ಮನೆ ಆರೋಗ್ಯ ಕಾರ್ಡಿ

ಕಾರ್ಡಿ

0

ಕೆಲವು ಮಕ್ಕಳಿಗೆ ಶಿಶ್ನ ಮಧ್ಯದಲ್ಲಿ ಕಮಾನಿನಂತೆ ಬಾಗಿರುತ್ತದೆ. ಅದು ನೇರವಾಗಿರುವುದಿಲ್ಲ. ಈ ಸಮಸ್ಯೆಯನ್ನು ಕಾರ್ಡಿ ಎನ್ನುತ್ತಾರೆ. ಕಾರ್ಡಿ ಜೊತೆಗೆ ಹೈಪೋಸ್ಪಿಡಿಯಾಸ್ ಕೂಡ ಇರಬಹುದು. ಕಾರ್ಡಿ ಇದ್ದಾಗ ಸರ್ಜರಿಯ ಮೂಲಕ ಸರಿಪಡಿಸಬೇಕು.

ಹೈಡ್ರೋಸೀಲ್ :-

ಕೆಲವು ಮಕ್ಕಳಿಗೆ ಹುಟ್ಟಿದಾಗಲೇ ಹೈಡ್ರೋಸೀಲ್ ಇರುತ್ತದೆ. ಕೆಲವು ರೀತಿಯ ಹೈಡ್ರೋಸೀಲ್ ಒಂದು ಹಂತದ ವಯಸ್ಸಿಗೆ ಬಂದಾಗ ತಂತಾನೆ ಸರಿ ಹೋಗುತ್ತದೆ. ಇಂತಹ ಹೈಡ್ರೋಸೀಲನ್ನು ನಾನು ಕಮ್ಯುನಿಕೇಟಿಂಗ್ ಹೈಡ್ರೋಸೀಲ್ ಎನ್ನುತ್ತಾರೆ. ಕಮ್ಯುನಿಕೇಟಿಂಗ್ ಹೈಡ್ರೋಸೀಲ್ ಗೆ ಸರ್ಜರಿ ಮಾಡಬೇಕಾಗುತ್ತದೆ. ಕಮ್ಯುನಿಕೇಟಿಂಗ್ ಹೈಡ್ರೋಸೀಲ್ ಜೊತೆಗೆ ಹರ್ನಿಯಾ ಕೂಡ ಇರುತ್ತದೆ. ಇಂತಹ ಪ್ರಸಂಗಗಳಲ್ಲಿ ಹೈಡ್ರೋ ಸೀನ್ ಮತ್ತು ಹರ್ನಿಯಾ ಎರಡಕ್ಕೂ ಸರ್ಜರಿ ಮಾಡಬೇಕಾಗುತ್ತದೆ.

ಡೆರ್ಸಾಯಿಡ್ ಸಿಸ್ಟ್ಸ್ :-

ಡೆರ್ಸಾಯಿಡ್ ಸಿಸ್ಟ್ಸ್ ಗಳು ತಲೆ ಮತ್ತು ಮುಖದ ಮೇಲೆ ಬರುತ್ತದೆ. ಇವು ಹುಟ್ಟಿದಾಗ ನಿಧಾನವಾಗಿ ಗಾತ್ರದಲ್ಲಿ ದೊಡ್ಡದಾಗುತ್ತದೆ. ಕೆಲವರಿಗೆ ಕೇಂದ್ರ ಭಾಗದಲ್ಲಿದ್ದರೆ ಮತ್ತೆ ಕೆಲವರಿಗೆ ಪಕ್ಕದಲ್ಲಿರುತ್ತದೆ. ಇನ್ನು ಕೆಲವರಿಗೆ ಕಣ್ಣಿನ ಹೊರಭಾಗದಲ್ಲಿರುತ್ತದೆ.

ಡೆರ್ಸಾಯಿಡ್ ಸಿಸ್ಟ್ಸ್ ಗಳಿದ್ದಾಗ ಸಿ.ಟಿ. ಸ್ಕ್ಯಾನ್ ಕೂಡ ಅಗತ್ಯವಾಗುತ್ತದೆ. ಬಹುಜಾಗ್ರತೆಯಾಗಿ ಇವುಗಳನ್ನು ಆಪರೇಷನ್ ಮಾಡಬೇಕು.

ಅಂಬಿಗ್ವಸ್ ಜೆನಿಟೇಲಿಯಾ :-

ಸಹಜವಾಗಿ ಗಂಡುಮಕ್ಕಳಿಗಾಗಲೀ, ಹೆಣ್ಣುಮಕ್ಕಳಾಗಲೀ ಗುಪ್ತಾಂಗಗಳು ಸ್ಪಷ್ಟವಾಗಿರುತ್ತದೆ. ಯಾವುದೇ ಗೊಂದಲವಿರುವುದಿಲ್ಲ. ಆದರೆ ಕೆಲವು ಮಕ್ಕಳನ್ನು ಗಂಡೋ, ಹೆಣ್ಣೋ ಎಂದು ನಿರ್ಧರಿಸಲಾಗುವುದಿಲ್ಲ. ಅದಕ್ಕೆ ಕಾರಣ ಅತ್ತ ಹೆಣ್ಣು ಅಲ್ಲದಂತೆ, ಇತ್ತ ಗಂಡು ಅಲ್ಲದಂತೆ ನಿರ್ಮಾಣವಾಗಿರುತ್ತದೆ.

