ಮನೆ ಸ್ಥಳೀಯ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ

ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ

0

ಮೈಸೂರು: ನಗರದ ಹೂಟಗಳ್ಳಿಯ ಕರಾವಳಿ ಸಾಂಸ್ಕೃತಿಕ ಚಾವಡಿಯ ದಶಮಾನೋತ್ಸವದ ಪ್ರಯುಕ್ತ ಹೂಟಗಳ್ಳಿಯ ಶ್ರೀ ಸರ್ವ ಸಿದ್ದಿ ಪ್ರದಾಯಕ ಗಣಪತಿ ದೇವಸ್ಥಾನ ಮತ್ತು ಸರಸ್ವತಿ ಕನ್ವೆನ್ಷನ್ ಹಾಲ್ ಹಿಂಭಾಗ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ರಂಗಮಂಟಪದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟವನ್ನು ಬಹಳ ಯಶಸ್ವಿಯಾಗಿ ಪ್ರದರ್ಶನಗೊಂಡಿತು.

ಕರಾವಳಿ ಸಾಂಸ್ಕೃತಿಕ ಚಾವಡಿ ಸುಮಾರು 10 ವರ್ಷಗಳಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಮುಖೇನ ಎಲ್ಲಾ ಕರಾವಳಿಯ ಜನರಿಗೆ ಮತ್ತು ಮೈಸೂರಿನ ಜನತೆಗೆ ಕರಾವಳಿ ಪ್ರದೇಶದ ಸಂಸ್ಕೃತಿಯನ್ನು ತೋರಿಸಿಕೊಡುವ ಪ್ರಯತ್ನವನ್ನು ಮಾಡಿಕೊಂಡು ಬಂದಿದೆ.

ಶ್ರೀ ಚಾಮುಂಡೇಶ್ವರಿ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟಕ್ಕೆ ಕರಾವಳಿ ಪ್ರದೇಶದ ಜನರು ಮತ್ತು ಮೈಸೂರಿನ ಜನತೆ ಸುಮಾರು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷಗಾನವನ್ನು ವೀಕ್ಷಿಸಿ ಆನಂದ ಪಟ್ಟರು. ವಿಶೇಷತೆಯಾಗಿ ಚಾಮುಂಡೇಶ್ವರಿ ದೇವಿಯನ್ನು ಕ್ರೇನ್ ಮೂಲಕ ಬಹಳ ಎತ್ತರದಿಂದ ಭಕ್ತಾದಿಗಳಿಗೆ ದರ್ಶನವನ್ನು ನೀಡುವ ಪರಿಯಂತೂ ಬಹಳ ಅದ್ಭುತವಾಗಿತ್ತು. ಮಹಿಷಾಸುರನ ಅಬ್ಬರದ ಪ್ರವೇಶವಂತು ಎಲ್ಲರನ್ನು ಮುಖವಿಸ್ಮಿತರನ್ನಾಗಿ ಮಾಡಿತ್ತು.

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಡಾಕ್ಟರ್ ದಿನೇಶ್ ಶೆಟ್ಟಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಕಾರ್ಯದರ್ಶಿ ರಾಕೇಶ್ ರೈ ಎ , ಖಜಾಂಚಿ ಆದಿತ್ಯ, ಉಪಾಧ್ಯಕ್ಷ ಹರೀಶ್, ಐತ್ತಪ್ಪ, ಶುಭಂ ಪೂಜಾರಿ ಹಾಗೂ ಸಂಘದ ಸರ್ವ ಸದಸ್ಯರು ಈ ಯಕ್ಷಗಾನದಲ್ಲಿ ಹಾಜರಿದ್ದರು.