ಮನೆ ಯೋಗಾಸನ ಲಘು ಅಥವಾ ಸಂಕ್ಷಿಪ್ತ ವ್ಯಾಯಾಮಗಳು

ಲಘು ಅಥವಾ ಸಂಕ್ಷಿಪ್ತ ವ್ಯಾಯಾಮಗಳು

0

ಇವು ತುಂಬಾ ಸರಳವಾದ ಮತ್ತು ಸುಲಭವಾಗಿ ಆಯಾಸರಹಿತವಾಗಿ ಅಥವಾ ಪರಿಶ್ರಮವಿಲ್ಲದೆ ಮಾಡಬಹುದಾದ ವ್ಯಾಯಾಮಗಳು. ಇವುಗಳಿಗೆ ಸಮಯವು ಕಡಿಮೆ ತಗಲುತ್ತದೆ.

ಇವು ಎಷ್ಟೇ ಸರಳವೋ ಇವುಗಳ ಪ್ರಯೋಜನಗಳು ಮಾತ್ರ ಅಷ್ಟೇ ಅದ್ಭುತವಾಗಿದೆ. 8 ರಿಂದ 10 ನಿಮಿಷಗಳ ಅವಧಿಯಲ್ಲಿ ( ಅತಿ ನಿಧಾನವಾಗಿ ಮಾಡಿದರು. ಕೂಡ 10-12 ನಿಮಿಷದಲ್ಲಿ) ಮುಗಿಯಬಹುದಾಗಿದೆ. ಇವುಗಳನ್ನ ಮುಂಜಾನೆ ಮತ್ತು ಸಂಜೆ ಎರಡು ಹೊತ್ತು ಕೂಡ ಮಾಡಬಹುದು. ಅವುಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ

1.ತಾಡಾಸನ : ಇದರ ಬಗ್ಗೆ ಈಗಾಗಲೇ ಆಸನಗಳ ಅಧ್ಯಯನದಲ್ಲಿ ಹೇಳಿಯಾಗಿದೆ. ಕಾಲಗಲಿಸಿ ನಿಂತುಕೊಂಡು ಎರಡು ಹಿಮ್ಮಡಿಗಳನ್ನು ಎತ್ತುಕೊಂಡು, ಇಡೀ ಶರೀರವನ್ನು ಮೇಲೆತ್ತಿ ಎರಡು ಕೈಗಳನ್ನು ಮೇಲಕ್ಕೆ ಎತ್ತಿ ಆಕಾಶವನ್ನು ಮುಟ್ಟುವಂತೆ ಯತ್ನಿಸಬೇಕು. ಅದೇ ಸ್ಥಿತಿಯಲ್ಲಿ ಸಾಧ್ಯವಾದಷ್ಟು ಹೊತ್ತು ನಿಂತುಕೊಳ್ಳಿ ಮೊದಲಿಗೆ ಐದು ಹತ್ತು ಸೆಕೆಂಡ್ ಗಳಿಂದ ಪ್ರಾರಂಭಿಸಿ, ಒಂದು ನಿಮಿಷದವರೆಗೆ ನಿಲ್ಲಬೇಕು ಅಷ್ಟೇ.

ಈ ಕೆಳಗಿನ ಪ್ರತಿಯೊಂದನ್ನು ʼಕ್ಲಾಕ್-ವೈಸ್ʼ ಅಥವಾ ʼಆಂಟಿಕ್ಲಾಕ್-ವೈಸ್ʼ ಅಂದರೆ ಬರದಿಂದ ಎಡಕ್ಕೆ ಮತ್ತು ಎಡದಿಂದ ಬಲಕ್ಕೆ ಪ್ರತಿಯೊಂದು ಕನಿಷ್ಠ 12 ಸಲ ಮಾಡಬೇಕು

2. ವೃತ್ತಾಕಾರವಾಗಿ ಕಣ್ಣುಗುಡ್ಡೆಗಳನ್ನು ತಿರುಗಿಸುವುದು ಎರಡು ದಿಶಗಳಲ್ಲಿ ಅಂದರೆ ಕ್ಲಾಕ್ ವೈಸ್ ಮತ್ತು ಆಂಟಿ ಕ್ಲಾಕ್ ವೈಸ್ ತಲಾ ಸ್ಥಳ 12 ಸಲ

3. ಕತ್ತು ಮತ್ತು ಗೋಣನ್ನು ತಿರುಗಿಸುವುದು ಇದಕ್ಕೆ ಶಿರೋಭೇದನ ಕ್ರಿಯೆ ಎಂದು ಹೇಳುತ್ತಾರೆ. ಇವುಗಳಲ್ಲಿ ಮೊದಲನೆಯದು ಬೆನ್ನು ನೇರವಾಗಿಸಿ ಕುಳಿತುಕೊಂಡು ಶಿರವನ್ನು ಮೇಲೆ ನೋಡುತ್ತಾ ಅಂದರೆ ದೃಷ್ಟಿ ಸಹಿತವಾಗಿ ಮೇಲೆತ್ತುವುದು ಮತ್ತು ಕೆಳಗೆ ನೋಡುತ್ತಾ ಅದನ್ನು ಕೆಳಗೆ ಬಾಗಿಸುವುದು ಗೋಣುಹಾಕುವುದು ಎಂದು ಹೇಳುತ್ತಿವ.ಲ್ಲ ಅದು ಮೇಲೆ ಕೆಳಗೆ ತಲೆ ಹನ್ನೆರಡು ಸಲ.