ಇಂತಹ ಸಂದರ್ಭಗಳಲ್ಲಿ ಕೇರಿಯೋ ಟೈಪಿಂಗ್ ಮಾಡಿದರೆ ಗಂಡೋ-ಹೆಣ್ಣೋ ತಿಳಿಯುತ್ತದೆ. ಆಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಲಿಂಗ ನಿರ್ಧರಿಸಲು ಸಹಕರಿಸುತ್ತದೆ. ಹಾರ್ಮೋನ್ ಪರೀಕ್ಷೆಗಳು ಕೂಡ ಸೂಕ್ತ ವಿಷಯವನ್ನು ತಿಳಿಸುತ್ತದೆ. ಅವುಗಳ ಪ್ರಕಾರ ಲಿಂಗ ನಿರ್ಧರಿಸಬೇಕು ಮತ್ತು ಮಗುವನ್ನು ಆ ರೀತಿ ಮಾರ್ಪಡಿಸಬಹುದು.

ಬೀಜಕೋಶದೊಳಕ್ಕಿಳಿಯದ ಬೀಜಗಳು :-

ಕೆಲವು ಗಂಡು ಮಕ್ಕಳಿಗೆ ವೃಷಣಗಳು ಬೀಜಕೋಶದೊಳಕ್ಕಿಳಿಯದೆ ಕೆನಾಲ್ ನಲ್ಲಾಗಲೀ, ಲೋಯರ್ ಅಬ್ಡಾಮಿನಲ್ ನಲ್ಲಾಗಲೀ  ಇದ್ದುಬಿಡುತ್ತದೆ. ಈ ಸ್ಥಿತಿಯನ್ನು ಆನ್ ಡಿಫೆಂಡೆಡ್ ಟೆಸ್ಟಿನ್ ಎನ್ನುತ್ತಾರೆ. ಬೀಜಕೋಶದೊಳಕ್ಕೆ ಎರಡು ವೃಷಣಗಳು ಇಳಿಯದೇ ಇರಬಹುದು, ಒಮ್ಮೊಮ್ಮೆ ಎರಡು ವೃಷಣಗಳು ಇಲ್ಲದೆಯೂ ಇರಬಹುದು, ಇಲ್ಲವೇ ಒಂದೇ ವೃಷಣವಿರಬಹುದು.

ಅವಧಿಗೆ ಮುಂಚೆ ಹುಟ್ಟಿದ ಮಕ್ಕಳಲ್ಲಿ, ಕಡಿಮೆ ತೂಕದೊಂದಿಗೆ ಹುಟ್ಟಿದ ಮಕ್ಕಳಲ್ಲಿ ಈ ಪರಿಸ್ಥಿತಿ 30%ರಷ್ಟು ಇರುವ ಸಾಧ್ಯತೆ ಇರುತ್ತದೆ. ಪೂರ್ಣಾವಧಿಯ ನಂತರ ಹುಟ್ಟಿದ ಮಕ್ಕಳಲ್ಲಿ ಕೂಡ 3% ರಷ್ಟು ಈ ಸಮಸ್ಯೆ ಇರುತ್ತದೆ. ಯಾವುದೇ ಮಕ್ಕಳಿಗಾಗಲಿ ಬೀಜಗಳು ಮೇಲೆತ್ತಿದ್ದರೂ ಕೂಡ ವರ್ಷ ತುಂಬುವುದರೊಳಗೆ ಬೀಜಕೋಶಕ್ಕೆ ಇಳಿಯುತ್ತದೆ. ವರ್ಷದೊಳಗೆ ಬೀಜಕೋಶಕ್ಕಿಳಿಯದಿದ್ದರೆ ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗುತ್ತದೆ. ಎರಡು ವರ್ಷಗಳಾದರೂ ಬೀಜ ಜೀವಕೋಶದೊಳಗಿಳಿಯದಿದ್ದರೆ ಅವು ವೀರ್ಯಕಣಗಳ ಉತ್ಪಾದನಾ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಹಾಗಾಗಿ ವೃಷಣಗಳಿದ್ದೂ ಕೂಡ ಜೀವಕೋಶದೊಳಕ್ಕಿಳಿಸಬೇಕು.  ಎರಡು ವರ್ಷಗಳ ನಂತರ ಆಪರೇಷನ್ ಮಾಡಿದರೆ, ಅದರಲ್ಲಿನ ವೀರ್ಯಕಣಗಳನ್ನು ಉತ್ಪತ್ತಿ ಮಾಡುವ ವ್ಯವಸ್ಥೆಗೆ ಕೊಂಚದಕ್ಕೆಯಾಗಿರುತ್ತದೆ. 7 ವರ್ಷಗಳವರೆಗೆ ತಡ ಮಾಡಿದರೆ, ವೀರ್ಯಕಣಗಳನ್ನು ಉತ್ಪತ್ತಿ ಮಾಡುವ ಅಂಗಾಂಶಗಳು ಸಂಪೂರ್ಣ ಶಿಥಿಲವಾಗಿರುತ್ತದೆ. ಆದ್ದರಿಂದ ಹೆತ್ತವರಿಗೆ ಗಂಡು ಮಗುವಿನ ಬೀಜಗಳ ವಿಷಯದಲ್ಲಿ ತಿಳುವಳಿಕೆ ಇರಬೇಕಾಗುತ್ತದೆ.

ಮುಂದುವರೆಯುತ್ತದೆ…