ಮನೆ ಯೋಗಾಸನ ಯೋಗದಿಂದ ದೂರವಾಗುವುದು ಹಲವು ರೋಗ

ಯೋಗದಿಂದ ದೂರವಾಗುವುದು ಹಲವು ರೋಗ

0

ಮಹರ್ಷಿ ಪತಂಜಲಿಯವರಿಗೆ ಔಪಚಾರಿಕ ಯೋಗ ತತ್ವಜ್ಞಾನದ ಸ್ಥಾಪಕರೆಂದು ವ್ಯಾಪಕವಾಗಿ ಮನ್ನಣೆ ನೀಡಲಾಗಿದೆ. ಮನಸ್ಸನ್ನು ನಿಯಂತ್ರಿಸುವ ವ್ಯವಸ್ಥೆಯಾದ ಪತಂಜಲಿಯವರ ಯೋಗವನ್ನು ರಾಜಯೋಗ ಎಂದು ಕರೆಯಲಾಗುತ್ತದೆ. ಮನಸ್ಸಿನ ನಿಯಂತ್ರಣಕ್ಕೆ ಬಳಸುವ ವ್ಯವಸ್ಥೆಯಾಗಿ “ರಾಜಯೋಗ” ಮತ್ತು ಪತಂಜಲಿಯವರ ಯೋಗಸೂತ್ರಗಳು ರಾಜಯೋಗಕ್ಕೆ ಪ್ರಮುಖ.

ಯೋಗವು ನಮ್ಮ ದೇಹದ ಬಗ್ಗೆ ನಮಗೆ ಕಲಿಸುತ್ತದೆ, ಚೆನ್ನಾಗಿ ಉಸಿರಾಡುವುದು ಹೇಗೆ ಎಂಬುದನ್ನು ಯೋಗವು ನಮಗೆ ಕಲಿಸುತ್ತದೆ. ಯೋಗವು ನಮ್ಮ ಶಕ್ತಿಯನ್ನು ಹೇಗೆ ಹೆಚ್ಚು ಪರಿಣಾಮಕಾರಿಯಾಗಿ ಬಳಸಬೇಕೆಂದು ಕಲಿಸುತ್ತದೆ. ಮನಸ್ಸನ್ನು ಹೇಗೆ ಶಾಂತಗೊಳಿಸಬೇಕೆಂದು ಯೋಗವು ನಮಗೆ ಕಲಿಸುತ್ತದೆ.

ಸ್ವಲ್ಪ ಕಾಲ ಉಸಿರನ್ನು ಬಿಗಿ ಹಿಡಿದು ಮಾಡುವ ಮತ್ತು ಇನ್ನಿತರ ಆಸನಗಳು ಹೃದಯ ಮತ್ತು ಅಪದಮನಿಯ ಆರೋಗ್ಯವನ್ನು ಕಾಪಾಡುತ್ತವೆ. ಯೋಗ ರಕ್ತಸಂಚಲನವನ್ನು ಸರಾಗವಾಗಿಸುವುದರಿಂದ ರಕ್ತ ಹೆಪ್ಪುಗಟ್ಟುವಿಕೆಯಂತಹ ಕ್ರಿಯೆಯಿಂದ ರಕ್ಷಿಸಿ ಹೃದಯವನ್ನು ಆರೋಗ್ಯಯುತವಾಗಿರಿಸಿತ್ತದೆ.

ಯೋಗ ಒತ್ತಡವನ್ನು ಕಡಿಮೆ ಮಾಡುತ್ತದೆ. ವಿರಾಮವಿಲ್ಲದ ಕೆಲಸದ ನಂತರ ನೀವು ಯೋಗ ಮಾಡಿದರೆ ಒತ್ತಡ ಕಡಿಮೆಯಾಗುವುದನ್ನು ಕಾಣಬಹುದು. ಅಂದಮಾತ್ರಕ್ಕೆ ಯೋಗ ಒಂದೇ ಒತ್ತಡವನ್ನು ನಿವಾರಿಸಲು ಇರುವ ಮಾರ್ಗ ಎಂದಲ್ಲ. ಯಾವುದೇ ರೀತಿಯ ವ್ಯಾಯಾಮವನ್ನು ಮನಸ್ಸಿಟ್ಟು ಶೃದ್ಧೆಯಿಂದ ಸರಿಯಾಗಿ ಮಾಡಿದರೆ ಅದರಿಂದ ಒತ್ತಡವನ್ನು ನಿವಾರಿಸಿಕೊಳ್ಳಬಹುದು.

