ಮನೆ ಮನರಂಜನೆ ಇಂದು ಒಟಿಟಿಗೆ ಬರಲಿದೆ  ‘ಭೋಲಾ ಶಂಕರ್’ ಮತ್ತು ರಾಮಬಾಣಂ ಸಿನಿಮಾ

ಇಂದು ಒಟಿಟಿಗೆ ಬರಲಿದೆ  ‘ಭೋಲಾ ಶಂಕರ್’ ಮತ್ತು ರಾಮಬಾಣಂ ಸಿನಿಮಾ

0

 ‘ಭೋಲಾ ಶಂಕರ್’ ಹಾಗೂ ‘ರಾಮಬಾಣಂ’ ಸಿನಿಮಾ. ಥಿಯೇಟರ್ನಲ್ಲಿ ಫ್ಲಾಪ್ ಎನಿಸಿಕೊಂಡಿದೆ. ಈಗ ಈ ಎರಡೂ ಸಿನಿಮಾಗಳು ಒಟಿಟಿಗೆ ಬಂದಿವೆ. ಇಲ್ಲಾದರೂ ಸಿನಿಮಾನ ಜನರು ನೋಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

 ‘ಭೋಲಾ ಶಂಕರ್’ : ಚಿರಂಜೀವಿ ಅವರಿಗೆ ಇತ್ತೀಚೆಗೆ ದೊಡ್ಡ ಮಟ್ಟದ ಯಶಸ್ಸು ಸಿಗಲಿಲ್ಲ. ಅವರ ನಟನೆಯ ‘ಭೋಲಾ ಶಂಕರ್’ ಸಿನಿಮಾ ಡಿಸಾಸ್ಟರ್ ಪರ್ಫಾರ್ಮೆನ್ಸ್ ನೀಡಿತು. ಚಿರಂಜೀವಿ ಜೊತೆ ತಮನ್ನಾ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ನೆಟ್ ಫ್ಲಿಕ್ಸ್ ನಲ್ಲಿ ರಿಲೀಸ್ ಆಗಲಿದೆ. ಈ ಚಿತ್ರವನ್ನು ಜನರು ಯಾವ ರೀತಿಯಲ್ಲಿ ಸ್ವಾಗತಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಮೆಹೆರ್ ರಮೇಶ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ರಾಮಬಾಣಂ: ಗೋಪಿಚಂದ್ ಅವರ ಹಲವು ಸಿನಿಮಾಗಳು ಫ್ಲಾಪ್ ಆಗಿವೆ. ‘ರಾಮಬಾಣಂ’ ಸಿನಿಮಾ ಕೂಡ ಸೋತಿದೆ. ಈ ಚಿತ್ರವನ್ನು ಜನರು ಇಷ್ಟಪಡಲಿಲ್ಲ. ಈ ಸಿನಿಮಾ ಆಹಾ ಒಟಿಟಿ ಮೂಲಕ ಪ್ರಸಾರ ಕಾಣುತ್ತಿದೆ. ಅಲ್ಲಿಯೂ ಈ ಚಿತ್ರ ಜನಮೆಚ್ಚುಗೆ ಪಡೆಯುತ್ತದೆ ಎನ್ನುವ ಯಾವುದೇ ನಂಬಿಕೆ ಅಭಿಮಾನಿಗಳಿಗೆ ಉಳಿದುಕೊಂಡಿಲ್ಲ.