ಮನೆ ಸುದ್ದಿ ಜಾಲ ಇಂದು ವಿಶ್ವ ಪುಸ್ತಕ ದಿನ: ಆಚರಣೆಯ ಉದ್ದೇಶವೇನು?

ಇಂದು ವಿಶ್ವ ಪುಸ್ತಕ ದಿನ: ಆಚರಣೆಯ ಉದ್ದೇಶವೇನು?

0

“ದೇಶ ಸುತ್ತು ಕೋಶ ಓದು”, “ಪುಸ್ತಕಕ್ಕಿಂತ ಉತ್ತಮ ಸ್ನೇಹಿತನಿಲ್ಲ” ಎಂಬುದು ಅಕ್ಷರಶಃ ನಿಜ. ಪುಸ್ತಕಗಳು ಒಬ್ಬ ವ್ಯಕ್ತಿ ಉತ್ತಮ ಮನುಷ್ಯನಾಗಲು ಪ್ರಮುಖ ಪಾತ್ರ ವಹಿಸುತ್ತದೆ.
ಪುಸ್ತಕ ಒಳ್ಳೆಯ ಫಿಲಾಸಫರ್‌, ಮಾರ್ಗದರ್ಶಕ, ಉತ್ತಮ ಒಡನಾಡಿ.
ಪುಸ್ತಕಗಳು ಪ್ರಮುಖ ಮಾಹಿತಿ ಮೂಲಗಳು. ಪ್ರಪಂಚದ ಇತಿಹಾಸ ಮತ್ತು ಭವಿಷ್ಯಗಳ ಸೇತುವೆಯಾಗಿ ಪುಸ್ತಕಗಳು ಪಾತ್ರವಹಿಸುತ್ತವೆ.
ಪ್ರಪಂಚದ ಪ್ರಖ್ಯಾತ ಬರಹಗಾರ ವಿಲಿಯಂ ಷೇಕ್ಸ್‌ಪಿಯರ್ ಅವರು ಹುಟ್ಟಿದ ದಿನ ಮತ್ತು ಮರಣ ಹೊಂದಿದ ದಿವವಾಗಿಯೂ ವಿಶ್ವ ಪುಸ್ತಕ ದಿನದಂದು ಸ್ಮರಣೆ ಮಾಡುತ್ತೇವೆ. ಮೈಕೆಲ್ ಡಿ ಸರ್ವಾಂಟಿಸ್ ಮತ್ತು ಇಂಕಾ ಗಾರ್ಸಿಲಾಸೊ ದಿ ಲ ವೆಗಾ ರವರು ಇದೇ ದಿನ ಮರಣ ಹೊಂದಿದ್ದು, ಅವರನ್ನು ಸ್ಮರಿಸುತ್ತೇವೆ.
ಇಂದೇ ಕೃತಿ ಸ್ವಾಮ್ಯ ದಿನ ಅಥವಾ ಅಂತಾರಾಷ್ಟ್ರೀಯ ಪುಸ್ತಕ ದಿನ ಎಂದು ಹೆಸರಿಸಿ ಪ್ರತಿ ವರ್ಷ ಆಚರಣೆ ಮಾಡಲಾಗುತ್ತದೆ.
ಆಚರಣೆಯ ಉದ್ದೇಶ
ಜನರಲ್ಲಿ ಓದುವ, ಪುಸ್ತಕ ಪ್ರಕಟಿಸುವ ಅಭಿರುಚಿ ಹೆಚ್ಚಿಸಲು ಮತ್ತು ಕೃತಿಸ್ವಾಮ್ಯದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ವಿಶ್ವಪುಸ್ತಕ ದಿನವನ್ನು ಆಚರಿಸಲಾಗುತ್ತದೆ.
ಪುಸ್ತಕ ದಿನ ಆಚರಣೆ ಏಕೆ?
ವೆಲೆನ್ಸಿಯಾದ ಬರಹಗಾರ ವಿನ್ಸೆಂಟ್ ಕ್ಲವೆಲ್ ಆಂಡ್ರ್ಯೂ ಅವರ ಜನ್ಮದಿನ ಅಕ್ಟೋಬರ್ 7 ರಂದು ಪುಸ್ತಕ ದಿನವನ್ನು ಆಚರಿಸಲಾಯಿತು. ಬಳಿಕ ಅವರ ಮರಣ ಹೊಂದಿದ ದಿನವಾದ ಏಪ್ರಿಲ್ 23 ಅನ್ನು ವಿಶ್ವ ಪುಸ್ತಕ ದಿನವನ್ನಾಗಿ ಆರಂಭದಲ್ಲಿ ಆಯ್ಕೆ ಮಾಡಲಾಯಿತು. ಆದರೆ ನಂತರ ಅಧಿಕೃತವಾಗಿ 1995 ರಲ್ಲಿ ಯುನೆಸ್ಕೊ ಸಹ ಏಪ್ರಿಲ್ 23 ಅನ್ನು ವಿಶ್ವ ಪುಸ್ತಕ ಮತ್ತು ಕೃತಿ ಸ್ವಾಮ್ಯ ದಿನವನ್ನಾಗಿ ಆಚರಣೆ ಮಾಡಲು 1995 ರಲ್ಲಿ ಪ್ಯಾರಿಸ್ ಜೆನೆರಲ್ ಕಾನ್ಫರೆನ್ಸ್‌ನಲ್ಲಿ ತೀರ್ಮಾನ ಕೈಗೊಳ್ಳಲಾಯಿತು.