ಮನೆ ದೇವರ ನಾಮ ಕಣ್ಣ ತುಂಬ ಗಣಪತಿಯ

ಕಣ್ಣ ತುಂಬ ಗಣಪತಿಯ

0

ಕಣ್ಣ ತುಂಬ ಗಣಪತಿಯ ಆ ರೂಪ

ಬಾದೆಗಳ ಅರಿಸೋ ಶುಭ ರೂಪ ||

ತೊಟ್ಟಿರುವ ಕಾರ್ಯದಲ್ಲಿ ವಿಘ್ನಾಗಳು ಬಂದರೆ |

ವಿಘ್ನೇಷನೇ ನನಗೆ ದಾರಿ ದೀಪ || ಕಣ್ಣ|| 1

ಪಾಶಂಕುಶ ಧರಿಸಿರುವ ಪುಣ್ಯ ಮೂರ್ತಿ

ಹಾಡಿ ಲಂಬೋದರ ಪಂಚಹಸ್ತ ದಿವ್ಯಕೀರ್ತಿ ||

ಸಿದ್ದಿ ಬುದ್ಧಿಗಳ ಅಣಿಮಾದಿಗಳ ||

ವರಸಿದಂತ ಗಣಪ ನಮಗೆ ಎಂದು ಸ್ಪೂರ್ತಿ |

ಎಂದು ಸ್ಪೂರ್ತಿ || ಕಣ್ಣ || 2

ಮೂಗನವನಿಗೆ ಮಾತನು ಕೊಟ್ಟು ಹಾಡುವಂತೆ ಮಾಡಬಲ್ಲನು

ಅಂದನವನಿಗೆ ಕಂಗಳ ನೀಡಿ ಅಂದವನು ತೋರ ಬಲ್ಲನು ||

ಮಹಿಮೆಗಳ ಮಾಲೆ ತೋರೋ ಮಹನೀಯನು ||

ಹಗಲು ರಾತ್ರಿ ಕಾಪಾಡೋ ಕರುಣಾಮಯನು ||

ಕರುಣಾಮಯನು || ಕಣ್ಣ || 3

ಬಾದ್ರಪದ ಚೌತಿ ದಿನ ನಿನ್ನ ಉತ್ಸವ

ಸ್ವಾಮಿ ಊರು ಊರು ಬೀದಿ ಬೀದಿ ನಿನ್ನ ವೈಭವ ||

ಭಾಗ್ಯಗಳ ಮಳೆಗರೆವ ಗಣಪ ನಿನ್ನ ಅರ್ಚನೆ ||

ನಿತ್ಯ ಹರುಷ ತರುವುದು ನಿನ್ನುಪಾಸನೆ |

ನಿನ್ನು ಪಾಸನೆ || ಕಣ್ಣ ||

ಹಿಂದಿನ ಲೇಖನಕ್ರೀಡೆ ಶಿಕ್ಷಣದ ಅವಿಭಾಜ್ಯ ಅಂಗ – ಮರಿತಿಬ್ಬೇಗೌಡ
ಮುಂದಿನ ಲೇಖನಬಿಕ್ಕಳಿಕೆ  ಸಮಸ್ಯೆಗೆ ಮನೆ ಮದ್ದು