ಮನೆ ರಾಜ್ಯ ಮದ್ದೂರು ತಾಲ್ಲೂಕಿನಲ್ಲಿ ಆನೆಗಳು ಪ್ರತ್ಯಕ್ಷ: ಬೆಳೆ ನಾಶ

ಮದ್ದೂರು ತಾಲ್ಲೂಕಿನಲ್ಲಿ ಆನೆಗಳು ಪ್ರತ್ಯಕ್ಷ: ಬೆಳೆ ನಾಶ

0

ಮದ್ದೂರು: ಮದ್ದೂರು ತಾಲ್ಲೂಕಿನ ತಿಪ್ಪೂರು ಗ್ರಾಮದ ಬಳಿ ಆನೆಗಳು  ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

Join Our Whatsapp Group

ತಿಪ್ಪೂರು ಗ್ರಾಮ ಸೇರಿ ಮಾದಾಪುರದೊಡ್ಡಿ ಗ್ರಾಮದಲ್ಲಿ ಆನೆಗಳು ಜಮೀನಿನಲ್ಲಿ ರೈತರು ಬೆಳೆದಿದ್ದ ಸಪೋಟ, ಬಾಳೆ ಬೆಳೆಗಳನ್ನು ಹಾನಿ ಮಾಡಿವೆ.  

ಬೆಳೆದ ಬೆಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ರೈತರ ಜಮೀನಿನಲ್ಲೆ ಆನೆಗಳ ಗುಂಪು ಬೀಡುಬಿಟ್ಟಿದ್ದು, ಸ್ಥಳಕ್ಕೆ ಅರಣ್ಯಾಧೀಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಹಿತಕರ ಘಟನೆಗಳು ನಡೆಯದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಿದ್ದಾರೆ. ಅರಣ್ಯ ಪ್ರದೇಶಕ್ಕೆ ಆನೆಗಳನ್ನು ಓಡಿಸಲು ಅರಣ್ಯಾಧಿಕಾಗಳು ಹರಸಹಾಸ ಪಡುತ್ತಿದ್ದಾರೆ.