಚಾಚಿದ ಸ್ಥಿತಿಯಲ್ಲಿರಿಸಿಕೊಳ್ಳುವುದು-ಇದಕ್ಕೆ ಜ್ಞಾನ ಮುದ್ರೆ ಅಥವಾ ಚಿನ್ಮುದ್ರೆ ಎಂದು ಹೇಳುತ್ತಾರೆ. ಇದು ತುಂಬಾ ಪ್ರಯೋಜನಕಾರಿಯಾದ ಮುದ್ರೆ. ಇದರಿಂದ ಮೆದುಳಿನ ಶಕ್ತಿ, ಏಕಾಗ್ರತೆ, ಜ್ಞಾಪಕಶಕ್ತಿ ಹೆಚ್ಚುತ್ತದೆ ಮತ್ತು ಪ್ರಾಣಮುದ್ರೆಯೊಂದಿಗೆ ಮಾಡಿದರೆ ನಿದ್ರಾಹೀನತೆ ವಾಸಿ, ಕೋಪ-ತಾಪಗಳು ಕಡಿಮೆ, ಒತ್ತಡ ಮತ್ತು ಖಿನ್ನತೆ ಕಡಿಮೆಯಾಗುತ್ತವೆ. ನೆಮ್ಮದಿ ದೊರೆತು ಮನಸ್ಸು ಶಾಂತವಾಗುತ್ತದೆ. ಇದನ್ನು ಧ್ಯಾನಕ್ಕೆ ಅತ್ಯುತ್ತಮ ಮತ್ತು ಅತ್ಯವಶ್ಯಕ ಸಾಧನವಾಗಿದೆ.
2. ಪ್ರಾಣ ಮುದ್ರೆ :- ಎರಡು ಕೈಗಳ ಕಿರುಬೆರಳು ಮತ್ತು ಉಂಗುರ ಬೆರಳು (ಅನಾಮಿಕ) ಬೆರಳುಗಳ ತುದಿಗಳನ್ನು ಒತ್ತಡವಿಲ್ಲದೆ ಹೆಬ್ಬೆರಳ ತುದಿಗೆ ತಾಕಿಸಿಕೊಂಡಿರುವುದು. ಉಳಿದ ಬೆರಳುಗಳು ನೇರವಾಗಿ ಚಾಚಿಕೊಂಡಿರಲಿ. ಅಂಗೈ ಆಕಾಶ ನೋಡುತ್ತಿರಲಿ ಇದು ಕೂಡ ಮುಖ್ಯವಾದ ಮುದ್ರೆ. ದೇಹದ ರಕ್ತಪರಚಲನೆಯನ್ನು ತೀವ್ರಗೊಳಿಸಿ, ರಕ್ತನಾಳದ ಅಡೆತಡೆಗಳನ್ನು ನಿವಾರಿಸುತ್ತದೆ. ಇದನ್ನು ಕೂಡ ಯಾವುದೇ ಸಮಯದಲ್ಲಿ (ಸಂಜೆ ವೇಳೆ ಬೇಡ ಇದು ತುಂಬಾ ಚೈತನ್ಯದಾಯಕವಾದ್ದರಿಂದ ನಿದ್ರೆಗೆ ತೊಂದರೆಯಾಗಬಹುದು) ಯಾವುದೇ ಆಸನದಲ್ಲಿ ಕುಳಿತು, ನಿಂತು, ಅಡ್ಡಾಡುವಾಗ, ಮಲಗಿದಾಗ, ಓಡಾಡುವಾಗ, ಎಷ್ಟು ಹೊತ್ತು ಬೇಕಾದರೂ ಮಾಡಬಹುದು. ಮಾಡಿದಷ್ಟು ಲಾಭ. ಸುಪ್ತ ಪ್ರಾಣಶಕ್ತಿ ಹೆಚ್ಚಳ, ನರ ದೌರ್ಬಲ್ಯ, ಆಯಾಸ (fatigue) ಪರಿಹಾ̧ರ, ರೋಗನಿರೋಧಕ ಶಕ್ತಿ ಹೆಚ್ಚಳ ಕಣ್ಣಿನ ಶಕ್ತಿ ಹೆಚ್ಚಿ ಕನ್ನಡಕ ದೂರ. ಇದರ ಅಭ್ಯಾಸದಿಂದ ದುರ್ಬಲ ವ್ಯಕ್ತಿಯ ಸಬಲನಾಗುತ್ತಾನೆ. ವೀರ್ಯವೃದ್ಧಿಯಾಗಿ ಸಮರ್ಥನಾಗುತ್ತಾನೆ. ಇತ್ಯಾದಿ ̧A, B, C, D, E ಜೀವ ಸತ್ವಗಳ ಕೊರತೆ ನೀಡುತ್ತದೆ, ಇದರ ಸತತ ಅಭ್ಯಾಸದಿಂದ ಬಹು ಸಮಯ ಆಹಾರ, ನೀರಿಲ್ಲದೆ (ಹಸಿವು ಬಾಯಾರಿಕೆಗಳಿಂದ) ಇರಬಹುದು.
ಧ್ಯಾನ ಮುದ್ರೆ ಮತ್ತು ಪ್ರಾಣ ಮುದ್ರೆಗಳ ಕಾರ್ಯ ವೈಶಿಷ್ಟ:-
ಸಾಮಾನ್ಯವಾಗಿ ಪದ್ಮಾಸನ, ವಜ್ರಾಸನ ಮತ್ತು ಸುಖಾಸನಗಳಲ್ಲಿ ಕುಳಿತು ಕೈಗಳನ್ನು ತೊಡೆಗಳ ಮೇಲೆ ಅಂಗೈಗಳನ್ನು ಆಕಾಶ ನೋಡುವಂತೆ ಇರಿಸಿಕೊಂಡು, ಮುದ್ರೆಗಳನ್ನು ಮಾಡಬೇಕು ಮತ್ತು ಅವಶ್ಯಕತೆ ಅನುಗುಣವಾಗಿ ಅವುಗಳ ಅವಧಿಯನ್ನು ನಿಗದಿಪಡಿಸಲಾಗಿದೆ ಇವು ನಿಯಮಗಳು. ಈ ನಿಯಮಗಳು ಧ್ಯಾನ ಮುದ್ರೆ ಮತ್ತು ಪ್ರಾಣ ಮುದ್ರೆಗಳಿಗೆ ಅನ್ವಯವಾಗುವುದಿಲ್ಲ. ಅಷ್ಟೇ ಅಲ್ಲ, ಇವುಗಳನ್ನು ನಡೆಯುವಾಗ, ಮಲಗಿರುವಾಗ, ಬೇರೆಯವರೊಂದಿಗೆ ಮಾತನಾಡುತ್ತಾ ಕುಳಿತಿರುವಾಗ,-ಎಲ್ಲಿ ಬೇಕಾದಲ್ಲಿ, ಎಷ್ಟು ಬೇಕಾದಷ್ಟು ಹೊತ್ತು ಮಾಡಿದರು ಸರಿಯೇ. ಮಾಡಿದಷ್ಟು ಒಳ್ಳೆಯದೇ, ಲಾಭವೇ.
ಮುಂದುವರೆಯುತ್ತದೆ…