ಮನೆ ಸುದ್ದಿ ಜಾಲ ಬಸ್ ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಯುವಕನ ಜೀವ ಉಳಿಸಿದ ನರ್ಸ್

ಬಸ್ ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಯುವಕನ ಜೀವ ಉಳಿಸಿದ ನರ್ಸ್

0

ಕೊಚ್ಚಿ (kochi)- ಬಸ್ ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಯುವಕನ ಪ್ರಾಣವನ್ನು ಕೇರಳದ ಕೊಚ್ಚಿಯ ನರ್ಸ್ ವೊಬ್ಬರು ಕಾಪಾಡಿದ್ದಾರೆ.
ಅಂಗಮಲೈ ನಿವಾಸಿ ನರ್ಸ್ ಸೀಬಾ ಅನಿಸ್ 24 ವರ್ಷದ ವಿಷ್ಣುವಿನ ಪ್ರಾಣ ರಕ್ಷಿಸಿದ್ದಾರೆ.
ಸೀಬಾ ಅನಿಸ್, ಕರ್ತವ್ಯ ಮುಗಿಸಿ ರಾತ್ರಿ 9-10 ರ ಸುಮಾರಿನಲ್ಲಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ, ಇದ್ದಕ್ಕಿದ್ದಂತೆ ಆಕೆಯ ಹಿಂದೆ ನಿಂತಿದ್ದ ಯುವಕ  ಕೆಳಗೆ ಬಿದಿದ್ದಾನೆ.  24 ವರ್ಷದ ವಿಷ್ಣು ಪ್ರಜೆತಪ್ಪಿ ದಿಢೀರನೆ ಕೆಳಗೆ ಬಿದ್ದ ನಂತರ ಬಾಯಿಯಿಂದ ನೊರೆ ಬರಲು ಆರಂಭಿಸಿದೆ. ಆತನ ಬಾಯಿ ಮತ್ತು ಮೂಗಿನಿಂದ ರಕ್ತ ಹೊರಗೆ ಬಂದಿದೆ. ಪಲ್ಸ್ ಕುಸಿತವನ್ನು ಗುರುತಿಸಿದ ನರ್ಸ್, ಸೀಬಾ, ಪರಿಸ್ಥಿತಿ ಕೈ ಮೀರಬಹುದೆಂದು ಯೋಜಿಸಿ, ಹತ್ತಿರದ ಆಸ್ಪತ್ರೆ ಬಳಿ ಬಸ್ ನಲ್ಲಿಸುವಂತೆ ಡ್ರೈವರ್ ಗೆ ಹೇಳಿದ್ದಾಳೆ. ಆದರೆ, ಆತ ಬಸ್ ನಿಲ್ಲಿಸಿಲ್ಲ. 
ನಂತರ ಅಂಬ್ಯುಲೆನ್ಸ್ ಗಾಗಿ ಆಸ್ಪತ್ರೆಗೆ ಕರೆ ಮಾಡಿದ ಸೀಬಾ, ತಕ್ಷಣ ಸಿಪಿಆರ್ ನೀಡಿದ್ದಾರೆ. ಎರಡು ಸುತ್ತಿನ ಸಿಪಿಆರ್ ನಂತರ ಆತನಿಗೆ ಪ್ರಜ್ಞೆ ಬಂದಿದೆ. ನಂತರ ಎದ್ದು ಕೂತಿದ್ದಾನೆ. ನಂತರ ಆತನನ್ನು ಅಂಗಮಲೈ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಒಂದು ವೇಳೆ ಸಿಪಿಆರ್ ನೀಡದಿದ್ದಲ್ಲಿ ಆತ ಬದುಕುಳಿಯುತ್ತಿರಲಿಲ್ಲ ಎಂದು ಅಪೊಲೊ ಅಡ್ಲಕ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸೀಬಾ ಹೇಳಿದ್ದಾರೆ.
ಸೀಬಾ ರೀತಿಯ ಕರುಣೆವುಳ್ಳ ಮಹಿಳೆಯರ ಆಗತ್ಯವಿದೆ. ಅವರು ಸಮಯಕ್ಕೆ ಸರಿಯಾಗಿ ಸಿಪಿರ್ ಮೂಲಕ ಯುವಕನ ಜೀವ ಉಳಿಸಿದ್ದಾರೆ. ಸಿಪಿಆರ್ ಕಲಿಕೆ ಬಗ್ಗೆ ಒತ್ತು ನೀಡಬೇಕೆಂದು ಅಪೊಲೋ ಆಸ್ಪತ್ರೆ ಹೇಳಿದೆ.

ಹಿಂದಿನ ಲೇಖನನಾಳೆ 2017ನೇ ಸಾಲಿನ ಕರ್ನಾಟಕ ಚಲನಚಿತ್ರ ರಾಜ್ಯ ಪ್ರಶಸ್ತಿ ಪ್ರದಾನ
ಮುಂದಿನ ಲೇಖನಇಂದು ವಿಶ್ವ ಪುಸ್ತಕ ದಿನ: ಆಚರಣೆಯ ಉದ್ದೇಶವೇನು?