ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಡುವೆ ಜಂಬೂಸವಾರಿ ಮೆರವಣಿಗೆಯಲ್ಲಿ ಹೆಜ್ಜೆಹಾಕುವ ಗಜಪಡೆ ಆನೆಗಳಿಗೆ ತಾಲೀಮು ಮುಂದುವರೆದಿದೆ.
ಅಂತೆಯೇ ಇಂದು ಮೈಸೂರು ಅರಮನೆಯ ಮುಂಭಾಗದ ವಸ್ತು ಪ್ರದರ್ಶನ ಆವರಣದಲ್ಲಿ ಕುಶಾಲತೋಪು ಸಿಡಿಸುವ ಮೊದಲ ತಾಲೀಮು ನಡೆಯಿತು. ಜಂಬೂಸವಾರಿ ಮೆರವಣಿಗೆ ಸಂದರ್ಭದಲ್ಲಿನ ಕುಶಾಲತೋಪು ಸಿಡಿಸುವ ವೇಳೆ ಆನೆಗಳು ಅಶ್ವಗಳು ಬೆದರದಂತೆ ತಾಲೀಮು ನಡೆಸಲಾಗುತ್ತದೆ. ಅಂತೆಯೇ ಇಂದು ಕುಶಾಲತೋಪು ಸಿಡಿಸುವ ತಾಲೀಮು ನಡೆಯಿತು.
ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ 7 ಫಿರಂಗಿ ಗಾಡಿಗಳಿಂದ ಒಟ್ಟು 21 ಬಾರಿ ಕುಶಾಲತೋಪು ಸಿಡಿಸಿ ಅಭ್ಯಾಸ ನಡೆಸಲಾಯಿತು. ತಾಲೀಮಿನಲ್ಲಿ 43 ಕುದುರೆಗಳು ಚಿನ್ನದ ಅಂಬಾರಿ ನೇತೃತ್ವ ವಹಿಸಿರುವ ಅಭಿಮನ್ಯು ನೇತೃತ್ವದ 14 ಆನೆಗಳು, ಪೋಲಿಸರು, ಅಶ್ವಾರೋಹಿ ದಳ, ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ನೂರಾರು ಜನ ಭಾಗಿಯಾಗಿದ್ದರು.
ಕುಶಾಲತೋಪು ಸಿಡಿಸುವ ವೇಳೆ ಸುಗ್ರೀವ ಹಾಗೂ ಹಿರಣ್ಯ ಆನೆ ಸ್ವಲ್ಪ ವಿಚಲಿತರಾಗಿ ಬೆದರಿದ ಘಟನೆ ನಡೆಯಿತು. ಮೊದಲ ಬಾರಿ ಹಿರಣ್ಯ ಆನೆ, ಎರಡನೇ ಬಾರಿ ಸುಗ್ರೀವ ಆನೆ ದಸರಾದಲ್ಲಿ ಭಾಗಿಯಾಗುತ್ತಿವೆ.
ತಾಲೀಮು ಕುರಿತು ಮಾತನಾಡಿದ ಅರಣ್ಯಧಿಕಾರಿ ಸೌರಭ್ ಕುಮಾರ್, ಜಂಬೂಸವಾರಿಯಲ್ಲಿ ಭಾಗಿಯಾಗುವ ಆನೆಗಳಿಗೆ ಮೊದಲ ಹಂತದ ಸಿಡಿಮದ್ದು ತಾಲಿಮು ನೀಡಲಾಯಿತು. ಎಲ್ಲಾ ಆನೆಗಳು ಸಿಡಿಮದ್ದಿನ ತಾಲೀಮಿನಲ್ಲಿ ಬೆದರಿಲ್ಲ. ಹೊಸದಾಗಿ ಬಂದಿರುವ ಒಂದೆರಡು ಆನೆಗಳು ಬೆದರಿವೆ. ನಾವು ತಾಲೀಮನ್ನ ನೀಡುವುದು ಇದೆ ಉದ್ದೇಶದಿಂದ. ಹಳೆ ಆನೆಗಳನ್ನ ಮುಂದಿನ ಸಾಲಿನಲ್ಲಿ ಹಾಕಿದ್ದೆವು. ಹೊಸ ಆನೆಗಳನ್ನ ಎರಡನೇ ಸಾಲಿನಲ್ಲಿ ನಿಲ್ಲಿಸಿದ್ದೆವು ಎಂದು ಮಾಹಿತಿ ನೀಡಿದರು.
ಎಲ್ಲಾ ಆನೆಗಳ ಅರೋಗ್ಯವು ಉತ್ತಮವಾಗಿದೆ. ಎಲ್ಲಾ ಹಂತದ ತಾಲೀಮನ್ನ ಯಶಸ್ವಿಯಾಗಿ ಮುಗಿಸುತ್ತಿವೆ. ಎರಡನೇ ಹಂತದ ಸಿಡಿಮದ್ದು ತಾಲೀಮನ್ನ ಅಕ್ಟೋಬರ್ 13ರಂದು ನಡೆಸುತ್ತೇವೆ ಎಂದು ತಿಳಿಸಿದರು.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.