ಮಲ್ಪೆ ಈ ಹಿಂದಿನ ಕ್ರಮದಂತೆ ಸೆಪ್ಟೆಂಬರ್ 15ರಿಂದ ಪ್ರವಾಸಿಗರಿಗೆ ತೆರೆದುಕೊಳ್ಳಬೇಕಾಗಿದ್ದ ಮಲ್ಪೆ ಬೀಚ್ ಈ ವರ್ಷ ತೆರವಾಗದೆ ಇರುವುದರಿಂದ ಪ್ರವಾಸಿಗರು ನಿರಾಸೆಗೊಂಡಿದ್ದಾರೆ. ಮಳೆ ಗಾಳಿಯ ಹಿನ್ನೆಲೆಯಲ್ಲಿ ಸಮುದ್ರ ಈಗಲೂ ಪ್ರಕ್ಷುಬ್ಧ ಇರುವುದರಿಂದ ಪ್ರವಾಸಿಗರಿಗೆ ನೀರಿಗಿಳಿಯಲು ಇರುವ ನಿರ್ಬಂಧವನ್ನು ಸೆಪ್ಟೆಂಬರ್ 25 ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಪ್ರತಿನಿತ್ಯ ಬೀಚ್ ನಲ್ಲಿ ಜನ ಕಂಡು ಬರುತ್ತಿದ್ದಾರೆ ವಾರಾಂತ್ಯದಲ್ಲಿ ಪ್ರವಾಸಿಗರ ದಂಡೇ ಆಗಮಿಸುತ್ತಿದೆ ಈ ತಿಂಗಳಲ್ಲಿ ಸರಣಿ ಪ್ರಜೆಗಳು ಬಂದಿದ್ದರಿಂದ ಕಡಲತೀರದಲ್ಲಿ ಹೆಚ್ಚು ಜನ ಕಂಡು ಬಂದಿದ್ದಾರೆ. ಆದರೆ ನಿರ್ಬಂಧದ ಹಿನ್ನೆಲೆಯಲ್ಲಿ ಯಾವುದೇ ವಾಟರ್ ಸ್ಪೋರ್ಟ್ಸ್ ಆಗಲಿ ಸೈಂಟ್ ಮೇರಿಸ್ ದ್ವೀಪ ಯಾನವಾಗಲಿ ಹಾರ್ಬರ್ ಕ್ರಾಫ್ಟ್ ನಿಯಮಗಳ ಅನ್ವಯ ಮಳೆಗಾಲದ ಹಿನ್ನೆಲೆಯಲ್ಲಿ ಮೇ 10 ರಿಂದ ಸೆಪ್ಟೆಂಬರ್ 15ರವರೆಗೆ ಬೀಚ್ನಲ್ಲಿ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಈ ಬಾರಿ ನಿಷೇಧದ ಅವಧಿಯನ್ನು ವಿಸ್ತರಿಸಲಾಗಿದೆ.
ಮಳೆಗಾಲದ ಆರಂಭದಲ್ಲಿ ವಿಧಿಸುವ ನಾಲ್ಕು ತಿಂಗಳ ನಿಷೇಧವನ್ನು ಜಿಲ್ಲಾಧಿಕಾರಿಗಳ ಸೂಚನೆಯಂತೆ ಸೆಪ್ಟೆಂಬರ್ 25 ರವರೆಗೆ ಮುಂದುವರೆಸಲಾಗಿದೆ ಸಮುದ್ರದ ಪ್ರಕ್ಷುಬ್ಧ ಸ್ಥಿತಿ ಮುಂದುವರೆದಿರುವ ಕಾರಣ ಯಾರು ಕೂಡ ನೀರಿಳಿಯದಂತೆ ಎಚ್ಚರ ವಹಿಸಲಾಗಿದೆ. ಮುಂದೆ ಪರಿಸ್ಥಿತಿ ನೋಡಿಕೊಂಡು ಪ್ರವೇಶಕ್ಕೆ ಅನುಮತಿ ನೀಡಲಾಗುವುದು.