ಮನೆ ಅಪರಾಧ ಮಂಗಳೂರು: ಯುವಕನಿಗೆ ಚೂರಿ ಇರಿತ, ಮೂವರ ಬಂಧನ

ಮಂಗಳೂರು: ಯುವಕನಿಗೆ ಚೂರಿ ಇರಿತ, ಮೂವರ ಬಂಧನ

0

ಮಂಗಳೂರು: ಯುವಕನಿಗೆ ಚೂರಿ ಇರಿದ ಘಟನೆ ಮಂಗಳೂರು ಹೊರವಲಯದ ಕಳವಾರು ಎಂಬಲ್ಲಿ ನಡೆದಿದೆ.

ಅಬ್ದುಲ್ ಸಫ್ವಾನ್‌ (23) ಚೂರಿ ಇರಿತಕ್ಕೊಳಗಾದವರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕಳವಾರಿನ ಪ್ರಶಾಂತ್ @ ಪಚ್ಚು (28), ಧನರಾಜ್ (23), ಯಾಜ್ಞೆಶ್ (22) ಎಂದು ಗುರುತಿಸಲಾಗಿದೆ.

ಕಳವಾರಿನಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ ಗಂಟೆ ರಿಯಾಜ್ ಎಂಬಾತನ ಮೇಲೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಸುರತ್ಕಲ್ ಪೊಲೀಸರು ಕಳವಾರಿನಲ್ಲಿ ದಿನಾಂಕ 03-09-2023 ರಂದು ಶಾಂತಿ ಸಭೆಯನ್ನು ನಡೆಸಿದ್ದರು. ಈ ಬಗ್ಗೆ ಹಲ್ಲೆಗೊಳಗಾದ ಅಬ್ದುಲ್ ಸಫ್ಘಾನ್ ರನ್ನು ಆರೋಪಿಗಳು ಮಾತುಕತೆಗೆ ಕರೆದಿದ್ದರು. ಪಿರ್ಯಾದಿದಾರರು ತನ್ನ ಸ್ನೇಹಿತನಾದ ಮೊಹಮ್ಮದ್ ಸಫ್ಘಾನ್ ಎಂಬಾತನೊಂದಿಗೆ ಕಳವಾರು ಗೆಳೆಯರ ಬಳಗ ಬಸ್ಸು ನಿಲ್ದಾಣದ ಬಳಿ ಬೈಕಿನಲ್ಲಿ ಬರುತ್ತಿದ್ದಾಗ ಎದರುಗಡೆಯಿಂದ ಆರೋಪಿತ ಪ್ರಶಾಂತ್ ಮತ್ತು ಧನರಾಜ್ ನ್ನು ಸಹ ಸವಾರನಾಗಿ ಕುಳ್ಳರಿಸಿಕೊಂಡು ಬಂದು ಪಿರ್ಯಾದಿಯ ಬೈಕಿಗೆ ಅವರ ಬೈಕ್ ನಿಂದ ಅಡ್ಡ ಹಾಕಿ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಧನರಾಜನು ಯಾವುದೋ ಆಯುಧದಿಂದ ಪಿರ್ಯಾದಿಯ ಕಣ್ಣಿಗೆ ಬಲವಾಗಿ ಗುದ್ದಿದ್ದಾನೆ. ಅಲ್ಲದೇ ಆರೋಪಿ ಪ್ರಶಾಂತನು ಡ್ರಾಗರ್ ಚೂರಿಯಿಂದ ಬಲ ಕಂಕುಳಕ್ಕೆ ತಿವಿದಿದ್ದಾನೆ.

ಆಗ ಅಲ್ಲಿಗೆ ಬಂದ ಇತರ ಆರೋಪಿಗಳು ಪಿರ್ಯಾದಿಗೆ ಅಚಾಚ್ಯ ಶಬ್ದಗಳಿಂದ ಬೈದು ಆರೋಪಿತ ಕಳವಾರು ಗಣೇಶನು ಪಿರ್ಯಾದಿದಾರರ ಬಲಗೈ ತೋಳಿಗೆ ಚೂರಿಯಿಂದ ಚುಚ್ಚಿದ್ದಾನೆ. ಅಷ್ಟರಲ್ಲಿ ಯಾಜ್ಞೆಶನು ಪಿರ್ಯಾದಿದಾರರ ಬೆನ್ನಿಗೆ ಚೂರಿಯಿಂದ ಚುಚ್ಚಿದ್ದಾನೆ. ಆಗ ಗೆಳೆಯ ಮೊಹಮ್ಮದ್ ಸಫ್ಘಾನ್ ತನ್ನ ಸ್ನೇಹಿತನ ರಕ್ಷಣೆಗೆ ಬಂದಾಗ ಆರೋಪಿಗಳಾದ ಪುನೀತ್, ಬಬ್ಬು ಗಣೇಶ್, ಪ್ರದೀಪ್ ಮತ್ತು ಇತರರು ಪಿರ್ಯಾದಿದಾರರ ರಕ್ಷಣೆಗೆ ಬಾರದಂತೆ ಅವನಿಗೆ ಕೈಯಿಂದ ಹೊಡೆದು ಬಿಗಿಯಾಗಿ ಹಿಡಿದುಕೊಂಡಾಗ ಅಲ್ಲಿ ಸಾರ್ವಜನಿಕರು ಸೇರುವುದನ್ನು ಕಂಡ ಆರೋಪಿಗಳು ಮುಂದಕ್ಕೆ ಎಲ್ಲಿಯಾದರೂ ಸಿಕ್ಕಿದ್ರೆ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.

ಈ ಹಲ್ಲೆಯಿಂದ ಪಿರ್ಯಾದಿಯ ಬಲ ಕಂಕುಳಕ್ಕೆ ಕಣ್ಣಿಗೆ, ಬೆನ್ನಿಗೆ, ಬಲಗೈ ತೋಳಿಗೆ ರಕ್ತ ಗಾಯವಾಗಿದ್ದು, ಪಿರ್ಯಾದಿಯು ರಿಯಾಜನಿಗೆ ಬೆಂಬಲ ನೀಡುತ್ತಿದ್ದನೆಂದು ಭಾವಿಸಿ ಆರೋಪಿಗಳೆಲ್ಲರೂ ಕೊಲೆ ಮಾಡಬೇಕೆಂಬ ಉದ್ದೇಶದಿಂದಲೇ ಈ ಹಲ್ಲೆಯನ್ನು ನಡೆಸಿದ್ದಾರೆ.

ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.