ಮನೆ ರಾಜ್ಯ ಅಕಸ್ಮಿಕ ಸ್ಫೋಟ: ಮನೆ ಗೋಡೆ ಕುಸಿದು 6 ಮಂದಿಗೆ ಗಂಭೀರ ಗಾಯ

ಅಕಸ್ಮಿಕ ಸ್ಫೋಟ: ಮನೆ ಗೋಡೆ ಕುಸಿದು 6 ಮಂದಿಗೆ ಗಂಭೀರ ಗಾಯ

0

ತುಮಕೂರು: ಆಕಸ್ಮಿಕ ಸ್ಫೋಟವಾಗಿ ಮನೆ ಗೋಡೆ ಕುಸಿದು ಆರು ಜನರಿಗೆ ಗಂಭೀರ ಗಾಯವಾದ ಘಟನೆ ತುಮಕೂರು ಜಿಲ್ಲೆಯ ಶಿರಾ ನಗರದಲ್ಲಿ ನಡೆದಿದೆ.

Join Our Whatsapp Group

ಮಧುಗಿರಿ ರಸ್ತೆಯ ಪಾರ್ಕ್ ಮೊಹಲ್ಲಾದ ನಜೀರ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಕೂಡಲೇ ಗಾಯವಾದವರಿಗೆ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

ಸ್ಫೋಟಕ್ಕೆ ನಿಖರ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಇನ್ನು ಸ್ದಳಕ್ಕೆ ತುಮಕೂರು ಎಸ್ಪಿ ಕೆ.ವಿ ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳಕ್ಕೆ ಶಾಸಕ ಟಿ.ಬಿ ಜಯಚಂದ್ರ ಭೇಟಿ ನೀಡಿದ್ದಾರೆ.  ಶಿರಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.