ಇದು ಹುಟ್ಟಿನಿಂದಲೇ ಬರುವ ದೋಷ. ಮೇಲಿನ ತುಟಿ ಮಧ್ಯದಲ್ಲಿ ಸೀಳಿರುತ್ತದೆ. ಇದನ್ನು ಗ್ರಹಣದ ತುಟಿ ಎಂತಲೂ ಕರೆಯುತ್ತಾರೆ. ಗ್ರಹಣದ ದೋಷದಿಂದ ಆಗುತ್ತದೆ ಎಂದು ಹೇಳುತ್ತಾರಾದರೂ, ಗ್ರಹಣಕ್ಕೂ ಇದಕ್ಕೂ ಯಾವ ಸಂಬಂಧವೂ ಇಲ್ಲ.
ಸೀಳುತುಟಿ ಇರುವ ಕೆಲವರಲ್ಲಿ ಮಧ್ಯದ ತುಟಿ ಸೀಳಿರುವುದೇ ಅಲ್ಲದೆ ಬಾಯಿಯ ಮೇಲ್ಭಾಗವಾದ ಪೇಲೆಟ್ ಕೂಡ ಮಧ್ಯದಲ್ಲಿ ಸೀಳಿರುತ್ತದೆ. ಹೆಣ್ಣು ಮಕ್ಕಳಿಗಂತೂ ಗಂಡುಮಕ್ಕಳಲ್ಲಿ ಸೀಳು ತುಟಿ ಹೆಚ್ಚಾಗಿರುತ್ತದೆ. ಹುಟ್ಟಿನಿಂದಲೇ ಬರುವ ಸೀಳು ತುಟಿಯೊಂದಿಗೆ ಇತರದೋಷಗಳು ಬರಬಹುದು. ಹೃದಯ ನಿರ್ಮಾಣದಲ್ಲಿ ದೋಷ, ಕೈಗಳು ಮತ್ತು ಪಾದಗಳಲ್ಲಿ ದೋಷ ಇವೆಲ್ಲ ಏಕೀಭವಿಸಿರಬಹುದು.
ಸೀಳು ತುಟಿಯೊಂದಿಗೆ ಮಗು ಹುಟ್ಟಿದರೆ ತಾಯಿತಂದೆಯರಿಗೆ ನೋವಾಗುತ್ತದೆ. ಮುಖ ನೋಡಲು ವಿಕಾರವಾಗಿರುತ್ತದೆ. ಸೀಳು ತುಟಿಯಿಂದಾಗಿ ಮೊಲೆಹಿಡಿದು ಹಾಲು ಕುಡಿಯಲು ಮಗುವಿಗೆ ತೊಂದರೆಯಾಗುತ್ತದೆ.
ಚಿಕಿತ್ಸೆ :-
ಸೀಳು ತುಟಿಯೊಂದಿಗೆ ಹುಟ್ಟಿದ ಮಗುವಿಗೆ 3-4 ತಿಂಗಳ ವಯಸ್ಸಿನಲ್ಲಿ ಆಪರೇಷನ್ ಮಾಡಿ ಸರಿಪಡಿಸಬಹುದು. ಮಗುವಿಗೆ ವಯಸ್ಸು ಬಲಿಯುವ ತನಕ ತಡ ಮಾಡುವ ಅಗತ್ಯವೇನೂ ಇಲ್ಲ. ಬೇಗ ಆಪರೇಷನ್ ಮಾಡಿ ಸರಿಪಡಿಸಿದರೆ ಮಗುವಿಗೆ ಹಾಲು ಕುಡಿಯಲು ಅನುಕೂಲವಾಗುತ್ತದೆ. ಹಾಗೆಯೇ ಘನಹಾರ ತೆಗೆದುಕೊಳ್ಳುವ ಅಷ್ಟು ಹೊತ್ತಿಗೆ ಯಾವುದೇ ತೊಂದರೆಯಿರುವುದಿಲ್ಲ. ಮಗುವಿನ ಬೆಳವಣಿಗೆಗೆ ಕೂಡ ಕುಂಠಿತವಾಗುವುದಿಲ್ಲ. ಸೀಳು ತುಟಿಗೆ ಸರ್ಜರಿ ಮಾಡದಿದ್ದರೆ ಮಗುವಿನ ಆಹಾರ ಸೇವನೆಗೆ ತೊಂದರೆಯಾಗುತ್ತದೆ. ಪೌಷ್ಟಿಕ ಆಹಾರದ ಕೊರತೆಯಿಂದ ರೋಗಗಳು ಮಗುವಿನ ಮೇಲೆ ದಾಳಿ ಮಾಡುತ್ತದೆ.
