ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಜಗ್ಗು : ಏನಾಯ್ತು ರಿಸಲ್ಟ್ !?

ಮಗ : 5 ಸಬ್ಜೆಕ್ಟ್ ನಲ್ಲಿ ಫೇಲು ಅಪ್ಪ..

ಜಗ್ಗು : ಇನ್ನು ನೀನು ನನ್ನ ಅಪ್ಪ ಅಂತ ಕರಿಬೇಡ.

ಮಗ : ಸರಿ ಕಣೋ ಐದು ಸಬ್ಜೆಟ್ಟಿನಲ್ಲಿ ಹೋಯ್ತು ಕಣ್ಲೇ……..

***

ರಂಗಣ್ಣ : ಡಾಕ್ಟರ್, ಈ ಕಾಯಿಲೆ ನನಗೊಂದು ಸಮಸ್ಯೆ ಆಗಿ ಹೋಗಿದೆ.

ಡಾಕ್ಟರ್ : ಏನು ನಿನ್ನ ಕಾಯಿಲೆ?

ರಂಗಣ್ಣ : ಮರೆವು ಡಾಕ್ಟರೇ, ಎಲ್ಲ ಮರೆತು ಹೋಗುತ್ತೇ. ಅದೇ ದೊಡ್ಡ ಸಮಸ್ಯೆ.

ಡಾಕ್ಟರ್ : ಈ ಸಮಸ್ಯೆ ಯಾವಾಗಿನಿಂದ ?

ರಂಗಣ್ಣ:  ಯಾವ ಸಮಾಸ್ಯೆ ಡಾಕ್ಟರ್

***

ಮ್ಯಾಜಿಸ್ಟ್ರೇಟ್ : ಈ ಆಫೀಸರ್ ಹೇಳಿದ್ರು ನಿಮಗೂ ನಿಮ್ಮ ಹೆಂಡತಿ ನಡುವೆ ಜೋರು ಜೋರಾಗಿ ಮಾತುಕತೆಯಾಯಿತಂತೆ. ಏನ್ ಹೇಳ್ತೀರಾ ?

ಆರೋಪಿ  : ಮಾತುಕತೆ ಆದದ್ದೇನು ನಿಜ ಸರ್, ಆದರೆ ಮಾತೆಲ್ಲ ಅವಳದೇ.

***

ಲತಾ : ವಯಸ್ಸಾದ ಮೇಲೆ ನಿಮ್ಮತ್ತೆ ಹೊಟ್ಟೆಗೆ ತಿನ್ನೋದು ಕಡಿಮೆ ಮಾಡಿದ್ದಾರೆ ಅಂತೆ,

ಗೌರಿ :  ಹೌದು ಹೊಟ್ಟೆಗೆ ತಿನ್ನೋದು ಕಡಿಮೆ ಮಾಡಿದ್ದಾರೆ. ಆದರೆ, ಸಿಕ್ಕ ಸಿಕ್ಕವರ ತಲೆ ತಿನ್ನೋದು ಹೆಚ್ಚು ಮಾಡಿದ್ದಾರೆ.

ಹಿಂದಿನ ಲೇಖನಮುದ್ರೆಗಳು -17
ಮುಂದಿನ ಲೇಖನಜೀವನದಲ್ಲಿ ಮಿತಿಯಿಲ್ಲದ ಉತ್ಸಾಹ ಹೊಂದಿರುವ 5 ರಾಶಿಗಳು ಯಾವುವು ಗೊತ್ತೆ ?