4. ಅನಂತರ ಗೊಣನ್ನು ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ (90° ತನಕ) ತಿರುಗಿಸಬೇಕು. “ಒಪ್ಪಿಗೆ ಇಲ್ಲ” ಅಂತ ಗೋಣು ಅಲ್ಲಾಡಿಸು ತೆವಲ್ಲ ಹಾಗೆ 12 ಸಲ

5. ಅದರ ನಂತರ ಗೋಣನ್ನು ಎಡ ಮತ್ತು ಬಲ ಮಂಡಿಗಳ ಮೇಲೆ ಭಾಗಿಸುತ್ತ ಮುಖ ಹೊರಳಿಸದೆ ಪರ್ಯಾಯವಾಗಿ ಇಡುತ್ತಾ ಹೋಗುವುದು (ತಲಾ 12 ಸಲ)

6. ಆಮೇಲೆ ಗೋಣನ್ನು ಕರ್ಣರೇಖೆಗುಂಟ ಅಥವಾ ಕತ್ತರಿಯಾಕರದಲ್ಲಿ (diagonally-ಡಯಾಗನಲ್ಲಾಗಿ) ಅಂದರೆ ದೃಷ್ಟಿಯನ್ನು ಸ್ಥಿರವಾಗಿಸಿಕೊಂಡು “ಹ” ಅಕ್ಷರದ ಕೆಳಭಾಗವನ್ನು ಬರೆಯುವುದು ಅಥವಾ ಬಲಭಾಗದ ಕೆಳಗಿನ ಮೂಲೆಯಿಂದ ಎಡ ಭಾಗದ ಮೇಲಿನ ಮೂಲೆಗೆ ಅಲ್ಲಿಂದ ಅದೇ ಎಡಭಾಗದ ಕೆಳಗಿನ ಮೂಲೆಗೆ ಕೆಳಕ್ಕೆ ತಂದು ಅಲ್ಲಿಂದ ಬಲ ಭಾಗದ ಮೇಲಿನ ಮೂಲಗೆ ಹೊರಳಿಸಬೇಕು. ಅಲ್ಲಿಂದ ಬಲಭಾಗದ ಕೆಳಗಿನ ಮೂಲೆಗೆ ನಂತರ ಎಡಭಾಗದ ಮೇಲಿನ ಮೂಲೆಗೆ ಅಲ್ಲಿಂದ ಎಡ ಭಾಗದ ಕೆಳಗಿನ ಮೂಲೆಗೆ ಅಲ್ಲಿಂದ ಮತ್ತೆ ಬಲಭಾಗದ ಮೇಲಿನ ಮೂಲೆಗೆ ಹೀಗೆ ಒಟ್ಟು 12 ಸುತ್ತು ಮತ್ತು ಅದೇ ರೀತಿಯಲ್ಲಿ ವಿರುದ್ಧ ದಿಕ್ಕಿನಿಂದ ಮತ್ತೆ 12 ಸುತ್ತು ತಿರುಗಿಸಬೇಕು..

7.  ಇನ್ನು ಕೊನೆಯದಾಗಿ ಎಂದರೆ ಗೋಣಿನ (ಕತ್ತಿನ ವ್ಯಾಯಾಮ) ವ್ಯಾಯಾಮದಲ್ಲಿ ಐದನೆಯದು ಗೋಣನ್ನು ಎರಡು ದಿಕ್ಕುಗಳಲ್ಲಿ (ಅಂದರೆ ಕ್ಲಾಕ್ ವೈಸ್, ಆಂಟಿಕ್ಲಾಕ್ ವೈಸ್ ) ವೃತ್ತಾಕಾರವಾಗಿ ತಿರುಗಿಸುವುದು. ಆಗ ಗೋಣನ್ನು ಮುಂಭಾಗದಲ್ಲಿ ಬಂದಾಗ ಗದ್ದವನು ಎದೆಗೆ ತಾಕಿಸುತ್ತಿರಬೇಕು. ಗೋಣು ಹಿಂಭಾಕ್ಕೆ ಹೋದಾಗ ಕೆಳತಲೆಯ ಹಿಂಭಾಗವು ಬೆನ್ನಿಗೆ ತಾಕಿಸುತ್ತುರಬೇಕು. ( ಪ್ರತಿ ದಿಶೆಯಲ್ಲಿ 12 ಸುತ್ತುಗಳಂತೆ).

ಈ ಮೇಲಿನ 5 ಗುಣ ಮತ್ತು ಕತ್ತಿನ ವ್ಯಾಯಾಮದ ಪ್ರಯೋಜನಗಳು ಬಹಳಷ್ಟು ಇವೆ. ಕೈಕಾಲುಗಳು, ಭುಜ, ಶರೀರದ ಯಾವುದೇ ಭಾಗದಲ್ಲಿ ಸ್ನಾಯು ಸೆಳೆತ ಅಥವಾ ಮಜಲ್ ಕ್ಯಾಚ್ ಇದ್ದರೂ ಬಿಡುವುದು. ಪಚನ ಶಕ್ತಿ ಹೆಚ್ಚುವುದು ಎದೆ ಉರಿ, ಎದೆ ನೋವು ವಾಸಿ, ಲಿವರ್ ಕಾರ್ಯ ವೃದ್ಧಿ, ಕಿವಿ ಗಂಟಲು, ಸಮಸ್ಯೆ ದೂರ ಮೋದೋಜೀರಕ ಗ್ರಂಥಿ,  ಪ್ಯಾಂಕ್ರಿಯಾಸ್ ಇತ್ಯಾದಿ ನಿರ್ನಾಳ ಗ್ರಂಥಿಗಳ ಕಾರ್ಯ, ಮರೆವು, ದೃಷ್ಟಿ ದೋಷ ಸುಧಾರಣೆ, ಪಾಶ್ವ ವಾಯು, ಲಕ್ವ, ಶ್ರಮನ, ಇತ್ಯಾದಿ.

ಮುಂದುವರೆಯುತ್ತದೆ……