ಮನೆ ಸಾಹಿತ್ಯ ಪ್ರಾಯಶ್ಚಿತ್ತವು ಹೆಮ್ಮೆಗಿಂತ ಉತ್ತಮ

ಪ್ರಾಯಶ್ಚಿತ್ತವು ಹೆಮ್ಮೆಗಿಂತ ಉತ್ತಮ

0

ಪ್ರಾರ್ಥನೆಗೆಂದು ಪ್ರತಿದಿನವೂ ನಿಯಮಿತವಾಗಿ ಏಳುತ್ತಿದ್ದ, ಪೂರ್ವದೇಶದ ಒಬ್ಬ ಸುಲ್ತಾನನ ಕಥೆ ಇದು. ಒಮ್ಮೆ ಸುಲ್ತಾನನ ಸಮಯಕ್ಕೆ ಸರಿಯಾಗಿ ಪ್ರಾರ್ಥನೆಗೆ ಹೇಳಲು ವಿಫಲನಾದನು.

ಆಗ ಸೈತಾನ ಅವನನ್ನು ಎಬ್ಬಿಸಿ ಪ್ರಾರ್ಥನೆಗೆ ಸಿದ್ದನಾಗು ಎಂದಿತು. “ನೀನು ಯಾರು?” ಎಂದು ಸುಲ್ತಾನ ಕೇಳಿದನು. “ನಿನಗಾಗಿ ಒಳ್ಳೆಯ ಕೆಲಸಗಳನ್ನು ಮಾಡುವವರಿಗೆ ನಾನು ಯಾರೆಂದು ಯೋಚಿಸಬೇಡ” ಎಂದು ಸೈತಾನ ಹೇಳಿತು. ಇದನ್ನು ಕೇಳಿದ ಸುಲ್ತಾನ “ನಾನು ಎದ್ದು ಪ್ರಾರ್ಥನೆ ಮಾಡಬೇಕೆಂದು, ನಿನಗೆ ಬಯಸುತ್ತಿರುವೆ ನೀನೇಕೆ ಬಯಸುತ್ತಿರುವೆ ಹೇಳು ಎಂದು ಪ್ರಶ್ನಿಸಿತು ಆಯಿತು ಹೇಳು?” ಎಂದು ಸೈತಾನ ಹೇಳಿತು…

ಪ್ರಶ್ನೆಗಳು :- 1.ಸುಲ್ತಾನನಿಗೆ ಸೈತಾನ ಏನು ಹೇಳಿತು? 2. ಈ ಕಥೆಯ ನೀತಿ ಏನು ?

ಉತ್ತರಗಳು :- 1. “ನೀನು ನಿನ್ನ ಪ್ರಾರ್ಥನೆಯನ್ನು ಮರೆತು ಮಲಗಿದ್ದಾರೆ ಆ ನಂತರ ನಿನಗೆ ಬಹಳ ಬೇಸರವಾಗುತ್ತಿತ್ತು. ಇಂತಹ ಪಶ್ಚಾತಾಪವು ದೇವನಿಗೆ ಮೆಚ್ಚುಗೆಯಾಗುತ್ತದೆ. ಆದರೆ ನೀನು ಈಗಿನಂತೆ ಮುಂದುವರೆದರೆ 10 ವರ್ಷಗಳ ಕಾಲ ಒಮ್ಮೆಯೂ ಪ್ರಾರ್ಥನೆಯನ್ನು ಮರೆಯದಿದ್ದರೆ, ನಿನಗೆ ಎಷ್ಟು ತೃಪ್ತಿಯಾಗುತ್ತದೆಂದರೆ ನೀನು ಹೆಮ್ಮೆಯ ದೊಡ್ಡ ಪಾಶಕ್ಕೆ ಬಲಿಯಾಗಿ ನಾನು ಹೆಚ್ಚು ಮೆಚ್ಚುವನಾಗುವೆ” ಎಂದು ಸೈತಾನ ಹೇಳಿತು.

2. ತಪ್ಪು ಕೆಲಸ ಮಾಡಿ ಪಡುವ ಪಶ್ಚಾತಾಪವೂ ಹೆಮ್ಮೆಯೊಂದಿಗೂಡಿರುವ ಸುಗುಣಕ್ಕಿಂತ ಉತ್ತಮ.