ಮನೆ ಸಾಹಿತ್ಯ ಯಾವಾಗಲೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ

ಯಾವಾಗಲೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ

0

ಯಾರಿಗೂ ಕೆಟ್ಟದ್ದನ್ನು ಬಯಸದ ಒಬ್ಬ ಶ್ರೇಷ್ಠ ಪಾದ್ರಿಯಿದ್ದರು. ಒಮ್ಮೆ ಅವರು ಕಾಫಿ ಕುಡಿಯಲು ಒಂದು ಹೋಟೆಲಿಗೆ ಬಂದರು. ಅಂದು ಉಪವಾಸದ ದಿನವಾಗಿತ್ತು. ಹೀಗಾಗಿ ಅವರು ಕೇವಲ ಕಾಫಿ ಕುಡಿದರು. ತಮ್ಮ ಪಕ್ಕದ ಟೇಬಲಿನಲ್ಲಿ ತಮ್ಮ ಚರ್ಚಿನ ಯುವಕನೊಬ್ಬ ಚೆನ್ನಾಗಿ  ಮಾಂಸವನ್ನು ತಿನ್ನುತ್ತಿದ್ದನ್ನು ನೋಡಿದರು.

“ನಾನು ನಿಮಗೆ ಅಚ್ಚರಿ ಮೂಡಿಸಲಿಲ್ಲವಷ್ಟೇ?” ಎಂದು ಆತ ನಗುತ್ತಾ ಹೇಳಿದ. “ನೀನು ಇಂದು ಉಪವಾಸ ದಿನವೆಂದು ಮರೆತಿರುವೆನಿಸುತ್ತದೆ?” ಎಂದು ಪಾದ್ರಿ ಅವನನ್ನು ಕೇಳಿದರು. “ಇಲ್ಲ, ನನಗೆ ಚೆನ್ನಾಗಿ ನೆನಪಿದೆ?” “ಹಾಗಾದ್ರೆ ನೀನು ಹುಷಾರಿಲ್ಲವೇನಿಸುತ್ತದೆ. ವೈದ್ಯರಿಗೆ ಉಪವಾಸ ಮಾಡದಿರಲು ಹೇಳಿರಬಹುದು” “ಇಲ್ಲವೇ ಇಲ್ಲ. ನಾನು ಬಹಳ ಆರೋಗ್ಯವಂತನಾಗಿದ್ದೇನೆ.” ಈ ಮಾತುಗಳನ್ನು ಕೇಳಿ ಪಾದ್ರಿ ಮೇಲೆ ದೃಷ್ಟಿಸಿ ತಗ್ಗಿಸುವಂತೆ ಏನನ್ನು ಹೇಳಿದರು.

ಪ್ರಶ್ನೆಗಳು :-

1.ಪಾದ್ರಿ ಏನು ಹೇಳಿದರು? 2. ಈ ಕಥೆಯ ನೀತಿ ಏನು?

ಉತ್ತರಗಳು :-

1.ಪಾದ್ರಿ ದೇವನತ್ತ ದೃಷ್ಟಿಸಿ ಹೇಳಿದರು. “ಈ ಯುವ ಪೀಳಿಗೆ ನಮಗೆ ಎಂತಹ ಉದಾಹರಣೆ! ಅವರು ಸುಳ್ಳು ಹೇಳುವುದಕ್ಕಿಂತ ತಮ್ಮ ಪಾಪವನ್ನು ಒಪ್ಪಿಕೊಳ್ಳುತ್ತಾರೆ ಎನ್ನುವುದು ಎಷ್ಟು ಉತ್ತಮವಲ್ಲವೇ?”

2. ನಾವು ಮಹಾನರಾದಷ್ಟು ಎಲ್ಲವನ್ನೂ ಸಕಾರಾತ್ಮವಾಗಿ ಕಾಣಬಲ್ಲೆವು. ಪ್ರತಿದಿನವೂ ಒಂದು ರೀತಿಯ ಪ್ರೇರಣೆ ನಮಗೆ ದೊರಕುತ್ತದೆ. ನಾವು ಸಕಾರವಾಗಿ ಪ್ರತಿಕ್ರಿಯಿಸಿದರೆ, ಸಕಾರಾತ್ಮಕ ವ್ಯಕ್ತಿತ್ವವು ನಮ್ಮಲ್ಲಿ ಬೆಳೆಸಿಕೊಳ್ಳುತ್ತೇವೆ. ಇನ್ನೊಂದೆಡೆ ನಕಾರಾತ್ಮಕ ಪ್ರತಿಕ್ರಿಯೆಗಳು ನಮ್ಮನ್ನು ತೊಂದರೆಗೆ ಸಿಲುಕಿಸುತ್ತವೆ. ಆಶಾವಾದಿಗೆ ವಿಶ್ವವು ಹಸಿರಾಗಿ ಕಾಣುತ್ತದೆ. ನಿರಾಶವಾದಿಗೆ ಕಪ್ಪಾಗಿ ಕಾಣುತ್ತದೆ.