ಮನೆ ರಾಜ್ಯ ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಹಾಳುಕೊಂಪೆಯಾಗಿದೆ: ದಿನೇಶ್ ಗುಂಡೂರಾವ್

ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಹಾಳುಕೊಂಪೆಯಾಗಿದೆ: ದಿನೇಶ್ ಗುಂಡೂರಾವ್

0

ಬೆಂಗಳೂರು(Bengaluru): ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಹಾಳುಕೊಂಪೆಯಾಗಿದೆ ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಸರಣಿ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಅವರು, ಬೊಮ್ಮಾಯಿಯವರು ಬಾಯಿ ಬಿಟ್ಟರೆ ನಮ್ಮದು ಭ್ರಷ್ಟಾಚಾರ ಮುಕ್ತ ಸರ್ಕಾರ ಎನ್ನುತ್ತಾರೆ. ಆದರೆ ಸರ್ಕಾರಿ ಕಚೇರಿಗಳಲ್ಲಿ ಲಂಚ ಕೊಡದೆ ಅತ್ತ ಇದ್ದ ಕಡತ ಇತ್ತ ಅಲುಗಾಡುವುದಿಲ್ಲ. ಸರ್ಕಾರಿ ಕಚೇರಿಗಳ ಲಂಚಾವತಾರದ ಬಗ್ಗೆ ಸ್ವತಃ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಇದು ನಾಚಿಕೆಗೇಡಿನ ಸಂಗತಿ ಎಂದು ಹರಿಹಾಯ್ದಿದ್ದಾರೆ.

ಸ್ವತಃ ಸರ್ಕಾರವೇ 40% ಪರ್ಸೆಂಟ್ ಕಮೀಷನ್ ಸರ್ಕಾರವಾಗಿರುವಾಗ ಸರ್ಕಾರಿ ಕಚೇರಿಗಳು ಶುದ್ಧವಾಗಿರಲು ಹೇಗೆ ಸಾಧ್ಯ ಆಡಳಿತ ನಡೆಸುವವರೇ 40% ದುಡ್ಡಿಗಾಗಿ ಹಾದಿ ತಪ್ಪಿ ಹೋಗಿದ್ದಾರೆ. ಹೀಗಿರುವಾಗ ಅಧಿಕಾರಿಗಳು ಲಂಚಕ್ಕೆ ಕೈಯೊಡ್ಡದೆ ಬಿಡುತ್ತಾರೆಯೇ? ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎಂಬುವಂತೆ‌ ಈ ಸರ್ಕಾರದಲ್ಲಿ ಎಲ್ಲರೂ ಲಂಚ ಮೇಯುವವರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಯಲು‌ ರಾಜ್ಯ ಬಿಜೆಪಿ ಸರ್ಕಾರಕ್ಕೇ ಸಾಧ್ಯವೇ ಇಲ್ಲ. ಯಾಕೆಂದರೆ ಈ ಸರ್ಕಾರವೇ ಭ್ರಷ್ಟಾಚಾರದ ಹುತ್ತವಿದ್ದಂತೆ. ಈ ಸರ್ಕಾರದಲ್ಲಿ ಯಾರಿಗೆ ಲಂಚ ಹೊಡೆಯಲು ಅವಕಾಶ ಸಿಕ್ಕಿಲ್ಲವೋ ಅವರು ಮಾತ್ರ ಪ್ರಾಮಾಣಿಕರಾಗಿ ಉಳಿದುಕೊಂಡಿದ್ದಾರೆ. ಅವಕಾಶ ಸಿಕ್ಕಿದರೆ ಅವರೂ ಕೂಡ ಕಡು ಭ್ರಷ್ಟರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದಿನ ಲೇಖನಮಳೆಯಿಂದ ಸಾಕಷ್ಟು ಹಾನಿಯಾದರೂ ಸರ್ಕಾರ ಪರಿಹಾರ ನೀಡಿಲ್ಲ: ಸಿದ್ದರಾಮಯ್ಯ
ಮುಂದಿನ ಲೇಖನಮಸಾಲೆಗಳ ರಾಜ ಕಾಳು ಮೆಣಸಿನ ಉಪಯೋಗ