ಮನೆ ರಾಜ್ಯ ಧರ್ಮಾಧಾರಿತ ರಾಜಕೀಯ ಹತ್ಯೆಗಳ ತನಿಖೆಗೆ ಎಸ್ಐಟಿ ರಚಿಸಿ: ರಮಾನಾಥ ರೈ

ಧರ್ಮಾಧಾರಿತ ರಾಜಕೀಯ ಹತ್ಯೆಗಳ ತನಿಖೆಗೆ ಎಸ್ಐಟಿ ರಚಿಸಿ: ರಮಾನಾಥ ರೈ

0

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಧರ್ಮಾಧಾರಿತ ರಾಜಕೀಯ ಹತ್ಯೆಗಳ ಕುರಿತಂತೆ ಹಿರಿಯ ತನಿಖಾಧಿಕಾರಿಯ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್’ಐಟಿ) ರಚಿಸಿ ತನಿಖೆ ನಡೆಸಲು ನೂತನ ಸರಕಾರ ಆದೇಶಿಸಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಒತ್ತಾಯಿಸಿದ್ದಾರೆ.

Join Our Whatsapp Group

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶರತ್ ಮಡಿವಾಳ, ಅಶ್ರಫ್, ಜಲೀಲ್ ಕರೋಪಾಡಿ, ಪ್ರವೀಣ್ ನೆಟ್ಟಾರ್, ಮಸೂದ್, -ಝಿಲ್ ಸೇರಿದಂತೆ ಹಲವು ಹಿಂದೂ, ಮುಸ್ಲಿಂ ಯುವಕರು ಧರ್ಮಾಧಾರಿತ ರಾಜಕೀಯದಿಂದ ಬಲಿಯಾಗಿದ್ದಾರೆ. ಇವುಗಳ ತನಿಖೆಯನ್ನು ಜಿಲ್ಲೆಯಲ್ಲಿ ಹಿಂದೆ ಎಸ್ಪಿಯಾಗಿದ್ದ ಸುಬ್ರಹ್ಮಣ್ಯೇಶ್ವರ ರಾವ್ ಅಂತಹ ಅಧಿಕಾರಿಗಳ ನೇತೃತ್ವದ ಎಸ್ಐಟಿ ತಂಡ ರಚಿಸಿ ತನಿಖೆಗೊಳಪಡಿಸಬೇಕು ಎಂದರು.

ಇಂತಹ ಹತ್ಯೆಗಳನ್ನು ಗಂಭೀರವಾಗಿ ನೂತನ ಸರಕಾರ ಪರಿಗಣಿಸಿ ಕ್ರಮ ಕೈಗೊಂಡಲ್ಲಿ ಜಿಲ್ಲೆಯಲ್ಲಿ ಸೌಹಾರ್ದಕ್ಕೆ ಧಕ್ಕೆ ತರುವ ಇಂತಹ ಪ್ರಯತ್ನಗಳಿಗೆ ಕೊನೆ ಹಾಕಲು ಸಾಧ್ಯ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮನಪಾ ವಿಪಕ್ಷ ನಾಯಕ ನವೀನ್ ಡಿ’ಸೋಜಾ, ಮುಕಂಡರಾದ ಶಶಿಧರ್ ಹೆಗ್ಡೆ, ಹರಿನಾಥ್, ಟಿ.ಕೆ. ಸುಧಿರ್, ಅಬ್ಬಾಸ್ ಅಲಿ, ಸುಹೇಲ್ ಕಂದಕ್ ಮೊದಲಾದರು ಉಪಸ್ಥಿತರಿದ್ದರು.

ಹಿಂದಿನ ಲೇಖನಪ್ರತಾಪ್ ಸಿಂಹ ಪ್ರತಿಭಟಿಸುವುದು ಬೇಕಿಲ್ಲ, ಬೇಡಿಕೆ ಈಡೇರಿಸುತ್ತೇವೆ: ರಾಮಲಿಂಗಾರೆಡ್ಡಿ ತಿರುಗೇಟು
ಮುಂದಿನ ಲೇಖನಗೌರಿ ಹತ್ಯೆ ಪ್ರಕರಣ: ಜಾಮೀನು ಕೋರಿ ವಿಶೇಷ ನ್ಯಾಯಾಲಯದ ಕದತಟ್ಟಿದ 11ನೇ ಆರೋಪಿ ಮೋಹನ್ ನಾಯಕ್