ಮನೆ ರಾಜ್ಯ ತುಮಕೂರು: ಲೋಡ್ ಗಟ್ಟಲೆ ಔಷಧಿ ಮತ್ತು ಮಾತ್ರೆಗಳು ಪತ್ತೆ- ದೂರು ದಾಖಲು

ತುಮಕೂರು: ಲೋಡ್ ಗಟ್ಟಲೆ ಔಷಧಿ ಮತ್ತು ಮಾತ್ರೆಗಳು ಪತ್ತೆ- ದೂರು ದಾಖಲು

0

ತುಮಕೂರು: ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ತೆಪ್ಪೆಸಂದ್ರ ಗಿರಿನಗರದ ಬಳಿ ಲೋಡ್ ಗಟ್ಟಲೆ ಔಷಧಿ ಮತ್ತು ಮಾತ್ರೆಗಳು ಪತ್ತೆಯಾಗಿದೆ.

ಗ್ರಾಮದ ರೈತ ರಾಜು ಎಂಬುವರ ಜಮೀನನ ಹಳ್ಳದಲ್ಲಿ ಮಾತ್ರೆಗಳ ರಾಶಿ ಪತ್ತೆಯಾಗಿದ್ದು,  ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಕೂಡಲೇ ತಾಲ್ಲೂಕು ಆರೋಗ್ಯಧಿಕಾರಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.

ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕೆ ಕುಣಿಗಲ್ ಟಿಎಚ್ ಒ ಡಾ. ಮರಿಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಳಿಕ ಮಾತನಾಡಿ, ಈ ಮಾತ್ರೆಗಳು ಸರ್ಕಾರಿ ಆಸ್ಪತ್ರೆಗೆ ಸೇರಿದ ಮಾತ್ರೆಗಳಲ್ಲ. ಹಾಗೂ ಇದು ಅವಧಿ ಮುಗಿದ ಮಾತ್ರೆಗಳ ರಾಶಿ ಎಂದು ಟಿಎಚ್ಒ ಮರಿಯಪ್ಪ ಖಚಿತ ಪಡಿಸಿದ್ದಾರೆ.

ಮಾತ್ರೆಗಳ ಮೂಲ ಪತ್ತೆ ಹಚ್ಚುವಂತೆ ಪೊಲೀಸರಿಗೆ ಹಾಗೂ ಔಷಧಿ ನಿಯಂತ್ರಕರಿಗೆ ಟಿಹೆಚ್ ಓ ದೂರು ನೀಡಿದ್ದಾರೆ.