ಮನೆ ಯೋಗಾಸನ ಸಾಷ್ಟಾಂಗ ಪ್ರಣಿಪಾತಾಸನ

ಸಾಷ್ಟಾಂಗ ಪ್ರಣಿಪಾತಾಸನ

0

ಹಣೆ, ಎದೆ, ಅಂಗೈಗಳು, ಮಂಡಿಗಳು ಮತ್ತು ಎರಡೂ ಕಾಲುಗಳ ಬೆರಳುಗಳ ಸಮೂಹ –ಇವೇ ಅಷ್ಟ ಅಂಗಗಳು. ಇವುಗಳ ಸಹಾಯದಿಂದ ನಮಸ್ಕಾರ ಮಾಡುವುದಕ್ಕೆ ‘ಸಾಷ್ಟಾಂಗ ನಮಸ್ಕಾರ’ ಎಂದು ಹೆಸರು.

ಮಾಡುವ ಕ್ರಮ:

1)    ಭೂಮಿಗೆ ಲಂಬವಾಗಿ, ಎದೆ ಎತ್ತಿ, ನಮಸ್ಕಾರ  ಮುದ್ರೆಯಲ್ಲಿ  ಎರಡೂ ಕಾಲುಗಳ ಪಾದಗಳನ್ನು ಒಟ್ಟಿಗೆ ಜೋಡಿಸಿ ನಿಂತುಕೊಳ‍್ಳಬೇಕು.

2)   ಅನಂತರ ದೀರ್ಘವಾದ ಉಸಿರನ್ನು ತೆಗೆದುಕೊಂಡು ಅದೇ ಸ್ಥಿತಿಯಲ್ಲಿ ಕಾಲುಗಳನ್ನು ಬದಲಿಸದೇ ಕೇವಲ ಕೈಗಳನ್ನು ಮಾತ್ರ ಮೇಲಕ್ಕೆ ಎತ್ತಬೇಕು.

3)    ಉಸಿರನ್ನು ಹೊರಕ್ಕೆ ಬಿಡುತ್ತಾ ಮುಂದಕ್ಕೆ ಬಗ್ಗಿ ಕೈಗಳನ್ನು ನೆಲದ ಮೇಲೆ ಇಡಬೇಕು.

4)   ಅನಂತರ ಬಲಗಾಲನ್ನು ಹಿಂದಕ್ಕೆ ಚಾಚಿ, ಎಡಗಾಲನ್ನು ಎರಡೂ ಕೈಗಳ ಮಧ್ಯೆ ಇಟ್ಟು ಆಕಾಶ ನೋಡಬೇಕು.

5)   ಆಮೇಲೆ ಇನ್ನೂಂದು ಕಾಲನ್ನು ಹಿಂದಕ್ಕೆ ಚಾಚಿ, ಎರಡೂ ಕಾಲುಗಳನ್ನು ಒಟ್ಟಿಗೇ ಜೋಡಿಸಬೇಕು. (ಕ್ರಮಾಂಕ ಸ್ಥಿತಿ 5 ರಂತೆ)

6)   ಅನಂತರ ಹಾಗೆಯೇ ನೆಲದ ಮೇಲೆ ಮಲಗಿ ಎದೆ, ಹಣೆ, ಮಂಡಿಗಳು, ಕಾಲ ಬೆರಳುಗಳು ಮತ್ತು ಅಂಗೈಗಳನ್ನು ಮಾತ್ರ ನೆಲಕ್ಕೆ ತಗಲಿಸಬೇಕು. ಹೊಟ್ಟೆ ಮತ್ತು ಮೂಗನ್ನು ತಗಲಿಸಬಾರದು.

ಲಾಭಗಳು:

ಸಾಷ್ಟಾಂಗ ಪ್ರಣಿಪಾತಾಸನದಿಂದ ಕೈಗಳು ಬಲಶಾಲಿಯಾಗುವುವು. ಆಹಾರ ಸುಲಭವಾಗಿ ಜೀರ್ಣವಾಗುವುದು. ಹೊಟ್ಟೆ ತೆಳ್ಳಗಾಗುವುದು. ಬೊಜ್ಜು ಕರಗುವುದು.