ಯೋಗಾಭ್ಯಾಸದಲ್ಲಿ ಬರುವ ಉಸಿರಾಟ ಮತ್ತು ಸಮತೋಲನ ಆಸನಗಳು ಮೆದುಳಿನ ಎರಡು ಕಡೆಗಳಲ್ಲೂ ಸಮತೋಲನ ಕಾಪಾಡುತ್ತದೆ. ನೋವುಗಳನ್ನುತಡೆಯುತ್ತದೆ – ಯೋಗ ಮಾಡುವುದರಿಂದ ಬಲಯುತವಾಗುವುದರ ಜೊತೆಗೆ ಬೆನ್ನುನೋವು, ಕೀಳುನೋವು ಅಥವಾ ಯಾವುದೇ ನೋವಿದ್ದರೂ ಅದನ್ನು ಶಮನಗೊಳಿಸುತ್ತದೆ.

ತಲೆನೋವಿನ ಅತ್ಯುಗ್ರ ರೂಪವಾದ ಮೈಗ್ರೇನ್ ಎಂತಹ ಜಟ್ಟಿಯನ್ನಾದರೂ ನೆಲಕ್ಕುರುಳಿಸುವ ಸಾಮರ್ಥ್ಯ ಹೊಂದಿದೆ. ಈ ಭಯಂಕರ ನೋವನ್ನು ಬರದಂತೆ ಮಾಡಲು ಯೋಗಾಸನದ ಕೆಲವು ಆಸನಗಳು ಮ್ರೈಗ್ರೇನ್ ಕಡಿಮೆಗೊಳಿಸಲು ನೆರವಾಗುತ್ತವೆ.

ಅಧೋಮುಖ ಶ್ವಾನಾಸನ, ಪ್ರಸಾರಿತ ಪಡೋತ್ತಾನಾಸನ, ಉತ್ತನಾಸನ, ಜನುಶೀರ್ಷಾಸನ, ಪಶ್ಚಿಮೋತ್ತಾಸನ, ಮತ್ಸೇಂದ್ರಾಸನ, ಊರ್ಧ್ವಮುಖ ಶ್ವಾನಾಸನ, ಸೇತುಬಂಧ, ಮತು ಶವಾಸನಗಳು ತಲೆನೋವು ಕಡಿಮೆಗೊಳಿಸಲು ನೆರವಾಗುತ್ತವೆ. ಈ ಭಂಗಿಗಳಲ್ಲಿ ಮೆದುಳಿಗೆ ಹರಿಯುವ ರಕ್ತದ ಪ್ರಮಾಣ ಹೆಚ್ಚುವುದರಿಂದ ತಲೆನೋವು ಸ್ವಾಭಾವಿಕವಾಗಿ ಕಡಿಮೆಯಾಗಲು ಸಾಧ್ಯವಾಗುತ್ತದೆ.

ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ಯೋಗ ಉತ್ತಮ ಉಪಾಯ. ಯೋಗಮಾಡುವುದರಿಂದ ನಿಮ್ಮ ಮನಸ್ಸು ಮತ್ತು ದೇಹ ಎರಡನ್ನೂ ಆರೋಗ್ಯವಾಗಿ ಇಟ್ಟುಕೊಳ್ಳಬಹುದು. ಪ್ರತಿದಿನ ಯೋಗ ಮಾಡುವುದರಿಂದ ಒತ್ತಡ ಕಡಿಮೆ ಮಾಡಿಕೊಳ್ಳಬಹುದು, ಜೊತೆಗೆ ಆಂತರಿಕವಾಗಿ ಒಳ್ಳೆಯ ರಕ್ತ ಸಂಚಲನವಾಗುತ್ತದೆ.

ನಿಯಮಿತವಾಗಿ ಯೋಗಾಭ್ಯಾಸ ಮಾಡುವ ಮೂಲಕ, ಒಬ್ಬ ವ್ಯಕ್ತಿಯು ತಂದೆಯಂತೆ ರಕ್ಷಿಸುವ ಧೈರ್ಯ, ತಾಯಿಯಿಂದ ಕ್ಷಮೆ ಮತ್ತು ಶಾಶ್ವತ ಸ್ನೇಹಿತನಾಗುವ ಮಾನಸಿಕ ಶಾಂತಿಯಂತಹ ಕೆಲವು ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಬಹುದು. ಯೋಗದ ನಿಯಮಿತ ಅಭ್ಯಾಸದ ಮೂಲಕ ಸತ್ಯವು ನಮ್ಮ ಮಗುವಾಗುತ್ತದೆ, ನಮ್ಮ ಸಹೋದರಿಯನ್ನು ಕರುಣಿಸುತ್ತದೆ, ನಮ್ಮ ಸಹೋದರನನ್ನು ಸ್ವಯಂ ನಿಯಂತ್ರಣ ಮಾಡುತ್ತದೆ, ಭೂಮಿಯು ನಮ್ಮ ಹಾಸಿಗೆಯಾಗುತ್ತದೆ ಮತ್ತು ಜ್ಞಾನವು ನಮ್ಮ ಹಸಿವನ್ನು ನೀಗಿಸುತ್ತದೆ.