ಮನೆ ಸುದ್ದಿ ಜಾಲ ಕೃಷ್ಣಾ ನದಿ ಪಾಲಾದ ಇಬ್ಬರು ಯುವಕರು

ಕೃಷ್ಣಾ ನದಿ ಪಾಲಾದ ಇಬ್ಬರು ಯುವಕರು

0

ರಾಯಚೂರು: ಮಕರ ಸಂಕ್ರಾಂತಿಯಂದು ಪುಣ್ಯಸ್ನಾನ ಮಾಡುವುದಕ್ಕಾಗಿ ತೆರಳಿದ ರಾಯಚೂರಿನ ಇಬ್ಬರು ಯುವಕರು ಕೃಷ್ಣಾ ನದಿಯ ಪಾಲಾಗಿದ್ದಾರೆ.

ಸಂಕ್ರಾಂತಿ ಪೀಡೆ ಕಳೆಯುವುದಕ್ಕಾಗಿ ನದಿಯಲ್ಲಿ ಸ್ನಾನ ಮಾಡಲು ಹೋಗುವುದು ವಾಡಿಕೆ. ಅಂತೆಯೇ ಸ್ನಾನ ಮಾಡುವುದಕ್ಕಾಗಿ ರಾಯಚೂರಿನ ಆರೇಳು ಯುವಕರು ಕೃಷ್ಣಾ ನದಿಗೆ ತೆರಳಿದ್ದಾರೆ. ಇದರಲ್ಲಿ ಗಣೇಶ್ ಮತ್ತು ಉದಯ್ ಕುಮಾರ್ ಎಂಬ ಯುವಕರು ಮೃತಪಟ್ಟಿದ್ದಾರೆ. ಗಣೇಶ್ ಮೃತದೇಹ ದೊರೆತಿದ್ದರೆ, ಉದಯ್ ಕುಮಾರ್ ಮೃತದೇಹಕ್ಕಾಗಿ ಶೋಧ ನಡೆಸಲಾಗುತ್ತದೆ.

ಮೃತ ಗಣೇಶ್ ರಾಯಚೂರಿನ ನಿಜಲಿಂಗಪ್ಪ ಕಾಲೋನಿಯ ನಿವಾಸಿ ಆಗಿದ್ದಾರೆ. ಉದಯ್ಕುಮಾರ್ ಸಹ ರಾಯಚೂರಿನ ಕೆಇಬಿ ಕಾಲೋನಿಯ ನಿವಾಸಿ ಆಗಿದ್ದಾರೆ ಎಂದು ತಿಳಿದು ಬಂದಿದೆ.  ನದಿಯಲ್ಲಿ ಸದ್ಯ ನೀರಿನ ರಭಸವೇನೂ ಇಲ್ಲ. ಜನರು ಸ್ನಾನ ಮಾಡಲು ನಿಗದಿಪಡಿಸಿದಂತಹ ಸ್ಥಳ ಬಿಟ್ಟು ಈ ಯುವಕರು ದೂರ ತೆರಳಿದ್ದಾರೆ. ಆಳವಾದ ಪ್ರದೇಶದಲ್ಲಿ ಈಜಾಡಲು ಹೋಗಿ ಮೃತಪಟ್ಟಿರಬಹುದು ಎಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.