ಮನೆ ಸಾಹಿತ್ಯ ಭಾವೋನ್ಮಾದವನ್ನು ಅನುಕಂಪದಿಂದ ಕಾಣಿರಿ

ಭಾವೋನ್ಮಾದವನ್ನು ಅನುಕಂಪದಿಂದ ಕಾಣಿರಿ

0

ಚೀನಾದ ಒಬ್ಬ ವೃದ್ದೆಯು 20 ವರ್ಷಗಳ ಕಾಲ ಒಬ್ಬ ಸನ್ಯಾಸಿಯನ್ನು ನೋಡಿಕೊಳ್ಳುತ್ತಿದ್ದಳು. ಅವನಿಗಾಗಿ ಒಂದು ಚಿಕ್ಕ ಗುಡಿಸಲನ್ನು ಕಟ್ಟಿಕೊಟ್ಟು ಅವನಿಗೆ ಆಹಾರ ನೀಡುತ್ತಿದ್ದಳು. ಆತ ತನ್ನ ಇಡೀ ಸಮಯವನ್ನು ಧ್ಯಾನದಲ್ಲಿ ಕಳೆಯುತ್ತಿದ್ದನು.

ಈ ಅವಧಿಯಲ್ಲಿ ಕೊನೆಯಲ್ಲಿ ಆತ ಹೇಗೆ ಪ್ರಗತಿಯನ್ನು ಸಾಧಿಸುತಿದ್ದಾನೆಂದು ತಿಳಿಯಲು ಆಕೆ ಆಲೋಚಿಸಿದಳು. ಆಕಾಂಕ್ಷೆಗಳಿಂದ ಉನ್ಮತಳಾದ ಹುಡುಗಿಯೊಬ್ಬಳ ಸಹಾಯದಿಂದ ಅವನ ಪರೀಕ್ಷೆ ಮಾಡಲು ಯೋಚಿಸಿದಳು. “ಗುಡಿಸಲೊಳಗೆ ಹೋಗು. ಅವನನ್ನು ಅಪ್ಪಿಕೊ” ಎಂದು ಅವಳಿಗೆ ಹೇಳಿದಳು. ಹುಡುಗಿಯು ರಾತ್ರಿ ಅಲ್ಲಿಗೆ ಹೋದಾಗ ಸನ್ಯಾಸಿಯು ಧ್ಯಾನ ಮಾಡುತ್ತಿದ್ದನು. ಮೆಲ್ಲಗೆ ಅವನ ಬಳಿ ಹೋಗಿ “ಈಗ ನಾವೇನು ಮಾಡೋಣ?” ಎಂದು ಅವನನ್ನು ಮುದ್ದಿಸಲು ಆರಂಭಿಸಿದಳು. ಆ ಉದ್ಧಟತನವನ್ನು ನೋಡಿ ಕೋಪೋದ್ರಿಕ್ತನಾದ ಸನ್ಯಾಸಿಯು ಪೊರಕೆಯಿಂದ ಅವಳನ್ನು ಹೊಡೆದು ಅಲ್ಲಿಂದ ಹೊಡೆದು ಓಡಿಸಿದನು. 

ಹುಡುಗಿಯು ವೃದ್ದೆಯ ಮನೆಗೆ ವಾಪಸ್ಸಾಗಿ ನಡೆದ ವಿಷಯವನ್ನು ತಿಳಿಸಿದಳು.

ಪ್ರಶ್ನೆಗಳು :- 1. ವೃದ್ದೆಯ ಪ್ರತಿಕ್ರಿಯೆ ಏನಾಗಿತ್ತು?

2. ಈ ಕಥೆಯ ನಿಯತಿಯೇನು?….

ಉತ್ತರಗಳು :-1. ಹುಡುಗಿಯು ಏನಾಯಿತೆಂದು ವರದಿಮಾಡಿದಾಗ, ವೃದ್ದೆಗೆ ಸಿಟ್ಟು ಬಂತು. “ನಾನು ಆ ಮನುಷ್ಯನಿಗೆ 20 ವರ್ಷಗಳ ಕಾಲ ಊಟ ಹಾಕಿದೆ. ಅವನು ನಿನ್ನ ಅಗತ್ಯದ ಬಗ್ಗೆ ಯಾವ ತಿಳುವಳಿಕೆಯು ತೋರಿಸಲಿಲ್ಲ. ನಿನ್ನ ತಪ್ಪುಗಳನ್ನು ಸಿದ್ಧಲು ಯಾವ ವಿವೇಚನೆಯನ್ನು ತೋರಿಸಲಿಲ್ಲ. ಅವನು ನಿನ್ನ ಭಾವೋನ್ಮಾದಕ್ಕೆ ಬಲಿಯಾಗಬಾರದಿತ್ತು. ಬಹಳ ವರ್ಷಗಳ ಕಾಲ ಸಾಧನೆಯನ್ನು ಮಾಡಿದ ನಂತರ ಸ್ವಲ್ಪ ಮಟ್ಟಿಗಾದರೂ, ಅವನು ಅನುಕಂಪ ಗುಣವನ್ನು ಗಳಿಸಬೇಕಿತ್ತು.” ಎಂದು ಉದ್ಗರಿಸಿದಳು.

2. ಸಾಧನೆ ಮತ್ತುತಪಸ್ಸುಗಳನ್ನು ಆತ್ಮ ಶುದ್ಧೀಕರಣಕ್ಕೆ ಮಾಡಬೇಕೆ ಹೊರತು, ಆತ್ಮಶ್ಲಾಘನೆಗಲ್ಲ. ಪರಿಶುದ್ಧ ಆತ್ಮವನ್ನು ಹೊಂದಿದ ಒಬ್ಬ ವ್ಯಕ್ತಿಯು ನಮ್ಮ ಕಥೆಯಲ್ಲಿನ ಹುಡುಗಿಯ ಭಾಚೋನ್ಮಾದವನ್ನು ಅರಿಯುತ್ತಿದ್ದನು. ಸನ್ಯಾಸಿಯು ಆ ಹುಡುಗಿಯ ಬಗ್ಗೆ ಕೋಪನಾದುದ್ದನ್ನು ನೋಡಿದರೆ ಅವನು ಅಷ್ಟು ಕಾಲ ಎಲ್ಲವನ್ನು ಆತ್ಮಶ್ಲಾಘನೆಗಾಗಿ ಮಾತ್ರ ಮಾಡುತ್ತಿದ್ದನೆಂದು ಅರಿಯಬಹುದು. ಅವನ ಆ ವರ್ತನೆಯಲ್ಲಿ ತೀವ್ರ ಅಹಂಕಾರ ಕಾಣುತ್ತದೆ. ಪ್ರಾರ್ಥನೆ ಮತ್ತು ಧ್ಯಾನ ಮಾಡುವ ಪ್ರಕ್ರಿಯೆಯು ಎಂದೂ ಯಾವುದೇ ಕಾರಣಕ್ಕೂ ಯಾರೊಂದಿಗೂ ಕುಪಿತನಾಗಬಾರದು.