ಮನೆ ರಾಜ್ಯ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಪಕ್ಷಕ್ಕೆ ದಾರಿದ್ರ್ಯ ಬರುತ್ತದೆ: ವೀರಪ್ಪ ಮೊಯ್ಲಿ 

ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಪಕ್ಷಕ್ಕೆ ದಾರಿದ್ರ್ಯ ಬರುತ್ತದೆ: ವೀರಪ್ಪ ಮೊಯ್ಲಿ 

0

ಮಂಗಳೂರು(ದಕ್ಷಿಣ ಕನ್ನಡ): ಜೆಡಿಎಸ್ ಪಕ್ಷ ಯಾರೊಂದಿಗೆ ಮೈತ್ರಿ ಮಾಡಿಕೊಳ್ಳುತ್ತದೆಯೋ ಆ ಪಕ್ಷಕ್ಕೆ ದಾರಿದ್ರ್ಯ ಬಂದಂತೆ ಎಂದು ಬಿಜೆಪಿ ಜೊತೆಗೆ ಜೆಡಿಎಸ್‌ ಪಕ್ಷ ಮೈತ್ರಿ ಮಾಡಿಕೊಂಡಿರುವುದಕ್ಕೆ ಮಾಜಿ ಸಿಎಂ ವೀರಪ್ಪ ಮೊಯ್ಲಿ  ವ್ಯಂಗ್ಯ ಮಾಡಿದ್ದಾರೆ.

ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ತುಳು ಭಾಷೆಯಲ್ಲಿ ಒಂದು ಗಾದೆ ಮಾತಿದೆ. ಯಾವ ಮನೆಗೆ ಒಡು ಹೋಗುತ್ತದೆಯೋ ಅದು ಸರ್ವನಾಶವಾಗಿ ಹೋಗುತ್ತದೆ ಅಂತ. ಜೆಡಿಎಸ್ ಪಕ್ಷ ಕೂಡಾ ಒಂದು ಒಡು ಇದ್ದಂತೆ.

ಜೆಡಿಎಸ್ ಜೊತೆ ಹೊಂದಾಣಿಕೆಯಿಂದ ಬಿಜೆಪಿಗೆ ನಷ್ಟ. ಜೆಡಿಎಸ್ ನೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವುದರಿಂದ ನಷ್ಟ ಉಂಟಾಗುತ್ತದೆ ಹೊರತು ಬಿಜೆಪಿ ಲಾಭವಾಗುವುದಿಲ್ಲ. ಕಾಂಗ್ರೆಸ್ ಗೆ ಅದರ ಅನುಭವ ಆಗಿದೆ ಎಂದು ಮೊಯ್ಲಿ ನುಡಿದರು.

ಜೆಡಿಎಸ್ ನವ್ರು ಎಲ್ಲಿಗೆ ಹೋಗುತ್ತಾರೋ ಅದು ಸರ್ವನಾಶವಾಗಿ ಹೋಗುತ್ತದೆ. ಈಗ ಅವರು ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ.

ಬಿಜೆಪಿಯೂ ಸರ್ವ ನಾಶವಾಗಿ ಹೋಗುತ್ತದೆ. ನಮಗೆ ಬಹಳ ಕಟು ಅನುಭವ ಆಗಿದೆ. ಈ ಹಿಂದೆ 28ರಲ್ಲಿ 1 ಸೀಟು ಲೋಕಸಭೆಯಲ್ಲಿ ಬಂದದ್ದು ಇಲ್ವೇ ಇಲ್ಲ. ಹೊಂದಾಣಿಕೆ ಬಿ ಟೀಮ್ ಎಂದು ಹೇಳುತ್ತಿದ್ದರು. ಆ ದಾರಿದ್ರ್ಯ ನಮ್ಮ ಪಕ್ಷಕ್ಕೆ ಬರುವುದೇ ಇಲ್ಲ ಎಂದು ಕುಮಾರ ಸ್ವಾಮಿ ಹೇಳಿದ್ದರು. ಈಗ ಅವರಿಗೆ ದಾರಿದ್ರ್ಯ ಒಳಗೆ ಸೇರಿದೆ.

ಅವರ ಜೊತೆ ಸೇರಿದ ಸಂದರ್ಭ ನಾನು ಸೋತೆ, ಖರ್ಗೆ, ಮುನಿಯಪ್ಪ ಸೋತರು, ಮುನಿಯಪ್ಪ ಕೂಡಾ ಸೋತರು. ಈಗ ಅನಿಷ್ಟ ನಮ್ಮಿಂದ ದೂರ ಆಗಿದೆ ಎಂದರು.

ಬಿಜೆಪಿಯಿಂದ ಸಂವಿಧಾನ ವಿರೋಧಿ ಕೆಲಸ ನಡೆಯುತ್ತಿದೆ. ಸಂವಿಧಾನದಲ್ಲಿ ಇರುವ ಜಾತ್ಯತೀತ ಪದವನ್ನು ಅಳಿಸಿ ಪ್ರತಿಯನ್ನು ಹಂಚುತ್ತಾರೆ. ಅವರಿಗೆ ತಾಕತ್ತಿದ್ದರೆ ಸಂವಿಧಾನದಕ್ಕೆ ತಿದ್ದುಪಡಿ ಮಾಡಿ ಜಾತ್ಯತೀತ ಪದವನ್ನು ತೆಗೆದುಹಾಕಲಿ ಎಂದು ವೀರಪ್ಪ ಮೊಯ್ಲಿ ಸವಾಲೆಸೆದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಚಿಕ್ಕ ಬಳ್ಳಾಪುರದಿಂದ ಸ್ಪರ್ಧೆ ಮಾಡುವ ಇಂಗಿತವನ್ನು ವೀರಪ್ಪ ಮೊಯ್ಲಿ ವ್ಯಕ್ತಪಡಿಸಿದರು.