ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಗುರು : ನನ್ನ ಹೆಂಡ್ತಿ ಆತ್ಮಹತ್ಯೆ ಮಾಡಿಕೊಂಡದ್ದಕ್ಕೆ ಎಲ್ಲಾ ವಿವರವನ್ನು ಬಿಡಿಸಿ ಬಿಡಿಸಿ ಹೇಳು ಅಂತಿದ್ಯಲ್ಲ ಯಾಕೆ?

ನಂಜ : ಯಾಕಂದ್ರೆ ನನಗೂ ಮನೇಲಿ ಹೆಂಡತಿ ಇನ್ನುಇದಾಳೆ. ಅವಳು ನೀನು ಹೆಂಡ್ತಿಯಷ್ಟೇ ಕಿರಿಕ್ಕು.

***

ಲೀಲ : ಒಂದೇ ವರ್ಷದಲ್ಲಿ ನಿನ್ನ ಗಂಡನ್ನ ದಾರಿಗೆ ತರ್ತೀನಿ ಅಂದಿದ್ಯಲ್ಲ ಏನಾಯ್ತು ನಿನ್ನ ಚಾಲೆಂಜು?

ಗೌರಿ : ಗಂಡನ ದಾರಿಗೆ ತರೋಕ್ಕಾಗಿಲ್ಲ ಬಿಟ್ಟು ಬೇರೆ ಗಂಡನ್ನ ಕಟ್ಕೊಂಡೆ.

***

ಶಿಕ್ಷಕ : “ನಂಬಿ ಕೆಟ್ಟವರಿಲ್ಲವೋ ರಂಗಯ್ಯ”ನ ಪದ್ಯ ಅರ್ಥ ನಿಮಗೆಲ್ಲರಿಗೂ ಆಯಿತಲ್ಲವೇ?

ಒಬ್ಬವಿದ್ಯಾರ್ಥಿ : ಅದೂ ಸರಿ ಸಾರ್, ಆದರೆ “ಆರು ಬದುಕಿದ್ದರಯ್ಯ ಹರಿ ನಿನ್ನ ನಂಬಿ” ಎನ್ನುವುದರ ಅರ್ಥವಾಗಲಿಲ್ಲ.

***

ಬಾಲು : ದೊಡ್ಡ ಕಟ್ಟಡದ ಮೇಲಿಂದ ಒಂದು ಹುಡುಗಿ ಸ್ಮೈಲ್ ಕೊಡ್ತಾ ಇದ್ದಾಳೆ, ಹಾಯ್ ಹೇಳ್ತಾ ಇದ್ದಾಳೆ….

ಜಗ್ಗು : ಆಮೇಲೆ? ಆಮೇಲೆ?

ಬಾಲು : ಆಮೇಲೇನು, ಕೆಳಗಡೆ ನೋಡ್ತೀನಿ “ಹುಚ್ಚಸ್ಪತ್ರೆ” ಅಂತ ಬೋರ್ಡ್ ಇತ್ತು.

ಹಿಂದಿನ ಲೇಖನಸಾಷ್ಟಾಂಗ ಪ್ರಣಿಪಾತಾಸನ
ಮುಂದಿನ ಲೇಖನಇಂದಿನ ರಾಶಿ ಭವಿಷ್ಯ