ಮನೆ ಅಪರಾಧ ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ

ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ

0

ಕೊಳ್ಳೇಗಾಲ : ಅಂತರ ಜಿಲ್ಲಾ ಬೈಕ್ ಕಳ್ಳನೊಬ್ಬನನ್ನು ಪಟ್ಟಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.


ಹನೂರು ತಾಲೂಕಿನ ಒಡೆಯರಪಾಳ್ಯ ಸಮೀಪದ ಎ.ಎಸ್.ದೊಡ್ಡಿಯಲ್ಲಿ ವಾಸವಿದ್ದ ರಾಜೇಶ್ ಅಲಿಯಾಸ್ ಕುಳ್ಳ (26) ಬಂದಿತ ಆರೋಪಿ.

ಈತ ಮೂಲತಃ ತಿ.ನರಸೀಪುರ ತಾಲೂಕಿನ ಕಲಿಯೂರು ಗ್ರಾಮದವನು. ಆರೋಪಿ ರಾಜೇಶ್ ಪಟ್ಟಣದಲ್ಲಿ ಹೋಗುತ್ತಿದ್ದ ಪೊಲೀಸರನ್ನು ಕಂಡು ಗಾಬರಿಯಾಗಿ ಓಡಲು ಯತ್ನಿಸಿದಾಗ ಹಿಡಿದು ವಿಚಾರ ನಡೆಸಿದಾಗ ಬೈ ಕದ್ದಿರುವುದಾಗಿ ಒಪ್ಪಿಕೊಂಡಿದ್ದಾರೆ.
ಈ ಸಂಬಂಧಪಟ್ಟ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ರಾಜೇಶ್ ವಿರುದ್ದ ಬೈಕ್ ಕಳವಿಗೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರು, ಮೈಸೂರು, ಕನಕಪುರ, ತಾಳವಾಡಿ, ಮದ್ದೂರು, ಕೊಳ್ಳೇಗಾಲ ಟೌನ್ ಸೇರಿದಂತೆ 12 ಬೈಕ್ ಗಳನ್ನು ಕದ್ದಿರುವುದು ತಿಳಿದುಬಂದಿದೆ.