ಮನೆ ಅಪರಾಧ ಕಾಂಗ್ರೆಸ್ ಮುಖಂಡ ಗಂಟಪ್ಪ ಹತ್ಯೆ

ಕಾಂಗ್ರೆಸ್ ಮುಖಂಡ ಗಂಟಪ್ಪ ಹತ್ಯೆ

0

ರಾಮನಗರ: ಕಾಂಗ್ರೆಸ್ ಮುಖಂಡ ಗಂಟಪ್ಪ(60) ಅವರನ್ನು ದುಷ್ಕರ್ಮಿಗಳು ಅವರ ತೋಟದ ಮನೆಯಲ್ಲಿ ಹತ್ಯೆ ಮಾಡಿದ್ದಾರೆ.

ಕೊಲೆಯಾದವರು ಬಿಡದಿ ತಾಲೂಕಿನ ಬಾನಂದೂರು ಗ್ರಾಮದ ನಿವಾಸಿಯಾಗಿದ್ದಾರೆ.. ಅವರು ನಿನ್ನೆ ರಾತ್ರಿ ಊಟ ಮಾಡಿ, ಭೈರವನ ದೊಡ್ಡಿ ಗ್ರಾಮದ ಸಮೀಪವಿರುವ ಅವರದ್ದೇ ತೋಟದ ಬೈಕ್ ಸರ್ವಿಸ್ ಸ್ಟೇಷನ್‌ನಲ್ಲಿ ಮಲಗಿದ್ದರು. ಈ ವೇಳೆ ರಾತ್ರಿ 11 ಗಂಟೆ ಸುಮಾರಿಗೆ ಏಕಾಏಕಿ ಒಳಕ್ಕೆ ನುಗ್ಗಿದ ದುಷ್ಕರ್ಮಿಗಳು ಗಂಟಪ್ಪ ಅವರ ಮೇಲೆ ಅಟ್ಯಾಕ್ ಮಾಡಿದ್ದಾರೆ. ಈ ವೇಳೆ ಅವರಿಂದ ತಪ್ಪಿಸಿಕೊಳ್ಳಲು ಗಂಟಪ್ಪ ಪ್ರಯತ್ನಿಸಿದ್ದಾರೆ. ಆಗ ಡ್ಯಾಗರ್‌ನಿಂದ ಹಲ್ಲೆ ಮಾಡಿದ ದುಷ್ಕರ್ಮಿಗಳು, ಗಂಟಪ ಅವರ ಹೊಟ್ಟೆ ಹಾಗೂ ತಲೆಗೆ ಡ್ರ್ಯಾಗನ್ ನಿಂದ ಚುಚ್ಚಿ ಕೊಲೆ ಮಾಡಿದ್ದಾರೆ.

ರಾತ್ರಿ ಆಗಿದ್ದರಿಂದ ಇವರ ಕಿರುಚಾಟ, ಕೂಗು ಯಾರಿಗೂ ಕೇಳಿಸಲೇ ಇಲ್ಲ. ಹೀಗಾಗಿ ಗಂಟಪ್ಪ ನಿತ್ರಾಣನಾಗಿ, ಅಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಆದರೆ ಬೆಳಗ್ಗೆ ಆಗುತ್ತಿದ್ದಂತೆಯೇ ಅಕ್ಕಪಕ್ಕದವರಿಗೆ, ಗ್ರಾಮಸ್ಥರಿಗೆ ವಿಚಾರ ಗೊತ್ತಾಗಿದೆ. ಬೆಳಗ್ಗೆ ಕೊಲೆಯಾದ ಗಂಟಪ್ಪ ಅವರ ಮೃತದೇಹವನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಗಂಟಪ್ಪ ಅವರ ಕೊಲೆಯ ಹಿಂದೆ ಜಮೀನು ವಿವಾದ ಇತ್ತಾ ಎನ್ನುವ ಶಂಕೆ ವ್ಯಕ್ತವಾಗಿದೆ. ರಾಜಕೀಯವಾಗಿಯೂ ಗುರುತಿಸಿಕೊಂಡಿದ್ದ ಇವರ ಮೇಲೆ ಕೆಲವರಿಗೆ ದ್ವೇಷ ಇದ್ದೇ ಇತ್ತು. ಇದರ ಜೊತೆಗೆ ಜಮೀನು ವಿವಾದವೂ ಇತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಗಂಟಪ್ಪ ಅವರನ್ನು ಹತ್ಯೆ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಗಂಟಪ್ಪ ಅವರ ಕೊಲೆ ಕೇಸ್ ಸಂಬಂಧ ಬಿಡದಿ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಮನೆಯವರ ಹೇಳಿಕೆ ಪಡೆದಿರುವ ಬಿಡದಿ ಪೊಲೀಸರು  ಪೊಲೀಸರು ಇದೀಗ ತನಿಖೆ ಆರಂಭಿಸಿದ್ದಾರೆ. ಪೊಲೀಸರ ತನಿಖೆ ಸಂಪೂರ್ಣವಾಗಿ ಮುಗಿದ ಬಳಿಕವಷ್ಟೇ ಗಂಟಪ್ಪ ಅವರ ನಿಖರವಾದ ಕಾರಣ ಏನು ಎನ್ನುವುದು ತಿಳಿದು ಬರಲಿದೆ.
ಇನ್ನು ಗಂಟಪ್ಪ ಅವರ ಹಂತಕರಿಗೆ ಉಗ್ರ ಶಿಕ್ಷೆ ಕೊಡಿಸಬೇಕು ಅಂತ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಇನ್ನು ಗಂಟಪ್ಪ ಅವರ ನಿಧನಕ್ಕೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಕಂಬನಿ ಮಿಡಿದಿದ್ದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.