ಮನೆ ಅಪರಾಧ ಮರಕ್ಕೆ ಬೊಲೆರೊ ವಾಹನ ಢಿಕ್ಕೆ: 6 ಮಂದಿ ಸಾವು

ಮರಕ್ಕೆ ಬೊಲೆರೊ ವಾಹನ ಢಿಕ್ಕೆ: 6 ಮಂದಿ ಸಾವು

0

ಮೈಸೂರು(Mysuru): ಚಾಲಕನ ನಿಯಂತ್ರಣ ತಪ್ಪಿದ ಬೊಲೆರೊ(Bolero) ವಾಹನ ಮರಕ್ಕೆ ಢಿಕ್ಕಿ(Accident) ಹೊಡೆದ ಪರಿಣಾಮ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ(6 Died) ಘಟನೆ ಜಿಲ್ಲೆಯ ಹುಣಸೂರು(Hunsur) ತಾಲ್ಲೂಕಿನಲ್ಲಿ ನಡೆದಿದೆ.

ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಪಾಲಿಬೆಟ್ಟ ಗ್ರಾಮದ ಅನಿಲ್, ಸಂತೋಷ್, ವಿನುತ್, ರಾಜೇಶ್, ದಯಾನಂದ, ಬಾಬು ಮೃತಪಟ್ಟ ದುರ್ದೈವಿಗಳು.

ಹುಣಸೂರಿನಿಂದ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಹಿಂತಿರುಗಿ ಬರುತ್ತಿದ್ದ ಬೊಲೆರೊ ವಾಹನ ಕಲ್ಬೆಟ್ಟದ ಬಳಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಆರು ಜನ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.