ಮನೆ ರಾಜಕೀಯ ಎಸ್.ಡಿಪಿಐ, ಪಿಎಫ್ ಐ ಬ್ಯಾನ್ ಗೆ ಸಿದ್ಧತೆ: ಸಿ.ಟಿ ರವಿ.

ಎಸ್.ಡಿಪಿಐ, ಪಿಎಫ್ ಐ ಬ್ಯಾನ್ ಗೆ ಸಿದ್ಧತೆ: ಸಿ.ಟಿ ರವಿ.

0

ಬೆಂಗಳೂರು(Bengaluru): ಎಸ್.ಡಿಪಿಐ(SDPI) ಮತ್ತು ಪಿಎಫ್ ಐ(PFI) ಬ್ಯಾನ್(Ban)   ಮಾಡಲು ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಸಿ.ಟಿ ರವಿ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಮಾಜಿ ಸಚಿವ ಸಿ.ಟಿ ರವಿ,  ಎಸ್.ಡಿಪಿಐ ಮತ್ತು ಪಿಎಫ್ ಐ ಬ್ಯಾನ್   ಮಾಡಲು ಸರ್ಕಾರ ಸಾಕ್ಷ್ಯಾಧಾರ ಕಲೆ ಹಾಕುತ್ತಿದೆ. ಮುಖವಾಡ ಯಾವತ್ತಿದ್ದರೂ ಕಳಚಿ ಬಿದ್ದೇ ಬೀಳುತ್ತೆ ಎಂದರು.

ಇನ್ನು ಮೌಲ್ವಿಗಳ ತನಿಖೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಮೌಲ್ವಿಗಳ ತನಿಖೆ ತಪ್ಪಿಲ್ಲ.  ಗಲಭೆಯಲ್ಲಿ ಮೌಲ್ವಿ ಪಾತ್ರವಿದೆ. ತನಿಖೆಯಾದ್ರೆ ತಪ್ಪೇನು..?  ಇಂಥವರನ್ನ ಕಾಂಗ್ರೆಸ್ ತಲೆ ಮೇಲೆ ಕೂರಿಸಿಕೊಂಡಿದೆ. ನಾವು ಯಾರನ್ನೂ ತಲೆ ಮೇಲೆ ಕೂರಿಸಿಕೊಂಡಿಲ್ಲ. ಕೂರಿಸಿಕೊಳ್ಳುವುದಿಲ್ಲ ಎಂದರು.