ಮನೆ ಸುದ್ದಿ ಜಾಲ ಮಲೆಮಹದೇಶ್ವರ ಬೆಟ್ಟದ ವಸತಿಗೃಹದಿಂದ ತಾಯಿ ಮಗನನ್ನು ಹೊರ ಹಾಕಿದ ಅಧಿಕಾರಿಗಳು

ಮಲೆಮಹದೇಶ್ವರ ಬೆಟ್ಟದ ವಸತಿಗೃಹದಿಂದ ತಾಯಿ ಮಗನನ್ನು ಹೊರ ಹಾಕಿದ ಅಧಿಕಾರಿಗಳು

0

ಚಾಮರಾಜನಗರ: ಮಲೇ ಮಹದೇಶ್ವರ ಬೆಟ್ಟದ ವಸತಿ ಗೃಹದಲ್ಲಿ ವಾಸವಿದ್ದ ತಾಯಿ ಮಗನನ್ನು ಅಧಿಕಾರಿಗಳು ಹೊರ ಹಾಕಿರುವ ಅಮಾನವೀಯ ಘಟನೆ  ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮಲೇ ಮಹದೇಶ್ವರಬೆಟ್ಟದಲ್ಲಿ ನಡೆದಿದೆ.

ವಸತಿ ಗೃಹದಲ್ಲಿದ್ದ ನೌಕರ ಜಯಸ್ವಾಮಿ ಕಳೆದ 3 ವರ್ಷದ ಹಿಂದೆ ಕಿಡ್ನಿ ವೈಪಲ್ಯದಿಂದ ಮೃತಪಟ್ಟಿದ್ದರು. ಅಂದಿನಿಂದಲೂ ನೌಕರ ಜಯಸ್ವಾಮಿ ಅವರ ಪತ್ನಿ ಹಾಗೂ ಮಗ ವಸತಿ ಗೃಹದಲ್ಲೇ ವಾಸವಿದ್ದರು.   ಮಗ ಶಾಂತಮಲ್ಲೇಶ್ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದು ವರ್ಷದಿಂದ ಇವರಿಗೂ ಕೆಲಸವಿರಲಿಲ್ಲ.

ಇದೀಗ ಅಧಿಕಾರಿಗಳು ತಾಯಿ ಮತ್ತು ಮಗನನ್ನ ವಸತಿಗೃಹದಿಂದ ಹೊರಗೆ ಹಾಕಿದ್ದಾರೆ. ಅಧಿಕಾರಿಗಳ ನಡೆಯಿಂದ ಮೃತ ಜಯಸ್ವಾಮಿ ಅವರ ಕುಟುಂಬಕ್ಕೆ ಇರಲು ಮನೆಯೂ ಇಲ್ಲ. ಮಗನಿಗೆ ನೌಕರಿಯೂ ಇಲ್ಲದಂತಾಗಿದೆ. ತಾಯಿಮಗ ಬೀದಿಗೆ ಬಿದಿದ್ದಾರೆ.

ಹಿಂದಿನ ಲೇಖನಕೃಷ್ಣಾ ನದಿ ಪಾಲಾದ ಇಬ್ಬರು ಯುವಕರು
ಮುಂದಿನ ಲೇಖನಜಮ್ಮು ಕಾಶ್ಮೀರ ಪೊಲೀಸರಿಂದ ಮೂವರು ಎಲ್ಇಟಿ ಉಗ್ರರ ಬಂಧನ