ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ʼಜೈಲರ್ʼ ಸಿನಿಮಾ ಯಶಸ್ವಿಯಾಗಿ ಓಡುತ್ತಿದ್ದು, ಈ ನಡುವೆ ಸಿನಿಮಾದ ಓಟಿಟಿ ರಿಲೀಸ್ ಗೆ ಡೇಟ್ ಅನೌನ್ಸ್ ಆಗಿದೆ.
ನೆಲ್ಸನ್ ದಿಲೀಪ್ ಕುಮಾರ್ – ರಜಿನಿಕಾಂತ್ ʼಜೈಲರ್ ʼಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಹಿಟ್ ಆಗಿದೆ. 530 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಕಾಲಿವುಡ್ ಮಾತ್ರವಲ್ಲದೆ ಇಂಡಿಯನ್ ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಲೆಕ್ಷನ್ ಮಾಡಿದೆ. ವರ್ಲ್ಡ್ ವೈಡ್ ʼಜೈಲರ್ʼ ಅಬ್ಬರವೂ ಜೋರಾಗಿದೆ.
ಆಗಸ್ಟ್ 10 ರಂದು ಸಿನಿಮಾ ತೆರೆಗೆ ಬಂದಿತ್ತು. ಕೆಲ ದಿನಗಳ ಹಿಂದಷ್ಟೇ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗುವ ಮುನ್ನವೇ ಆನ್ಲೈನ್ ನಲ್ಲಿ ಲೀಕ್ ಆಗಿತ್ತು. ಆದರೆ ಇದೀಗ ಅಧಿಕೃತವಾಗಿ ಸಿನಿಮಾದ ಓಟಿಟಿ ರಿಲೀಸ್ ಡೇಟ್ ರಿವೀಲ್ ಆಗಿದೆ.
ಅಮೇಜಾನ್ ಪ್ರೈಮ್ ನಲ್ಲಿ ಸೆ.7 ರಂದು ಸಿನಿಮಾ ಸ್ಟ್ರೀಮ್ ಆಗಲಿದೆ ಎಂದು ಪ್ರೈಮ್ ವಿಡಿಯೋ ಶನಿವಾರ(ಸೆ.2 ರಂದು) ಪೋಸ್ಟ್ ಹಾಕಿ ರಿಲೀಸ್ ಡೇಟ್ ರಿವೀಲ್ ಮಾಡಿದೆ.
2 ವರ್ಷದ ಬಳಿಕ ಸೂಪರ್ ಸ್ಟಾರ್ ರಜಿನಿಕಾಂತ್ ಬಿಗ್ ಸ್ಕ್ರೀನ್ ನಲ್ಲಿ ಕಾಣಿಸಿಕೊಂಡ ʼಜೈಲರ್ʼ ತಲೈವಾ ವೃತ್ತಿ ಜೀವನದಲ್ಲಿ ದೊಡ್ಡ ಹಿಟ್ ಆದ ಸಿನಿಮಾಗಳಲ್ಲೊಂದು.
ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ʼಜೈಲರ್ʼ ರಜಿನಿಕಾಂತ್ ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿನಾಯಕನ್, ರಮ್ಯಾ ಕೃಷ್ಣನ್, ವಸಂತ ರವಿ, ಸುನೀಲ್, ತಮನ್ನಾ ಮತ್ತು ಯೋಗಿ ಬಾಬು ಮುಂತಾದವರು ನಟಿಸಿದ್ದಾರೆ. ಮೋಹನ್ ಲಾಲ್, ಶಿವ ರಾಜ್ ಕುಮಾರ್ ಮತ್ತು ಜಾಕಿ ಶ್ರಾಫ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.














