ಮನೆ ರಾಜ್ಯ ಕವಿ ಕೆ.ವಿ.ತಿರುಮಲೇಶ್ ನಿಧನ

ಕವಿ ಕೆ.ವಿ.ತಿರುಮಲೇಶ್ ನಿಧನ

0

ಬೆಂಗಳೂರು: ಕವಿ ಹಾಗೂ ವಿಮರ್ಶಕ ಕೆ.ವಿ. ತಿರುಮಲೇಶ್ (80) ಅವರು ಹೈದರಾಬಾದ್‌’ನಲ್ಲಿರುವ ತಮ್ಮ ನಿವಾಸದಲ್ಲಿ ಸೋಮವಾರ ಇಹಲೋಕ ತ್ಯಜಿಸಿದ್ದಾರೆ.

ಹೈದರಾಬಾದ್‌’ನ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಆ್ಯಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ‌ ಮಾಡಿ ನಿವೃತ್ತರಾಗಿದ್ದರು.

ಸದ್ಯ ಹೈದರಾಬಾದಿನಲ್ಲಿ‌ ವಾಸವಿದ್ದರು. ಕೇರಳದ ಕಾಸರಗೋಡಿನ ಕಾರಡ್ಕ‌ ಗ್ರಾಮದಲ್ಲಿ ತಿರುಮಲೇಶ್ ಜನಿಸಿದ್ದರು.

ಅಕ್ಷಯ ಕಾವ್ಯ, ಅರಬ್ಬಿ, ಪಾಪಿಯೂ, ಮುಖವಾಡಗಳು, ವಠಾರ ಸೇರಿ ಹಲವು ಕವನ ಸಂಕಲನ ಹೊರತಂದಿದ್ದರು. ಆರೋಪ, ಅನೇಕ, ಮುಸುಗು ಕಾದಂಬರಿ ಬರೆದಿದ್ದರು. ಬೇಂದ್ರೆಯವರ ಕಾವ್ಯಶೈಲಿ, ಸಮ್ಮುಖ, ಉಲ್ಲೇಖ, ಕಾವ್ಯಕಾರಣ ವಿಮರ್ಶಾ ಕೃತಿ ರಚಿಸಿದ್ದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಬಂದಿದ್ದವು.

ಹಿಂದಿನ ಲೇಖನಮಹಿಳೆ ನಾಪತ್ತೆ ಪ್ರಕರಣ: ಆತ್ಮಹತ್ಯೆಗೆ ಶರಣಾದ ಯುವಕ
ಮುಂದಿನ ಲೇಖನಮೋದಿ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ನಿರ್ಬಂಧ: ಪಿಐಎಲ್ ವಿಚಾರಣೆಗೆ ಸುಪ್ರೀಂ ಒಪ್ಪಿಗೆ