ಮನೆ ಕ್ರೀಡೆ ಏಷ್ಯಾ ಕಪ್‌ ಫುಟ್‌ಬಾಲ್‌ ಅರ್ಹತಾ ಟೂರ್ನಿ: ಭಾರತಕ್ಕೆ ಗೆಲುವು

ಏಷ್ಯಾ ಕಪ್‌ ಫುಟ್‌ಬಾಲ್‌ ಅರ್ಹತಾ ಟೂರ್ನಿ: ಭಾರತಕ್ಕೆ ಗೆಲುವು

0

ಸೌದಿ ಅರೇಬಿಯಾ: ಭಾರತ ತಂಡದವರು ಎಎಫ್‌ಸಿ 17 ವರ್ಷದೊಳಗಿನವರ ಏಷ್ಯಾ ಕಪ್‌ ಫುಟ್‌ಬಾಲ್‌ ಅರ್ಹತಾ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿದ್ದಾರೆ.

ಗುರುವಾರ ನಡೆದ ಪಂದ್ಯದಲ್ಲಿ ಭಾರತ 3–0 ಗೋಲುಗಳಿಂದ ಕುವೈತ್ ತಂಡವನ್ನು ಪರಾಭವಗೊಳಿಸಿತು. ಮೊದಲ ಪಂದ್ಯದಲ್ಲಿ ಭಾರತ 5–0 ರಲ್ಲಿ ಮಾಲ್ಡೀವ್ಸ್‌ ಎದುರು ಗೆದ್ದಿತ್ತು.ತಾಂಗ್‌ಲಾಲ್‌ಸುನ್‌ ಗಾಂಗ್ಟೆ (16 ಮತ್ತು 70ನೇ ನಿ.) ಅವರು ಎರಡು ಗೋಲುಗಳನ್ನು ಗಳಿಸಿ ಭಾರತದ ಗೆಲುವಿನ ರೂವಾರಿ ಎನಿಸಿಕೊಂಡರು.

ಮತ್ತೊಂದು ಗೋಲನ್ನು ಕೊರೊ ಸಿಂಗ್‌ ತಿಂಗುಜಮ್ (66ನೇ ನಿ.) ಗಳಿಸಿದರು. ಈ ಗೆಲುವಿನ ಮೂಲಕ ಬಿಬಿಯಾನೊ ಫೆರ್ನಾಂಡೆಸ್‌ ಬಳಗ ಮೂರು ಪಾಯಿಂಟ್‌ ಕಲೆಹಾಕಿತು.

ಭಾರತ ತಂಡದ ಗೋಲ್‌ಕೀಪರ್‌ ಸಾಹಿಲ್‌ ಅವರು ಎದುರಾಳಿ ತಂಡದ ಗೋಲು ಗಳಿಸುವ ಹಲವು ಪ್ರಯತ್ನಗಳನ್ನು ತಡೆದು ಮಿಂಚಿದರು.

ಭಾರತ ತಂಡ ತನ್ನ ಮುಂದಿನ ಪಂದ್ಯದಲ್ಲಿ ಮಯನ್ಮಾರ್‌ ಎದುರು ಪೈಪೋಟಿ ನಡೆಸಲಿದೆ.

ಹಿಂದಿನ ಲೇಖನಬಿಜೆಪಿಯಿಂದ 140 ಕ್ಷೇತ್ರದಲ್ಲಿ ರಾಜ್ಯ ನಾಯಕರ ಪ್ರವಾಸ, 7 ಬೃಹತ್ ಸಮಾವೇಶ
ಮುಂದಿನ ಲೇಖನರಾಜಕೀಯ ವ್ಯವಸ್ಥೆ ಸುಧಾರಣೆಗೆ ಮಠಾಧೀಶರು ಅಗತ್ಯ: ಸಚಿವ ಸಿ. ಸಿ. ಪಾಟೀಲ