ಮನೆ ಮನರಂಜನೆ ರಾಕೆಟ್ ಬಾಯ್ಸ್ ವೆಬ್ ಸಿರೀಸ್: ಸಬಾ ಆಜಾದ್ ಹೊಗಳಿದ ಹೃತಿಕ ರೋಶನ್

ರಾಕೆಟ್ ಬಾಯ್ಸ್ ವೆಬ್ ಸಿರೀಸ್: ಸಬಾ ಆಜಾದ್ ಹೊಗಳಿದ ಹೃತಿಕ ರೋಶನ್

0

ಸೋನಿ ಲೈವ್‌ ಒಟಿಟಿಯಲ್ಲಿ ಬಿಡುಗಡೆಯಾಗಿರುವ ವೆಬ್ ಸಿರೀಸ್ ‘ರಾಕೆಟ್‌ ಬಾಯ್ಸ್‌’ ನಲ್ಲಿ ಸಬಾ ಆಜಾದ್‌ ನಟನೆಯನ್ನು ನಟ ಹೃತಿಕ್‌ ರೋಷನ್‌ ಮೆಚ್ಚಿಕೊಂಡಿದ್ದಾರೆ.

ಈ ಕುರಿತು ಶುಕ್ರವಾರ ಇನ್‌ಸ್ಟಾಗ್ರಾಮ್‌ ನಲ್ಲಿ ಬರೆದುಕೊಂಡಿರುವ ಅವರು, ‘ನಾನು ನೋಡಿದ ಅತ್ಯುತ್ತಮ ನಟಿಯರಲ್ಲಿ ಸಬಾ ಆಜಾದ್‌ ಸಹ ಒಬ್ಬರು. ನೀನು(ಸಬಾ) ನನಗೆ ಸ್ಫೂರ್ತಿ’ ಎಂದು ಹೃತಿಕ್‌ ತಿಳಿಸಿದ್ದಾರೆ.

ಇದನ್ನು(ರಾಕೆಟ್‌ ಬಾಯ್ಸ್‌) ಮತ್ತೊಮ್ಮೆ ನೋಡುತ್ತಿದ್ದೇನೆ. ಇದರಿಂದ ಕಲಿಯುವುದು ತುಂಬಾ ಇದೆ. ಇಡೀ ತಂಡವು ಎಂತಹ ಅದ್ಭುತ ಕೆಲಸ ಮಾಡಿದೆ. ಇದರ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೃತಿಕ್ –ಸಬಾ ಇತ್ತೀಚಿಗೆ ರೆಸ್ಟೋರೆಂಟ್‌ನಿಂದ ಒಟ್ಟಿಗೆ ಹೊರಬರುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಜತೆಗೆ, ಹೃತಿಕ್ ರೋಶನ್ ಫ್ಯಾಮಿಲಿ ಪಾರ್ಟಿಯಲ್ಲೂ ಸಬಾ ಕಾಣಿಸಿಕೊಂಡಿದ್ದರು.