ಸೀಳು ತುಟಿಯ ಸರ್ಜರಿ ಮಾಡುವುದು ಸುಲಭ. ಆದ್ದರಿಂದ ಯಾವುದೇ ತೊಂದರೆ ಆಗುವುದಿಲ್ಲ.
ಸೀಳು ಬಾಯಿ (ಕೆಫ್ಟ್ ಪಾಲೆಟ್) :-
ಸೀಳು ತುಟಿಯೊಂದಿಗೆ ಬಾಯಿ ಕೂಡ ಸೀಳಿರುವ ಈ ಸ್ಥಿತಿ ಮಗುವಿನ ಆಹಾರ ಸೇವನೆಗೆ ಮತ್ತಷ್ಟು ತೊಂದರೆಯಾಗುತ್ತದೆ. ಉಸಿರಾಟ ಸಮಸ್ಯೆ ಕೂಡ ಉದ್ಭವಿಸುತ್ತದೆ. ಮಾತನಾಡಲು ತೊಂದರೆಯಾಗುತ್ತದೆ. ವರ್ಷದೊಳಗೆ ಸೀಳು ಬಾಯಿಗೆ ಸರ್ಜರಿ ಮಾಡದಿದ್ದರೆ, ಮಗುವಿನ ಸರ್ವಾಂಗೀ ಬೆಳವಣಿಗೆಗೆ ತೊಂದರೆಯಾಗುತ್ತದೆ.
ಈಸೋಫೇಗಲ್ ಎಟ್ರೇಸಿಯಾ :-
ಕೆಲವು ಮಕ್ಕಳಿಗೆ ಅನ್ನನಾಳದ ಮಾರ್ಗ ಮುಚ್ಚಿ ಹೋಗಿರುತ್ತದೆ. ಹಾಗಾಗಿ ಮಗುವಿಗೆ ಬಾಯಿಯ ಮೂಲಕ ಆಹಾರ ತೆಗೆದುಕೊಳ್ಳಲಾಗುವುದಿಲ್ಲ. ಸರ್ಜರಿ ಮಾಡಿ, ಆಹಾರ ಸೇವಿಸುವಂತೆ ಮಾಡಬೇಕು ಅಂತ ಸರ್ಜರಿ 90% ಪರ್ಸೆಂಟ್ ಮಕ್ಕಳಿಗೆ ಯಶಸ್ವಿಯಾಗುತ್ತದೆ. ಈಸೋಫೇಗಲ್ ಎಟ್ರೇಸಿಯಾದೊಂದಿಗೆ ಕೆಲವರಿಗೆ ಮತ್ತಷ್ಟು ದೋಷಗಳು ಜೊತೆಗೂಡಿರುತ್ತದೆ. ಅಂತಹ ದೋಷಗಳಲ್ಲಿ ಹೃದಯ ನಿರ್ಮಾಣದ ದೋಷ, ಬೆನ್ನುಹುರಿಯ ದೋಷ, ಗುದದ್ವಾರ ಮುಚ್ಚಿ ಹೋಗಿರುವುದು, ಕರುಳು ಮುಚ್ಚಿರುವುದು ಮುಂತಾದ ದೋಷಗಳಿರುತ್ತದೆ. ಇವೆಲ್ಲ ಗುರುತಿಸಿ ಸರ್ಜರಿ ಮಾಡಿ ಸರಿಪಡಿಸಬೇಕು.
ಮುಂದುವರೆಯುತ್ತದೆ…