ಮನೆ ಕ್ರೀಡೆ ಕ್ರೀಡೆ ಶಿಕ್ಷಣದ ಅವಿಭಾಜ್ಯ ಅಂಗ – ಮರಿತಿಬ್ಬೇಗೌಡ

ಕ್ರೀಡೆ ಶಿಕ್ಷಣದ ಅವಿಭಾಜ್ಯ ಅಂಗ – ಮರಿತಿಬ್ಬೇಗೌಡ

0

ಮಕ್ಕಳ ಜೀವನದಲ್ಲಿ ಶಿಕ್ಷಣದ ಜೊತೆ ಕ್ರೀಡೆ ಅವಿಭಾಜ್ಯ ಅಂಗವಾಗಿದೆ. ಶಿಕ್ಷಣದ ಜೊತೆ ಕ್ರೀಡೆಯಲ್ಲಿ ಮಕ್ಕಳು ತೊಡಗಿಕೊಳ್ಳುವುದರಿಂದ ಮಕ್ಕಳು ನೈತಿಕ ಮೌಲ್ಯವನ್ನು ಕಲಿಯುತ್ತಾರೆ ಎಂದು ವಿಧಾನ ಪರಿಷತ್ ಶಾಸಕರಾದ ಮರಿತಿಬ್ಬೇಗೌಡ ಅವರು ಹೇಳಿದರು.

Join Our Whatsapp Group

ಇಂದು ನಗರದ ಕುವೆಂಪು ಬೃಂದಾವನ ಪ್ರೌಢಶಾಲೆ ಯಲ್ಲಿ .ಉಪ ನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆ ಮೈಸೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಉತ್ತರ ವಲಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಉತ್ತರ ವಲಯ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿಭಾಗದ 2023-24 ನೇ ಸಾಲಿನ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಸರ್ವಿಸ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾವಳಿ ಯನ್ನು ಯಶಸ್ವಿಯಾಗಿ ನಡೆಸಿ. ಕ್ರೀಡೆಯು ನಮ್ಮ ಜೀವನಕ್ಕೆ ಅವಶ್ಯಕವಾದ ಅಂಶ . ಕ್ರೀಡೆಯಿಂದ ಮಕ್ಕಳು ತಮ್ಮ ಬದುಕನ್ನು ನಿರ್ಮಿಸಿಕೊಳ್ಳಲು ಹಾಗೂ ಬದುಕಿಗೆ ಬಹಳ ಮುಕ್ಯವಾದ ವಿಷಯಗಳನ್ನು ತಿಳಿಸುವುದು ಕ್ರೀಡೆ ಎಂದರು.

ಕ್ರೀಡೆಯಲ್ಲಿ ವಿವಿಧ ರೀತಿಯ ನಿಯಮಗಳನ್ನು ಕಾಣಬಹುದು. ಅದರಂತೆ ಕ್ರೀಡೆಯ ನಿಯಗಳು ಉತ್ತಮ ಜೀವನವನ್ನು ನಿರ್ಮಾಣ ಮಾಡಿಕೊಳಲು ಉಪಯುಕ್ತವಾಗಿದೆ. ಒಬ್ಬ ಕ್ರೀಡಾ ಪಟು ರಾಷ್ಟ್ರ, ರಾಜ್ಯ , ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ  ಬೆಳೆದರೆ ಅಪಾರವಾದ ಗೌರವ ಸ್ಥಾನ ಮಾನವನ್ನು ಸಮಾಜ ನೀಡುತ್ತದೆ ಎಂದು ತಿಳಿಸಿದರು.

ಕ್ರೀಡಾ ಚಟುವಟಿಗಳಂತೆ ಎನ್.ಎಸ್.ಎಸ್. ಕೂಡ ವಿದ್ಯಾರ್ಥಿಗಳ ಜೀವನವನ್ನು ಮೌಲ್ಯಯುತವಾಗಿಸುತ್ತದೆ. ಜೀವನದಲ್ಲಿ ಶಿಸ್ತು ಸಂಯಮವನ್ನು ಕಲಿಸುವಲ್ಲಿ ಕ್ರೀಡೆಯ ಪಾತ್ರ ದೊಡ್ಡದು. ಪ್ರತಿಯೊಬ್ಬ ಮಕ್ಕಳು ಕೂಡ ಎಲ್ಲಾ ರೀತಿಯ ಕ್ರೀಡೆಗಳಲ್ಲಿ ಪಾಲ್ಗೊಂಡು ಕ್ರೀಡೆಯಿಂದ ನಿಮ್ಮ ಜೀವನವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಗುರಿಯನ್ನು ಇಟ್ಟುಕೊಳ್ಳಿ ಎಂದು ತಿಳಿಸಿದರು.

ದೈಹಿಕ ಶಿಕ್ಷಕರ ನೇಮಕದ ವಿಚಾರದಲ್ಲಿ ನಮ್ಮ ಸರ್ಕಾರದಿಂದ ಮುಂದಿನ ದಿನಗಳಲ್ಲಿ ಒಳ್ಳೆಯ ಸುದ್ದಿಯನ್ನು ನೀಡುವ ಭರವಸೆಯನ್ನು ಹೊಂದಿದ್ದೇವೆ.  ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರ ಸರ್ಕಾರವು ಭರವಸೆಗಳ ಈಡೇರಿಸುವ ಸರ್ಕಾರ . ಅದರಂತೆ ಮುಂದಿನ ದಿನಗಳಲ್ಲಿ ದೈಹಿಕ ಶಿಕ್ಷಕರ ನೇಮಕ ಆಗಲಿದೆ ಎಂದು ತಿಳಿಸಿದರು..

ದೈಹಿಕ ಶಿಕ್ಷಕರ  ಕೊರತೆಯಿಂದಾಗಿ ಮಕ್ಕಳಿಗೆ ದೈಹಿಕ ಶಿಕ್ಷಣವನ್ನು ನೀಡುವುದರಲ್ಲಿ ನಾವು ವಿಫಲ ಹೊಂದಿದ್ದೇವೆ. ಕ್ರೀಡಾ ವಸತಿ ಶಾಲೆಯಲ್ಲಿ ಖಾಯಂ ತರಬೇತಿದಾರರು ಇಲ್ಲದೆ ಮಕ್ಕಳ ಜೀವನದಲ್ಲಿ ನೈತಿಕತೆ, ಶಿಸ್ತನ್ನು ಕಾಪಾಡಿಕೊಳ್ಳುವಲ್ಲಿ ಕೊರತೆಯಾಗಿದೆ. ಇದು ನಮಗೆ ದುಃಖದ ಸಂಗತಿಯಾಗಿದೆ ಎಂದರು.

ಸಮಾರಂಭದ ಅತಿಥಿಗಳಾಗಿ ಶಾಲಾ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೃಷ್ಣ, ಉಪ ನಿರ್ದೇಶಕರಾದ ಪಾಂಡು  ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳಾದ ಎಸ್.ಸಿದ್ದರಾಜು ,ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷರಾದ ಪಿ. ಮಹದೇವಯ್ಯ ಮುಂತಾದವರು ಪಾಲ್ಗೊಂಡಿದ್ದರು.