ಮನೆ ಮನರಂಜನೆ ಬಾಬಿ ಡಿಯೋಲ್ ನಟನೆಯೆ ‘ಅನಿಮಲ್​’  ಚಿತ್ರದ ಲುಕ್ ರಿಲೀಸ್

ಬಾಬಿ ಡಿಯೋಲ್ ನಟನೆಯೆ ‘ಅನಿಮಲ್​’  ಚಿತ್ರದ ಲುಕ್ ರಿಲೀಸ್

0

ನಟ ಸನ್ನಿ ಡಿಯೋಲ್​ ಅವರ ಸಹೋದರ ಬಾಬಿ ಡಿಯೋಲ್​ ಕೂಡ ಅಂತಹ ಒಂದು ಗೆಲುವಿಗಾಗಿ ಕಾದಿದ್ದಾರೆ. ರಣಬೀರ್​ ಕಪೂರ್​ ನಟನೆ ‘ಅನಿಮಲ್​’  ಸಿನಿಮಾದಲ್ಲಿ ಬಾಬಿ ಡಿಯೋಲ್​ ಅವರು ಒಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾ ತಂಡದಿಂದ ಹೊಸ ಪೋಸ್ಟರ್​ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ಬಾಬಿ ಡಿಯೋಲ್​ ಅವರ ಲುಕ್​ ಸಖತ್ ರಗಡ್​ ಆಗಿದೆ.

Join Our Whatsapp Group

ಬಾಲ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ಬಾಬಿ ಡಿಯೋಲ್​. ಬಾಲಿವುಡ್​ನಲ್ಲಿ ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ಅವರು ನೀಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರಿಗೆ ನಿರೀಕ್ಷಿತ ಮಟ್ಟದ ಗೆಲುವು ಸಿಕ್ಕಿಲ್ಲ. ‘ಅನಿಮಲ್​’ ಸಿನಿಮಾ ಮೂಲಕ ಆ ಗೆಲುವು ಸಿಗುವ ನಿರೀಕ್ಷೆ ಇದೆ. ಈ ಚಿತ್ರ ಸಖತ್​ ಮಾಸ್​ ಆಗಿ ಮೂಡಿಬರುತ್ತಿದ್ದು, ಡಿಸೆಂಬರ್​ 1ರಂದು ಬಿಡುಗಡೆ ಆಗಲಿದೆ. ಈಗಾಗಲೇ ಬಿಡುಗಡೆ ಆಗಿರುವ ರಶ್ಮಿಕಾ ಮಂದಣ್ಣ, ರಣಬೀರ್​ ಕಪೂರ್​, ಅನಿಲ್​ ಕಪೂರ್​ ಅವರ ಪೋಸ್ಟರ್​ಗಳು ಗಮನ ಸೆಳೆದಿದೆ.

 ‘ಅನಿಮಲ್​’ ಸಿನಿಮಾಗೆ ಸಂದೀಪ್​ ರೆಡ್ಡಿ ವಂಗ ಅವರು ನಿರ್ದೇಶನ ಮಾಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಈಗಾಗಲೇ ಬಿಡುಗಡೆ ಆಗಿರಬೇಕಿತ್ತು. ಆದರೆ ಕೆಲಸಗಳು ಅಂದುಕೊಂಡ ದಿನಾಂಕದಲ್ಲಿ ಪೂರ್ಣಗೊಳ್ಳದ ಕಾರಣ ರಿಲೀಸ್​ ದಿನಾಂಕ ಮುಂದಕ್ಕೆ ಹೋಗಿದೆ. ಡಿಸೆಂಬರ್​ 1ರಂದು ಈ ಚಿತ್ರ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಕನ್ನಡ, ತೆಲುಗು ಸೇರಿದಂತೆ ಹಲವು ಭಾಷೆಗಳಿಗೆ ಡಬ್​ ಆಗಿ ಈ ಚಿತ್ರ ತೆರೆಕಾಣಲಿದೆ.

ಈ ಹಿಂದೆ ಸಂದೀಪ್​ ರೆಡ್ಡಿ ವಂಗ ಅವರು ‘ಅರ್ಜುನ್​ ರೆಡ್ಡಿ’ ಮತ್ತು ‘ಕಬೀರ್​ ಸಿಂಗ್​’ ಸಿನಿಮಾಗಳಿಗೆ ನಿರ್ದೇಶನ ಮಾಡಿ ಗೆಲುವು ಕಂಡಿದ್ದರು. ಈಗ ಅವರು ‘ಅನಿಮಲ್​’ ಸಿನಿಮಾವನ್ನು ಸಖತ್​ ಮಾಸ್​ ಆಗಿ ಕಟ್ಟಿಕೊಟ್ಟಿದ್ದಾರೆ. ಇಂದು (ಸೆಪ್ಟೆಂಬರ್​ 26) ಬಿಡುಗಡೆ ಆಗಿರುವ ಬಾಬಿ ಡಿಯೋಲ್​ ಅವರ ಪೋಸ್ಟರ್ ​ಗೆ ಜನರಿಂದ ಪಾಸಿಟಿವ್​ ಕಮೆಂಟ್​ಗಳು ಬರುತ್ತಿವೆ. ಈ ಸಿನಿಮಾದಲ್ಲಿ ರಣಬೀರ್​ ಕಪೂರ್​ಗಿಂತಲೂ ಬಾಬಿ ಡಿಯೋಲ್​ ಅವರೇ ಜಾಸ್ತಿ ಅಬ್ಬರಿಸಲಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ‘ಅನಿಮಲ್​’ ಸಿನಿಮಾ ಮೇಲೆ ಹೈಪ್​ ಸೃಷ್ಟಿ ಆಗಿದೆ. ಶೀಘ್ರದಲ್ಲೇ ಈ ಸಿನಿಮಾದ ಟೀಸರ್​ ಬಿಡುಗಡೆ ಆಗಲಿದೆ.